ಉಳ್ಳಾಲ : ಭೀಕರ ರಸ್ತೆ ಅಪಘಾತ ; ಬೈಕ್ ಸವಾರ, ಸಹ ಸವಾರೆ ದಾರುಣ ಸಾವು
ಉಳ್ಳಾಲ : ಚಾಲಕನ ನಿಯಂತ್ರಣ ತಪ್ಪಿದ ಬೈಕ್ ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮತ್ತು ಸಹ ಸವಾರೆ ಮೃತ ಪಟ್ಟ ಘಟನೆ ಉಳ್ಳಾಲದ ನಾಟೆಕಲ್ ಬಳಿ ನಡೆದಿದೆ.
ಬೈಕ್ ಚಾಲಕ ಯತೀಶ್ ಮತ್ತು ಬೋಂದೆಲ್ ನಿವಾಸಿ ದೀಕ್ಷಿತ್ ಎಂಬವರ ಪತ್ನಿ ನಿಧಿ(29) ಮೃತಪಟ್ಟ ದುರ್ದೈವಿಗಳು.
ನಿಧಿ ಅವರು ಆದಿತ್ಯವಾರ ಮುಡಿಪುವಿನಲ್ಲಿ ನಡೆದಿದ್ದ ಗೃಹ ಪ್ರವೇಶವೊಂದರಲ್ಲಿ ಭಾಗವಹಿಸಿ ಯತೀಶ್ ಜೊತೆ ಬೈಕಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಸಂಜೆ 7.25 ಸಮಯದಲ್ಲಿ ತಿಭೆ ಪದವು ಎಂಬಲ್ಲಿ ಅಪಘಾತ ನಡೆದಿದೆ. ಅತಿ ವೇಗದಿಂದ ಧಾವಿಸುತ್ತಿದ್ದ ಬೈಕ್ ಡಿವೈಡರ್ ನೆಗೆದು ಪಕ್ಕದ ರಸ್ತೆಗೆ ಬಿದ್ದಿದೆ. ಅಪಘಾತದ ತೀವ್ರತೆಗೆ ಬೈಕ್ ಚಾಲಕ ಯತೀಶ್ ಮತ್ತು ಸಹ ಸವಾರೆ ನಿಧಿ ರಸ್ತೆಗೆಸೆಯಲ್ಪಟ್ಟಿದ್ದಾರೆ. ಬೈಕ್ ಸವಾರ ಯತೀಶ್ ದೇವಾಡಿಗ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಇಂದು ನಿಧನ ಹೊಂದಿದ್ದಾರೆ.
ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.