ಉಡುಪಿ : ಮಾಲಕ ತನ್ನ ಸ್ವಂತ ಬಸ್ ಚಕ್ರದಡಿ ಸಿಲುಕಿ ದಾರುಣ ಸಾವು.!
ಉಡುಪಿ : ತನ್ನ ಸ್ವಂತ ಬಸ್ ನ ಚಕ್ರದಡಿ ಸಿಲುಕಿ ಬಸ್ ಮಾಲಕ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಮಣಿಪಾಲ ಆತ್ರಾಡಿ ಬಳಿಯ ಬಡಗಬೆಟ್ಟುವಿನ ಗ್ಯಾರೇಜ್ ಒಂದರಲ್ಲಿ ನಡೆದಿದೆ.
ಮಾಂಡವಿ ಬಸ್ ಮಾಲಕ ದಯಾನಂದ್ ಶೆಟ್ಟಿ ಅವರು ರಿಪೇರಿಗೆ ನಿಲ್ಲಿಸಿದ್ದ ಬಸ್ ಅನ್ನು ಪರಿಶೀಲಿಸಲು ಗ್ಯಾರೇಜ್ ಗೆ ಬಂದಿದ್ದರು. ಈ ವೇಳೆ ಅವರು ಬಸ್ ಮುಂದೆ ನಿಂತಿರುವ ಅರಿವಿಲ್ಲದೆ ಮೆಕ್ಯಾನಿಕ್ ಬಸ್ ಚಲಾಯಿಸಿದ್ದಾನೆ. ಪರಿಣಾಮ ಮುಂದೆ ನಿಂತಿದ್ದ ದಯಾನಂದ್ ಅವರ ಮೇಲೆ ಬಸ್ ನ ಚಕ್ರಗಳು ಹರಿದು ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.