Channagiri MLA: ಚನ್ನಗಿರಿ ಶಾಸಕ ಒಬ್ಬ ಮೆಂಟಲ್.! ಶಿವಗಂಗಾ ಬಸವರಾಜ್ ಪತ್ರಕ್ಕೆ ಸಚಿವರಿಂದ ಮೊದಲ ಪ್ರತಿಕ್ರಿಯೆ

ದಾವಣಗೆರೆ: (Channagiri MLA) ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಸಿಎಂ ಹಾಗೂ ಡಿಸಿಎಂ ಅವರಿಗೆ ಬರೆದ ಪತ್ರಕ್ಕೆ ದಾವಣಗೆರೆಯ ಬಸಾಪುರದಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮಾಧ್ಯಮದವರಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಶಾಸಕ ಶಿವಗಂಗಾ ಬಸವರಾಜ್ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರನ್ನು ಸಚಿವ ಸ್ಥಾನದಿಂದ ಬದಲಾವಣೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರುಗಳಿಗೆ ಪತ್ರ ಬರೆದು ಸ್ವಪಕ್ಷದ ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ಚನ್ನಗಿರಿ ಶಾಸಕರ ಸಹೋದರ ಶಿವಗಂಗಾ ಶ್ರೀನಿವಾಸ ಕೂಡ ಶಾಸಕರ ಹೇಳಿಕೆಗಳಿಗೆ ಹಾಗೂ ಪತ್ರದ ವಿಚಾರಕ್ಕೆ ಬುದ್ದಿ ಹೇಳಿದ್ದರು. ಹಾಗೇ ದಾವಣಗೆರೆ ಸಂಸದರು ಕೂಡ ಶಾಸಕರ ಹೇಳಿಕೆಯ ವಿರುದ್ದ ನಯವಾಗಿ ತಮ್ಮ ಅಸಮಾಧಾನದ ಮಾತುಗಳಾಡಿದ್ದರು. ಇಂದು ಬಸಾಪುರ ಗ್ರಾಮದಲ್ಲಿ ನಡೆದ ಮಹೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರ ಪ್ರಶ್ನೆಗೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಖಾರವಾಗಿ ಶಾಸಕರ ವಿರುದ್ದ ಹರಿಹಾಯ್ದರು.
ಅವನೊಬ್ಬ ಮೆಂಟಲ್, ಮೊದಲು ಅಣ್ಣನಿಗೆ ಮರ್ಯಾದೆ ಕೊಡಲು ಕಲಿಯಲಿ, ಮೊದಲು ಅಣ್ಣ ನಂತರ ಇವರು, ಪಾಲಿಕೆಯಲ್ಲಿ ಗೆದ್ದಿದ್ದು ಹೇಗೆ ಎಂದು ತಿರುಗಿ ನೋಡಲಿ, ಮನೆಯಲ್ಲಿ ಅಣ್ಣ ತಮ್ಮರಿಗೆ ಮರ್ಯಾದೆ ಕೊಡುವುದನ್ನ ಕಲಿಯಲಿ ಎಂದು ಹೇಳಿದರು.