ಸ್ಥಳೀಯ ವಿ ಒನ್ ಕಾವ್ಯಧಾರೆಯಲ್ಲಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಸಂದರ್ಶನ
ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹರಿಹರ ನಗರದಲ್ಲಿ ನಡೆಯಲಿರುವ ದಾವಣಗೆರೆ ಜಿಲ್ಲಾ 13 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಪ್ರೊ. ಸಿ ವಿ ಪಾಟೀಲ್ ಅವರ ಸಂದರ್ಶನ ದಾವಣಗೆರೆ V 1 ಸ್ಥಳೀಯ ವಾಹಿನಿಯ ಕಾವ್ಯಧಾರೆ ಕಾರ್ಯಕ್ರಮದಲ್ಲಿ ದಿನಾಂಕ : 10.03.2024 ರ ಬೆಳಿಗ್ಗೆ 11.30 ಕ್ಕೆ ಪ್ರಸಾರಗೊಂಡು ಸಂಜೆ 7 ಗಂಟೆಗೆ ಮರು ಭಿತ್ತರಗೊಳ್ಳಲಿದೆ.
ಕಾವ್ಯಧಾರೆಯ ಸಂಚಾಲಕ – ನಿರೂಪಕರಾದ ಗಂಗಾಧರ ಬಿ ಎಲ್ ನಿಟ್ಟೂರ್ ಸಂದರ್ಶಿಸಿರುವ ಈ ಕಾರ್ಯಕ್ರಮದಲ್ಲಿ ತಮ್ಮ ಸಾಹಿತ್ಯ ಕೃಷಿ, ಕೃತಿಗಳ ಒಳ – ಹೊರಹು, ವಿಷಯವಸ್ತು ಕುರಿತು ಅನುಭವ ಹಂಚಿಕೊಂಡಿರುವ ಸಾಹಿತಿ ಸಿ ವಿ ಪಾಟೀಲರು ನಾಡು – ನುಡಿ ಭಾಷೆ ಸಾಹಿತ್ಯ ಹಾಗೂ ಸಾಹಿತಿಗಳ ಜವಾಬ್ದಾರಿ ಕುರಿತು ಚಿಂತನಾ ನುಡಿಗಳನ್ನು ಆಡಿದ್ದಾರೆ.
ಸೆಟ್ ಟಾಪ್ ಬಾಕ್ಸ್ ನಂಬರ್ 102 ರಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮವನ್ನು ಸಾಹಿತ್ಯಾಭಿಮಾನಿಗಳು ವೀಕ್ಷಿಸುವಂತೆ ಕಾವ್ಯಧಾರೆ ನಿರ್ದೇಶಕರಾದ ಎಂ ಹೆಚ್ ಚಿದಾನಂದ್ ಕೋರಿದ್ದಾರೆ.