sharan navaratri; ಅ.15ರಿಂದ ಶರನ್ನವರಾತ್ರಿ ಮಹೋತ್ಸವ

ದಾವಣಗೆರೆ, ಅ.12: ಶ್ರೀ ಗಣಪತಿ, ಶ್ರೀ ಶಾರದಾಂಬ, ಶ್ರೀ ಚಂದ್ರಮೌಳೇಶ್ವರ ಮತ್ತು ಶ್ರೀ ಶಂಕರಾಚಾರ್ಯರ ದೇವಸ್ಥಾನದಲ್ಲಿ ಅ.15 ರಿಂದ 24ರವರೆಗೆ ಶರನ್ನವರಾತ್ರಿ (sharan navaratri) ಮಹೋತ್ಸವ ಜರುಗಲಿದೆ.

ಅಕ್ಟೋಬರ್ 14ರಂದು ಅಮಾವಾಸ್ಯೆಯ ದಿನ ಶ್ರೀ ಶಾರದಾಂಬ ಅಮ್ಮನವರ ಮೂಲ ಮೂರ್ತಿಗೆ ಬೆಳಿಗ್ಗೆ 8.30ರಿಂದ ಮಹಾಭಿಷೇಕ ಜರುಗಲಿದೆ. ನಂತರ ದೇವಿಗೆ ಜಗತ್ಪ್ರಸೂತಿ ಅಲಂಕಾರ ಮಾಡಲಾಗುವುದು. ಅ.15ರಿಂದ ಪ್ರತಿ ದಿನ ದೇವಿಗೆ ವಿವಿಧ ಅಲಂಕಾರಗಳಿಂದ ಪೂಜಿಸಲಾಗುವುದು.

Unemployment; ಗ್ರಾಮೀಣ ನಿರುದ್ಯೋಗಿಗಳಿಗೆ ಉಚಿತ ತರಬೇತಿ

ಅ.23ರಂದು ಮಹಾನವಮಿ ಆಯುಧ ಪೂಜೆ ಪ್ರಯುಕ್ತ ದೇವಿಗೆ ಸಿಂಹಾವಲಂಕಾರ ಮಾಡಿ ಸಂಜೆ 5 ರಿಂದ ವಿಶೇಷ ಪೂಜೆ ನಡೆಸಲಾಗುವುದು. ಸಂಜೆ 6 ಗಂಟೆಯಿAದ ಶ್ರೀ ಶಂಕರಾಚಾರ್ಯ ವಿರಚಿತ ಜಾಗೃತಪಂಚಕ ವಿಷಯ ಕುರಿತು ಜಗನ್ನಾಥ ನಾಡಿಗೇರ್ ಅವರಿಂದ ವಿಶೇಷ ಉಪನ್ಯಾಸ ನಡೆಯಲಿದೆ.

ಅಕ್ಟೋಬರ್ 24ರಂದು ವಿಜಯದಶಮಿ ಪ್ರಯುಕ್ತ ದೇವಿಗೆ ಗಜಲಕ್ಷ್ಮಿ ಅಲಂಕಾರ ಮಾಡಿ ಸಂಜೆ 6ರಿಂದ ದೀಪಾರಾಧನೆ, ಬನ್ನಿಮಹಾಂಕಾಳಿ ವೃಕ್ಷ ಪೂಜೆ ಮತ್ತು ಬನ್ನಿ ಮುಡಿಯುವ ಕಾರ್ಯ ಏರ್ಪಡಿಸಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!