theft; ಕುಖ್ಯಾತ ಅಂತರ್ ರಾಜ್ಯ ಮನೆಗಳ್ಳನ ಬಂಧನ, ವಸ್ತುಗಳ ವಶ
ದಾವಣಗೆರೆ, ಆ.28: ಕುಖ್ಯಾತ ಅಂತರ್ ರಾಜ್ಯ ಕಳ್ಳನೊಬ್ಬ (thief) ದಾವಣಗೆರೆಯಲ್ಲಿ 34 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದು (theft) ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಪ್ರಕರಣದ ಆರೋಪಿ ಮಂಜುನಾಥ ಅಲಿಯಾಸ್ ಕಲ್ಕೇರೆ ಮಂಜಾ, ಮಂಜಾ, (43), ಭುವನೇಶ್ವರಿ ನಗರ, ಉತ್ತರಹಳ್ಳಿ ಬೆಂಗಳೂರಿನಲ್ಲಿ ವಾಸವಿದ್ದು, ಆದರೆ ಮೂಲತಃ ರಾಣೀಪೇಟೆ ಕೃಷ್ಣಗಿರಿ ತಾಲ್ಲೂಕ್ ತಮಿಳುನಾಡು ರಾಜ್ಯದವರು ಎಂದು ತಿಳಿದು ಬಂದಿದೆ.
ಇದೇ ತಿಂಗಳ 20ರಂದು ಶಂಕರ್ ಜಿ.ಹೆಚ್ ಅವರು ಬೆಂಗಳೂರಿಗೆ ತೆರಳಿದ್ದ ಸಮಯದಲ್ಲಿ ಅವರು ವಾಸವಿದ್ದ ದಾವಣಗೆರೆಯ ವಿದ್ಯಾನಗರದಲ್ಲಿ ಕಳ್ಳತನ ನಡೆಸಿ ಪರಾರಿಯಾಗಿದ್ದನು. ಇವರು ನೀಡಿದ ದೂರಿನನ್ವಯ ದಾವಣಗೆರೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ss mallikarjun; ಎಸ್ ಎಸ್ ಮಲ್ಲಿಕಾರ್ಜುನ ರೇಣುಕಾಚಾರ್ಯ ಬೇಟಿ ವಿಚಾರ; ಸಚಿವರು ಹೇಳಿದ್ದೇನು.?
ಕದ್ದ ವಸ್ತುಗಳು:
ಆರೋಪಿ ಮಂಜುನಾಥ ಮನೆಯ ಬಾಗಿಲನ್ನು ಒಡೆದು ಮನೆಯಲ್ಲಿದ್ದ 262ಗ್ರಾಂ ಬಂಗಾರದ ಆಭರಣಗಳು, 1500ಗ್ರಾಂ ಬೆಳ್ಳಿ ಆಭರಣಗಳು, ಮತ್ತು 1,20,000 ರೂ. ನಗದು ಹಣ ಹಾಗೂ 1000 ಅಮೆರಿಕನ್ ಡಾಲರ್ ಕಳ್ಳತನ ಮಾಡಿದ್ದಾರೆ.
ಈತನನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್.ಬಿ ಬಸರಗಿ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ, ವಿದ್ಯಾನಗರ ಪೊಲೀಸ್ ಠಾಣೆಯ ಪ್ರಭಾರದಲ್ಲಿದ್ದ ಯಶವಂತ್ ಕುಮಾರ್ ಪ್ರೊ.ಡಿವೈಎಸ್ ಪಿ, ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾವತಿ.ಸಿ.ಶೇತಸನದಿ ರವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡವು ಪತ್ತೆ ಮಾಡಿ ಬೆಳ್ಳಿ, ಬಂಗಾರ ಹಣವನ್ನು ವಶಪಡಿಸಿಕೊಂಡಿದ್ದಾರೆ.