SUCI ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಕಾಮ್ರೆಡ್ ಅಣಬೇರು ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಕೆ

submission

ದಾವಣಗೆರೆ: ‘ಇಂದು ದೇಶದಲ್ಲಿ ಸ್ವಾರ್ಥದ ರಾಜಕೀಯ ನಡೆಯುತ್ತಿದೆ, ಕೇವಲ ಸ್ವ ಹಿತಾಸಕ್ತಿಗಾಗಿ, ಕುಟುಂಬದ ಬೆಳವಣಿಗಾಗಿ, ಆಸ್ತಿ ರಕ್ಷಣೆಗಾಗಿ ರಾಜಕಾರಣ ನಡೆಯುತ್ತಿದೆ’ ಎಂದು SUCI (C) ಪಕ್ಷದ ಅಭ್ಯರ್ಥಿ ಕಾಮ್ರೆಡ್ ಅಣಬೇರು ತಿಪ್ಪೇಸ್ವಾಮಿ ಹೇಳಿದರು,
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಬೆಳಗ್ಗೆ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ಭಗತ್ ಸಿಂಗ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು, ಇದಕ್ಕೆ ಪರ್ಯಾಯ ಶಕ್ತಿಯಾಗಿರುವ, ಜನ ಹೋರಾಟಗಳಲ್ಲಿ ಭರವಸೆ ಇಟ್ಟಿರುವ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯಾಗಿ ಉಮೇದುವಾರಿಕೆಯನ್ನು ಸಲ್ಲಿಸುತ್ತಿದ್ದು ಜನ SUCI (C) ಪಕ್ಷವನ್ನು ಬೆಂಬಲಿಸಬೇಕೆಂದು ಕೋರಿದರು.

ರಾಜ್ಯ ಸಮಿತಿಯ ಸದಸ್ಯರಾದ ಕಾಮ್ರೇಡ್ ಬಿ ಆರ್ ಅಪರ್ಣ ಅವರು ಮಾತನಾಡಿ, ಇಂದು ದೇಶದಲ್ಲಿ ಎರಡು ರೀತಿಯ ರಾಜಕೀಯವನ್ನು ಕಾಣುತ್ತಿದ್ದೇವೆ, ಒಂದು ಸ್ವತಂತ್ರ ಸಂಗ್ರಾಮದಲ್ಲಿ ಹೋರಾಡಿ ಪ್ರಾಣಾರ್ಪಣೆ ಮಾಡಿದಂತಹ ಶಹೀದ್ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್ ರಂತವರ ಜನಪರವಾದ ರಾಜಕೀಯ, ಅವರ ರಾಜಕೀಯ ಉದ್ದೇಶವೇನೆಂದರೆ ಸ್ವತಂತ್ರ ಭಾರತದಲ್ಲಿ ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ ಆರೋಗ್ಯ ಉದ್ಯೋಗ ಸಿಗಬೇಕು, ಯಾರೂ ಕೂಡ ಹಸಿವಿನಿಂದ ಅಪೌಷ್ಟಿಕತೆಯಿಂದ ಸಾಯಬಾರದು, ದುಡಿಯುವ ಜನ ಅಧಿಕಾರ ನಡೆಸಬೇಕೆಂಬುದು ಅವರ ಕನಸಾಗಿತ್ತು.

ಅಂತಹ ಕನಸನ್ನ ನನಸು ಮಾಡುವ ನೈಜ ರಾಜಕೀಯವನ್ನು ಇಂದು ನಾವು ಮಾಡುತ್ತಿದ್ದೇವೆ, ಮತ್ತೊಂದು ರಾಜಕೀಯ ಕಾಂಗ್ರೆಸ್ ಬಿಜೆಪಿ ಯಂತ ಪಕ್ಷಗಳು ದುಡಿಯುವ ಜನಗಳನ್ನು ಕಡೆಗಣಿಸಿ ದೇಶದ ಬಂಡವಾಳಿಗರ ಪರ ನಡೆಸುತ್ತಿರುವ ಸ್ವಾರ್ಥದ ರಾಜಕೀಯ, ಇಂತಹ ಸ್ವಾರ್ಥ ರಾಜಕೀಯವನ್ನು ಸೋಲಿಸಬೇಕು ನೈಜ ಕಾರ್ಮಿಕರ ಪರವಾಗಿರುವ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು, ನಂತರ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಮೆರವಣಿಗೆಯ ಮೂಲಕ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಗೆ ತೆರಳಿ ಉಮೆದುವಾರಿಕೆಯನ್ನು ಸಲ್ಲಿಸಲಾಯಿತು,

ಈ ಸಂದರ್ಭದಲ್ಲಿ ಎಸ್ ಯು ಸಿ ಐ (ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳ್, ಮಂಜುನಾಥ್ ಕುಕ್ಕುವಾಡ,ಮಧು ತೊಗಲೇರಿ, ಭಾರತಿ, ಮಹಾಂತೇಶ್, ಪರಶುರಾಮ್, ಪ್ರಕಾಶ್, ಅನಿಲ್, ಪೂಜಾ, ನಾಗಸ್ಮಿತ, ಕಾವ್ಯ, ಹರಿಪ್ರಸಾದ್, ರಾಜು, ಹಾಗೂ ಬೆಂಬಲಿಗರಾದ ನಿಂಗಪ್ಪ, ಮಂಜಪ್ಪ, ಲೋಕೇಶ್ ನೀರ್ಥಡಿ, ನಾಗರಾಜ್ ಅರ್ ಜಿ ಹಳ್ಳಿ , ಚಂದ್ರಶೇಖರಪ್ಪ ಕುಕ್ಕುವಾಡ, ಮಂಜುಳಾ ಹರಿಹರ, ನಾಗೇಶ್ ಬಿಎನ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!