ದಾವಣಗೆರೆ ವಿಶ್ವವಿದ್ಯಾನಿಲಯದ ನೂತನ ಸಿಂಡಿಕೇಟ್ ಸದಸ್ಯರುಗಳಿಗೆ ಅಭಿನಂದನಾ ಕಾರ್ಯಕ್ರಮ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ನೂತನ ಸಿಂಡಿಕೇಟ್ ಸದಸ್ಯರುಗಳಿಗೆ ಅಭಿನಂದನಾ ಸಭೆ ನವೆಂಬರ್ 25 ಸೋಮವಾರ ಆಯೋಜಿಸಲಾಗಿತ್ತು.
ದಾವಣಗೆರೆ ಖಾಸಗಿ ಪದವಿ ಕಾಲೇಜು ಆಡಳಿತ ಮಂಡಳಿಗಳ ಮುಖ್ಯಸ್ಥರುಗಳಿಗೆ ಹಾಗೂ ಪ್ರಾಂಶುಪಾಲರುಗಳಿಂದ ಬಿಐಇಟಿ ಕಾಲೇಜಿನ ಪ್ರಾಂಶುಪಾಲರ ಕಚೇರಿ ಆವರಣದಲ್ಲಿ ಸಭೆಯನ್ನು ಕರೆಯಲಾಗಿತ್ತು.
ನೂತನ ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರುಗಳಾದ ಡಾ. ಜಿ.ಕೆ. ಪ್ರೇಮ, ಶ್ರೀ ದ್ಯಾಮಪ್ಪ, ಶ್ರೀ ಶಬೀರ್ ಅಲಿಖಾನ್, ಶ್ರೀ ಪ್ರಶಾಂತ್. ಆರ್ ಟಿ, ಡಾ. ಪ್ರಶಾಂತ. ಎನ್ ಸಿ ರವರನ್ನು ಅಭಿನಂದಿಸಲಾಯಿತು.
ಡಾ. ಹೆಚ್. ಬಿ. ಅರವಿಂದ್, ಪ್ರಾಚಾರ್ಯರು ಬಿಐಇಟಿ ಕಾಲೇಜು, ಪ್ರೋ. ವೈ ವೃಷಬೇಂದ್ರಪ್ಪ ನಿರ್ದೇಶಕರು, ಬಿಐಇಟಿ ಕಾಲೇಜು, ಪ್ರೋ. ಸಿ. ಹೆಚ್. ಮುರಿಗೇಂದ್ರಪ್ಪ ಮಾಜಿ ಸಿಂಡಿಕೇಟ್ ಸದಸ್ಯರು, ದವನ್ ಹಾಗೂ ನೂತನ ಸಂಸ್ಥೆ ಆಡಳಿತ ಮಂಡಳಿಯ ವೀರೇಶ್ ಪಟೇಲ್ ಇವರುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆಡೆಯಿತು.
ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಸಂಪಣ್ಣ ಮುತಾಲಿಕ್, ಬಿಐಇಟಿ ಪ್ರಾಂಶುಪಾಲರಾದ ಡಾ. ಅರವಿಂದ್ ಹೆಚ್.ಬಿ, ದಾವಿವಿ ಮಾಜಿ ಸಿಂಡಿಕೇಟ್ ಸದಸ್ಯರಾದ ಪ್ರೊ. ಸಿ ಎಚ್ ಮುರಿಗೇಂದ್ರಪ್ಪ ನವರು ಭಾಗವಹಿಸಿದ್ದರು.