ಉಡುಪಿ: ಅಪಾರ್ಟ್‌ಮೆಂಟ್ ನಿಂದ ಆಕಸ್ಮಿಕವಾಗಿ ಬಿದ್ದು ಮಹಿಳೆ ಸಾವು

ಉಡುಪಿ: ಅಪಾರ್ಟ್‌ಮೆಂಟ್ ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದು ಮಹಿಳೆಯೋರ್ವರು ಸಾವನ್ನಪ್ಪಿರುವ ದಾರುಣ ಘಟನೆ ಕುಂದಾಪುರ ಮುಖ್ಯ ರಸ್ತೆಯ ಹಳೆ ಗೀತಾಂಜಲಿ ಟಾಕೀಸ್ ಬಳಿ ನಡೆದಿದೆ.
ಮೃತರನ್ನು ಅಪಾರ್ಟ್‌ಮೆಂಟ್ ಕಟ್ಟಡದ ನಿವಾಸಿ ಲಕ್ಷ್ಮಿ ಪ್ರತಾಪ್ ನಾಯಕ್ ಎಂದು ಗುರುತಿಸಲಾಗಿದೆ.
ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಲಕ್ಷ್ಮಿ ಟೆರೇಸ್‌ಗೆ ಹೋಗಿ ಒಣಗಲು ಇಟ್ಟಿದ್ದ ತೆಂಗಿನಕಾಯಿಯನ್ನು ತರಲು ಹೋಗಿದ್ದರು. ಆಕಸ್ಮಿಕವಾಗಿ ಅವರು ಟೆರೇಸ್‌ನಲ್ಲಿ ಅಳವಡಿಸಲಾದ ಫೈಬರ್ ಶೀಟ್‌ಗೆ ಕಾಲಿಟ್ಟಿದ್ದಾರೆ. ಅದು ಜಾರಿ ಕೆಳಗೆ ಬಿದ್ದ ಪರಿಣಾಮ ತಲೆ ಮತ್ತು ಕೈಗಳಿಗೆ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾಹಿತಿ ಪಡೆದ ಕುಂದಾಪುರ ಪೊಲೀಸ್ ಠಾಣೆಯ ಸಿಬ್ಬಂದಿ, ಲಿಫ್ಟ್ ಪ್ರದೇಶದಲ್ಲಿ ಸಿಲುಕಿದ್ದ ಮೃತ ದೇಹವನ್ನು ಹೊರತೆಗೆಯಲು ಹರಸಾಸಪಟ್ಟಿದ್ದಾರೆ ಮೃತದೇಹವನ್ನು ಮೇಲಕ್ಕೆ ತರಲು ಅವರು ಲಿಫ್ಟ್ ಸುತ್ತಲೂ ಜೋಡಿಸಲಾದ ಕಬ್ಬಿಣದ ರಾಡ್ಗಳನ್ನು ಕತ್ತರಿಸಬೇಕಾಯಿತು.
ಈ ಘಟನೆ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತ ರು ನಗರದ ಲೆಕ್ಕ ಪರಿಶೋಧಕ ಪ್ರತಾಪ್ ನಾಯಕ್ ಅವರ ಪತ್ನಿಯಾಗಿದ್ದು, ಇಬ್ಬರು ಪುತ್ರರನ್ನು ಅಗಲಿದ್ದಾರೆ.