Congress: ಸಿಕ್ಕ ಅವಕಾಶದಲ್ಲಿ ಜನ ಸೇವೆ ಮಾಡಿ; ಶಾಸಕ ಶಿವಗಂಗ ಬಸಣ್ಣಗೆ ಸಾಗರ್ ಎಲ್ ಎಂ ಹೆಚ್ ಕಿವಿಮಾತು

congress mla vs congress youths fight

ದಾವಣಗೆರೆ: (Congress) ಅತ್ಯಂತ ಕಿರಿಯ ವಯಸ್ಸಲ್ಲಿ ಶಾಸಕರಾಗಿದ್ದು ಸಿಕ್ಕ ಅವಕಾಶದಲ್ಲಿ ಉತ್ತಮ ಜನಸೇವೆ ಮಾಡಿ ಎಂದು ಶಾಸಕ ಬಸವರಾಜು ವಿ ಶಿವಗಂಗಾ ಅವರಿಗೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಕಾರ್ಯದರ್ಶಿ ಸಾಗರ್ ಎಲ್ ಹೆಚ್ ಕಿವಿಮಾತು ಹೇಳಿದ್ದಾರೆ.

ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ಅವರ ಬಗ್ಗೆ ಮಾತನಾಡುವ ಮೊದಲು ಸ್ವಲ್ಪ ಯೋಚನೆ ಮಾಡಬೇಕು . ತಾವು ಮಹಾನಗರ ಪಾಲಿಕೆ ಸದಸ್ಯರಾಗಿದ್ದು ಹೇಗೆ ಎಂದು ಹಿಂದಿರುಗಿ ನೋಡಿ . ಮಹಾನಗರ ಪಾಲಿಕೆ ಸದಸ್ಯರಾದ ವೇಳೆ ಜನರ ಕೈಗೆ ಸಿಗುತ್ತಿರಲಿಲ್ಲ, ತಮ್ಮ ಆಡಳಿತಾವಧಿಯಲ್ಲಿ ಎಷ್ಟು ಅಭಿವೃದ್ಧಿ ಕೆಲಸಗಳಾಗಿವೆ ಎಂದು ಪ್ರಶ್ನೆ ಮಾಡಿದ್ದಾರೆ.

ದೊಡ್ಡವರ ಬಗ್ಗೆ ಮಾತನಾಡಿದರೆ ದೊಡ್ಡವರಾಗುತ್ತೇವೆ ಎಂದು ತಿಳಿದುಕೊಂಡರೆ ತಪ್ಪು, ಹಿರಿಯರ ಮಾರ್ಗದರ್ಶನದಲ್ಲಿ ಸಾಗಿದರೆ ಉತ್ತಮ ಎಂದು ಸಲಹೆ ನೀಡಿದ್ದಾರೆ.

ರಾಜಕೀಯ ಬೆಳವಣಿಗೆಯಲ್ಲಿ ನಡೆದ ವಿದ್ಯಮಾನಗಳಿಂದ ಜನರ ಮಾಡಿದ ಆಶೀರ್ವಾದದಿಂದ ಶಾಸಕರಾಗಿದ್ದೀರಾ. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಜನರ ಸೇವೆ ಮಾಡಿ ಅಭಿವೃದ್ಧಿ ಕೆಲಸ ಮಾಡಿ ಎಂದಿದ್ದಾರೆ.

ಎಸ್ ಎಸ್ ಮಲ್ಲಿಕಾರ್ಜುನ ಅವರು 3 ಬಾರಿ ಸಚಿವರಾಗಿದ್ದಾರೆ, ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಇಂದು ಮಾತನಾಡುತ್ತಿವೆ ದಾವಣಗೆರೆ ಜಿಲ್ಲೆಯನ್ನು ನಿರೀಕ್ಷೆಗೂ ಮೀರಿ ಅಭಿವೃದ್ಧಿ ಮಾಡುತ್ತಿದ್ದಾರೆ. ಸಚಿವರ ಕಾರ್ಯವೈಖರಿ ಬಗ್ಗೆ ಮಾತನಾಡುವ ಮೊದಲು ಸ್ವಲ್ಪ ಯೋಚನೆ ಮಾಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿ . ಯುವ ರಾಜಕಾರಣಿಯಾಗಿದ್ದು ಅತೀ ವೇಗ ಒಳ್ಳೆಯದಲ್ಲ ಎಂದು ತಿಳಿಹೇಳಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!