ದಾವಣಗೆರೆ ಶಾಲೆಯಲ್ಲಿ ಕೋತಿಗಳ ಕಾಟ: ಮಕ್ಕಳಿಗೆ ಕಚ್ಚಿ ಗಾಯ

ದಾವಣಗೆರೆ: ಶಾಲೆಯಲ್ಲಿ ಕೋತಿಗಳು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಬಳಿ ಇರುವ ಹೊಸೂರು ಉರ್ದು ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಬಳಿ ಇರುವ ಹೊಸೂರು ಉರ್ದು ಸರ್ಕಾರಿ ಶಾಲೆಯಲ್ಲಿ ಕೋತಿಗಳ ಕಾಟ ಹೆಚ್ಚಾಗಿದ್ದು, ನಾಲ್ವರು ವಿದ್ಯಾರ್ಥಿಗಳಿಗೆ ಕಚ್ಚಿದೆ.
ಕೋತಿಗಳು ಕಳೆದ ಮೂರು ತಿಂಗಳಿಂದ ಮಧ್ಯಾಹ್ನದ ಬಿಸಿಯೂಟದ ವೇಳೆ ಶಾಲೆಗೆ ಬಂದು, ಮಕ್ಕಳ ಮೇಲೆ ದಾಳಿ ಮಾಡುತ್ತಿದೆ. ಕೋತಿಯ ಕಾಟಕ್ಕೆ ಬೇಸತ್ತು ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳೆಲ್ಲರು ಸೇರಿ ಕೋತಿಯನ್ನು ಹಿಡಿದು ಸೂಳೆಕೆರೆ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು. ಆದರೆ ಮತ್ತೆ ಮತ್ತೆ ಶಾಲೆಗೆ ಬಂದು ಕಾಟ ನೀಡುತ್ತಿದೆ. ಕೋತಿಯ ಉಪಟಳ ಅಧಿಕವಾಗಿದ್ದು, ಆದಷ್ಟು ಬೇಗ ಅದನ್ನು ಹಿಡಿದು ಅರಣ್ಯಕ್ಕೆ ಬಿಡುವಂತೆ ಅರಣ್ಯ ಇಲಾಖೆಗೆ ಶಾಲಾ ಶಿಕ್ಷಕರು ಹಾಗೂ ಪಾಲಕರು ಒತ್ತಾಯಿಸಿದ್ದಾರೆ.