ತೋಟಗಾರಿಕೆ ಬೆಳೆಗಳ ಸಂರಕ್ಷಣೆಗೆ ಪ್ರಕೃತಿಯಲ್ಲಿಯೇ ಪರಿಹಾರವಿದೆ. ಡಾ. ಹುಲ್ಲುನಾಚೇಗೌಡ
ದಾವಣಗೆರೆ: ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಹಕಾರದೊಂದಿಗೆ, ಮೈಕ್ರೋಬಿ ಫೌಂಡೇಶನ್ ಹಾಗು ನಾರದಮುನಿ ಕೃಷಿ ಮಾಹಿತಿ ಹಾಗು ಅತ್ತಿಗೆರೆ ಗ್ರಾಮಸ್ಥರ ಸಹಯೋಗದಲ್ಲಿ ಅತ್ತಿಗೆರೆ ಗ್ರಾಮದ ಪೂಜಾರ್ ಬಸವರಾಜಪ್ಪನವರ ತೋಟದಲ್ಲಿ ನಡೆದ ಕ್ಷೇತ್ರೋತ್ಸವ ಹಾಗು ಅನ್ನದಾತರಿಗೆ ಸನ್ಮಾನ ಕಾಯ೯ಕ್ರಮದಲ್ಲಿ ಡಾ. ಕೆ. ಆರ್. ಹುಲ್ಲುನಾಚೇಗೌಡರು ಮಾತನಾಡುತ್ತಾ ತೋಟಗಾರಿಕಾ ಬಳೆಗಳನ್ನು ಉತ್ಕೃಷ್ಟವಾಗಿ ಬೆಳೆಯಲು ಸೂಯ೯ನ ಶಕ್ತಿ, ನೀರಿನ ಮಿತ ಬಳಕೆ, ಮಣ್ಣಿನ ಜೀವಿಗಳ ಸಂರಕ್ಷಣೆ, ಎರೆಹುಳು ಅಭಿವೃದ್ಧಿ , ಜೇನುನೊಣಗಳ ಸಂರಕ್ಷಣೆ, ಜೇಡರಬಲೆಗಳ ಪಾತ್ರ, ಹಕ್ಕಿ-ಪಕ್ಷಿಗಳ ಬರುವಿಕೆ, ಉತ್ತರ-ದಕ್ಷಿಣಾಭಿಮುಖವಾಗಿ ಸರಾಗವಾಗಿ ಗಾಳಿ ಬೀಸುವಿಕೆ, ತ್ಯಾಜ್ಯಗಳ ನಿವಾ೯ಹಣೆ, ತ್ಯಾಜ್ಯಗಳ ಕಳಿಯುವಿಕೆ ಇವೆಲ್ಲವುಗಳ ಒಳಗೊಂಡ ಪ್ರಕ್ರಿಯೆಯೇ ಪ್ರಾಕೃತಿಕ ಪರಿಹಾರ ಎಂದರು.
ಕೃಷಿ ಇಲಾಖೆಯ ಉಪ ನಿದೇ೯ಶಕರಾದ ಅಶೋಕ್ ಕುಮಾರ್ ರವರು ಮಾತನಾಡುತ್ತ ಇಂದು ಕೃಷಿ ಕ್ಷೇತ್ರದಲ್ಲಿ ತುಂಬಾ ಸವಾಲುಗಳಿದ್ದರು ಇಂತಹ ಸಂಸ್ಥೆಗಳ ಸಹಾರಾರದಿಂದ ನಿಮ್ಮಗಳ ಬದುಕು ಹಸನಾಗುತ್ತೇ ಎಂದರು,
ಹಿರಿಯ ಪತ್ರಕತ೯ ನಾಗರಾಜ್ ಎಸ್. ಬಡದಾಳ್ ಮಾತನಾಡುತ್ತಾ ಇಂದಿನ ಕೃಷಿಯ ಸವಾಲುಗಳಿಗೆ ಮಹದೇವಪ್ಪ ದಿದ್ದಿಗೆ ಹಾಗು ಡಾ. ಹುಲ್ಲುನಾಚೇಗೌಡರಿಂದ ಸಂಪೂಣ೯ ಪರಿಹಾರ ಸಿಗುತ್ತಿದೆ ಎಂದರು.
ಡಾ. ಎನ್.ಕೆ. ಗೌಡ ನಿ. ಕುಲಸಚಿವರು ಮಾತನಾಡುತ್ತಾ ಈ ಎರಡೂ ಸಂಸ್ಥೆಗಳಿಂದ ನಮ್ಮ ಜಿಲ್ಲೆಯ ಕೃಷಿಕರಿಗೆ ವೈಜ್ಞಾನಿಕ ಕೃಷಿಯ ಜ್ಞಾನ ಸಿಗುತ್ತಿದೆ ಎಂದರು.
ಕ್ಷೇತ್ರೋತ್ಸವದಲ್ಲಿ ಸನ್ಮಾನಿತರಾದ ಕೃಷಿ ಉದ್ದಿಮೆದಾರರು ತಮ್ಮ ಅನಿಸಿಕೆ ಹಂಚಿಕೊಂಡರು. ಕಾಯ೯ಕ್ರಮದಲ್ಲಿ ಪ್ರಜಾವಾಣಿ ಬ್ಯೂರೊ ಮುಖ್ಯಸ್ಥರಾದ ಸಿದ್ದಯ್ಯ ಹಿರೇಮಠ, ತೋಟಗಾರಿಕೆ ಇಲಾಖೆಯ ಅರುಣ್ ರಾಜ್, ದಿದ್ದಿಗೆ ಮಹದೇವಪ್ಪ, ವಿಶ್ವನಾಥ್, ಹಷ೯ , ಹರೀಶ್, ವಿಜಯಕುಮಾರ್ ಮೈಕ್ರೊಬಿ ಸಂಸ್ಥೆಯ ಪದಾದಿಕಾರಿಗಳು ಹಾಗು ಸುತ್ತಮುತ್ತಲ ಗ್ರಾಮದ ಕೃಷಿಕರುಭಾಗವಹಿಸಿ ಕಾಯ೯ಕ್ರಮ ಯಶಸ್ವಿಗೊಳಿಸಿದರು.