“ಮಾತೃ ಹೃದಯಿ ಶ್ರೀಮತಿ ಡಾ.ಪ್ರಭಾ ಮಲ್ಲಿಕಾರ್ಜುನ” ಸರಳ ಸಜ್ಜನಿಕೆ, ಸರ್ವ ಧರ್ಮ ಸಮಾನತೆಯ ಸಹೃದಯಿ, ಸ್ನೇಹಮಹಿ ಮಹಿಳೆ

prabjha

ದಾವಣಗೆರೆ: ಸಹನೆಗೆಗೆ ಮತ್ತೊಂದು ಹೆಸರು ಶ್ರೀಮತಿ ಡಾ. ಪ್ರಭಾ ಮಲ್ಲಿಕಾರ್ಜುನ ಶ್ರೀಮಂತಿಕೆ ಎಂಬುದು ಆಡಂಬರದ ಜೀವನದಲ್ಲಿ ಇಲ್ಲಿ ಬಡವರ ಸೇವೆಯಲ್ಲಿದೆ ಎಂದು ಸಮಾಜ ಸೇವೆ ಮಾಡಿ ತೋರಿಸಿಕೊಟ್ಟ ಮಮಕಾರದ ಮಹಿಳೆ ಇವರು. ಮಗುವಿನ ಪ್ರೀತಿ ತಾಯಿಗೆ ಗೊತ್ತು ಎಂಬಂತೆ ಬಡವರ ಕಷ್ಟ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಗೊತ್ತು. ಕಷ್ಟ ಎಂದು ಮನೆ ಬಾಗಿಲಿಗೆ ಬಂದರೆ ನಮ್ಮವರಂತೆ ಕಂಡು ಅವರ ಸಂಕಷ್ಟಕ್ಕೆ ಸ್ಪಂದಿಸಿ ಹೃದಯ ಗೆದ್ದಂತವರು.
ಕಳೆದ ಹಲವು ದಶಕಗಳಿಂದ ಎಲ್ಲರಿಗೂ ಉತ್ತಮ ಆರೋಗ್ಯ ಸಿಗಬೇಕೆಂದು ಹಳ್ಳಿ ಹಳ್ಳಿಗಳಿಗೆ ಭೆಟಿ ನೀಡಿ ಅವರಿಗೆ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸೆ ವ್ಯವಸ್ಥೆ ಮಾಡುತ್ತಿದ್ದಾರೆ. ಒಂದು ಪ್ರತಿಷ್ಠಿತ ರಾಜಕೀಯ ಹಿನ್ನೆಲೆ ಹೊಂದಿದ ಕುಟುಂದ ಹೆಣ್ಣು ಮಗಳಾಗಿದ್ದರು ಎಂದು ಅವರ ಸ್ವಾರ್ಥಕ್ಕಾಗಿ ಸೇವೆ ಮಾಡಿದವರಲ್ಲ. ಬಡವರ ಬದುಕು ಬದಲಾಗಬೇಕು, ಜೀವನ ಸುಧಾರಣೆಯಾಗಬೇಕು ನೆಮ್ಮದಿಯಿಂದ ಬದುಕಬೇಕೆಂದು ಅಶಕ್ತರ ಪರವಾಗಿ ಕೆಲಸ ಮಾಡಿದವರು. ಸ್ವಾಭಿಮಾನ, ಸ್ವಾರ್ಥ ಎಂಬುದನ್ನ ಬಿಟ್ಟು ಬಡವರ ಮನೆ ಬಾಗಿಲಿಗೆ ಹೋಗಿ ಆರೋಗ್ಯ ಭಾಗ್ಯ ಕರುಣಿಸುತ್ತಿದ್ದಾರೆ. ಮನುಷ್ಯ ಹುಟ್ಟಿದ ಮೇಲೆ ಒಂದು ಒಳ್ಳೆ ಕೆಲಸ ಮಾಡಬೆಕು, ನಮ್ಮ ಕೆಲಸ ನಮ್ಮ ಹೆಸರನ್ನ ಹೇಳುವಂತಿರಬೇಕೆಂದು ಸದಾ ಸಮಾಜ ಸೇವೆಯಲ್ಲಿ ತೊಡಗಿಕೊಂಡವರು ಶ್ರೀಮತಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರು.
ಬಡವರು, ರೈತರೆಂದರೆ ಪ್ರೀತಿ, ಅಪಾರ ಕಾಳಜಿ. ಮಾನವೀಯತೆಯ ಪ್ರತಿರೂಪ, ಬಾಯಿ ಮಾತಿನಲ್ಲಿ ಸಾಂತ್ವನ ಹೇಳದೇ ಬಡವರ ಹಸಿವು ನೀಗಿಸಿ ನೆಮ್ಮದಿ ನಗು ಅರಳಿಸಿದ ತಾಯಿ ಇವರು. ತಮ್ಮ ಮನೆಗೆ ಅನಾರೋಗ್ಯದಿಂದ ಬಂದ ಎಷ್ಟೋ ಜನರಿಗೆ ಉಚಿತ ಚಿಕಿತ್ಸೆ ನೀಡಿ ಮರುಜನ್ಮ ನೀಡಿದವರು. ಕೊರೊನಾ ಸಂದರ್ಭದಲ್ಲಿ ಕೋರನಾ ವಾರಿಯರ್ಸ್ ಸೇರಿ ಸಾವಿರಾರು ಬಡವರಿಗೆ ಸಹಾಯ ಮಾಡಿದವರು.
ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಸಂಸ್ಕೃತಿ ಎಂಬಂತೆ ಜಾತಿ, ಧರ್ಮ, ಬಡತನ, ಸಿರಿತನಕ್ಕಿಂತ ಸ್ನೇಹ, ಪ್ರೀತಿ ತೋರಿದ ಜನಮನ ಗೆದ್ದವರು ಇವರು. ಎಷ್ಟೋ ಮಕ್ಕಳ  ವಿದ್ಯಾಭ್ಯಾಸಕ್ಕೆ ಕೈಲಾದ ಸಹಾಯ ಮಾಡಿದವರು. ಇದೆಲ್ಲದರ ನಡುವೆ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಸದಾ ಬೆಂಬಲವಾಗಿ ನಿಂತು ಕುಟುಂಬದಲ್ಲೂ ಸಂತೋಷವಾಗಿ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದು ಒಂದು ಹೆಣ್ಣು ಸಮಾಜ ಹಾಗೂ ಕುಟುಂಬ ಎಲ್ಲ ಕಡೆ ಶಕ್ತಿಯಂತೆ ಇರಬಹುದೆಂದು ತೋರಿಸಿಕೊಟ್ಟ ಮಾದರಿ ಮಹಿಳೆ  ಎಸ್ ಎಸ್ ಕೇರ್ ಟ್ರಸ್ಟ್ ನ ಲೈಫ್ ಟ್ರಸ್ಟಿ ಶ್ರೀಮತಿ ಡಾ. ಪ್ರಭಾ ಮಲ್ಲಿಕಾರ್ಜುನ  ಇವರ ಹುಟ್ಟುಹಬ್ಬ ಹಿನ್ನೆಲೆ ಮಾದರಿ ಹೆಣ್ಣಾದ ಮಹಾತಾಯಿಗೆ ಮತ್ತೊಮ್ಮೆ ಮೊಗದೊಮ್ಮೆ  ( ಪಿ. ಆರ್.  ಮಲ್ಲಿಕಾರ್ಜುನ ಎಸ್.ಎಸ್ ) ತಂಡದಿಂದ ಹುಟ್ಟು ಹಬ್ಬದ ಶುಭಾಷಯಗಳು.

Leave a Reply

Your email address will not be published. Required fields are marked *

error: Content is protected !!