ಕಲಿಕೆಯೊಂದಿಗೆ ಕೌಶಲ್ಯ ಇಂದಿನ ಪ್ರಸ್ತುತತೆ: ಪ್ರೊ. ಬಾಬು.
ಪ್ರಪಂಚವು ಬಹಳ ವೇಗವಾಗಿ ಬದಲಾಗುತ್ತದೆ ಮತ್ತು ಈ ರೂಪಾಂತರದಲ್ಲಿ ಉದ್ಯೋಗದ ಬದಲಾವಣೆಯು ಆಗುತ್ತಿದೆ ಇದರಲ್ಲಿ ಕೌಶಲ್ಯವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಬದಲಾವಣೆಯ ಕಾಲದಲ್ಲಿ ವಿದ್ಯಾರ್ಥಿಗಳು ತಮ್ಮ ಪದವಿಯ ಕಲಿಕೆಯೊಂದಿಗೆ ಕೌಶಲ್ಯಗಳನ್ನು ಕಲಿಯುವುದು ಪ್ರಸ್ತುತವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ ವೆಂಕಟೇಶ್ ಬಾಬುರವರು ಹೇಳಿದರು.
ಅವರು ಇಂದು ನಗರದ ಹದಡಿ ರಸ್ತೆಯಲ್ಲಿರುವ ಶ್ರೀ ಮುದೇಗೌಡರ ರೇವಣಸಿದ್ದಪ್ಪ ಸ್ಕೂಲ್ ಆಫ್ ಇನ್ಫಾರ್ಮಶನ್ ಸೈನ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕೌಶಲ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳಿಗೆ ಅವಕಾಶಗಳು ವಿಪುಲ್ಲ ಆದರೆ ಅವಕಾಶಗಳನ್ನು ಬಳಸಿಕೊಳ್ಳಲು ತಾವು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಹಾಗಾಗಿ ನಿರಂತರ ಕಲಿಕೆಯೊಂದಿಗೆ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯ ಎಂದು ಹೇಳಿದರು.
ವೃತ್ತಿ ಯೋಜನೆ ಕುರಿತು ವಿವರ ನೀಡುತ್ತಾ, ವಿದ್ಯಾರ್ಥಿಗಳು ತಮ್ಮ ವೃತ್ತಿ ಆಯ್ಕೆ ಬಗ್ಗೆ ತಿಳಿದುಕೊಂಡು ನಂತರ ತಮಗೆ ಸರಿಹೊಂದುವ ವೃತ್ತಿಯನ್ನು ಆಯ್ಕೆ ಮಾಡಿ ಅದಕ್ಕೆ ಬೇಕಾಗುವ ಕೌಶಲ್ಯವನ್ನು ಬೆಳೆಸಿಕೊಂಡಾಗ ಮುಂದಿನ ಜೀವನ ದಲ್ಲಿ ಯಶಸ್ಸು ತಮ್ಮದಾಗುತ್ತದೆ ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮುನವಳ್ಳಿ ಮಠ ರವರು ಮಾತನಾಡುತ್ತಾ ಕಾರ್ಪೊರೇಟ್ ವಲಯಗಳು ನಿರೀಕ್ಷಿ ಸುವಂಥಹ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಕಾಲೇಜಿನಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರಾಯೋಗಿಕ ತರಗತಿಗಳು ಕೂಡ ವಿದ್ಯಾರ್ಥಿಗಳಿಗಾಗಿ ಆಯೋಜಿಸುವ ಗುರಿ ಹೊಂದಿರುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಅಧ್ಯಾಪಕರು ಭಾಗವಹಿಸಿದ್ದರು.