ದಾವಣಗೆರೆ ಲೋಕಸಭಾ ಚುನಾವಣೆಗೆ ಬಿ ಫಾರಂ ಪಡೆದ ಡಾ. ಪ್ರಭಾ ಮಲ್ಲಿಕಾರ್ಜುನ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ರವರ ಪರವಾಗಿ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಇಂದು ಬೆಂಗಳೂರಿನ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರ ಕಚೇರಿಯಲ್ಲಿ ಬಿ ಫಾರಂ ಪಡೆದರು.

ಹೊನ್ನಾಳಿ, ಚನ್ನಗಿರಿ ಶಾಸಕರು ಬಿ ಫಾರಂ ಪಡೆಯುವ ವೇಳೆ ಸಚಿವರ ಜೊತೆ ಹಾಜರಿದ್ದರು.


 
                         
                       
                       
                       
                      