Navaratri; ಶ್ರೀ ದುಗಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ, ಸಾಮೂಹಿಕ ವಿವಾಹ

ದಾವಣಗೆರೆ, ಅ.12: ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ವತಿಯಿಂದ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ನವರಾತ್ರಿ (Navaratri) ಮಹೋತ್ಸವ ಹಾಗೂ ಪುರಾಣ ಪ್ರವಚನದ ಕಾರ್ಯಕ್ರಮವನ್ನು ಅಕ್ಟೋಬರ್ 15ರಿಂದ 24ರವರೆಗೆ ಆಯೋಜಿಸಲಾಗಿದೆ.
ಅ.15ರಂದು ಬೆಳಿಗ್ಗೆ6:30ರಿಂದ ದೀಪಾರಾಧನೆ, ಬ್ರಾಹ್ಮಿ ಮುಹೂರ್ತದಲ್ಲಿ ವಿಘ್ನೇಶ್ವರ ಘಟ್ಟಸ್ಥಾಪನ, ನವರಾತ್ರಿ ನವದುರ್ಗೆ ಪೂಜಾ ಕಾರ್ಯಗಳು ಜರುಗಲಿವೆ. ಅಂದಿನಿAದ 22ರ ವರೆಗೆ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುವುದು, ಅ.23ರಂದು ಬೆಳಿಗ್ಗೆ 10.30 ರಿಂದ ದೇವಿಗೆ ಸಿಂಹ ವಾಹನ ಅಲಂಕಾರ ಹಾಗೂ ಆಯುಧ ಪೂಜೆ, ಕುಂಬಾಭಿಷೇಕವಿದ್ದು, ಅ. 24ರಂದು ದೇವಿಗೆ ಗಜಲಕ್ಷ್ಮಿ ಅಲಂಕಾರ ಮಾಡಿ ಅಂದು ವಿಜಯದಶಮಿ ಪ್ರಯುಕ್ತ ಬನ್ನಿ ಮುಡಿಯುವ ಕಾರ್ಯಕ್ರಮ ಏರ್ಪಡಿಸಲಾಗಿದೆ.
sharan navaratri; ಅ.15ರಿಂದ ಶರನ್ನವರಾತ್ರಿ ಮಹೋತ್ಸವ
ಅಕ್ಟೋಬರ್ 25ರಂದು ಕಳಸದ ಪೂಜೆ ಹಾಗೂ ಅಂದು ಬೆಳಿಗ್ಗೆ 11:30ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಶಾಮನೂರು ಶಿವಶಂಕರಪ್ಪನವರ ಧರ್ಮಪತ್ನಿ ದಿವಂಗತ ಪಾರ್ವತಮ್ಮ ಇವರ ಜ್ಞಾಪಕವಾಗಿ ಈ ಸಾಮೂಹಿಕ ವಿವಾಹ ಹಾಗೂ ಅನ್ನ ಸಂತರ್ಪಣೆ ಜರುಗಲಿದ್ದು, ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಬೇಕಾದ ವಧು-ವರರು ಅ.20ರ ಒಳಗಾಗಿ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ದೇವಸ್ಥಾನದ ಧರ್ಮದರ್ಶಿಗಳಿಗೆ ಸಂಪರ್ಕಿಸಬಹುದು ಎಂದು ಟ್ರಸ್ಟ್ ತಿಳಿಸಿದೆ.