ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ಹಸಿರು ದಿನ ಆಚರಣೆ

ದಾವಣಗೆರೆ: ದೇಶದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸು ರವರ ಜನ್ಮ ದಿನದ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ಹಸಿರು ದಿನವನ್ನಾಗಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಬಿ.ಮಂಜಪ್ಪರವರು ಸಸಿಗಳನ್ನು ನೀಡುವುದರ ಮೂಲಕ ಉದ್ಘಾಟಿಸಿದರು ನಂತರ ಮಾತನಾಡಿದ ಅವರು ದಿವಂಗತ ರಾಜೀವ್ ಗಾಂಧಿಯವರು ದೇಶದ ಅಭಿವೃದ್ಧಿಯ ಹರಿಕಾರಕರು,ಡಿಜಿಟಲ್ ಕ್ರಾಂತಿಕಾರರು,ಹಾಗೂ ದಿವಂಗತ ದೇವರಾಜ್ ಅರಸು ರವರು ಹಿಂದುಳಿದ ವರ್ಗಗಳ ಹರಿಕಾರಕರು ಬಡವರ ಬಂಧು ಈ ಇಬ್ಬರ ಜನ್ಮ ದಿನ ಒಂದೇ ದಿನ ಆಚರಿಸುತ್ತಿರುವುದು ನಮ್ಮ ಸೌಭಾಗ್ಯವೇ ಸರಿ ಎಂದು ಅಭಿಪ್ರಾಯ ಪಟ್ಟರು.
ಕೆಪಿಸಿಸಿ ವಕ್ತಾರರಾದ ಡಿ.ಬಸವರಾಜ್ ರವರು ಮಾತನಾಡಿ ದೇಶದಲ್ಲಿ ಇಷ್ಟೊಂದು ಮಟ್ಟಿಗೆ ಡಿಜಿಟಲ್ ಕ್ಷೇತ್ರದಲ್ಲಿ ಹಾಗೂ ತಾಂತ್ರಿಕ ಶಿಕ್ಷಣದಲ್ಲಿ ಇಂದು ಮುಂದುವರೆಯುತ್ತಿದೆ ಅಂದರೆ ಅದಕ್ಕೆ ಕಾರಣೀಕರ್ತರು ನಮ್ಮ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಹಾಗೂ ನಮ್ಮ ರಾಜ್ಯ ಕಂಡ ಅಪರೋಪದ ಧೀಮಂತ ನಾಯಕ ದಿವಂಗತ ದೇವರಾಜ್ ಅರಸ್ ಈ ಇಬ್ಬರ ಮಾರ್ಗದರ್ಶನದಲ್ಲಿ ನಾವು ಸಾಗಬೇಕಾಗಿದೆ ಎಂದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಅಧ್ಯಕ್ಷ ರಾಘವೇಂದ್ರ ಗೌಡ ಮಾತನಾಡಿ ದೇಶದ ಯುವ ಜನರ ಆಶಾಕಿರಣವಾಗಿದ್ದ ರಾಜೀವ್ ಗಾಂಧಿಯವರು ಯುವಕರು ದೇಶದ ಅಭಿವೃದ್ಹಿಯಲ್ಲಿ ಪಾಲ್ಗೊಳ್ಳಬೇಕೆಂದು ಯುವಕರಿಗೆ ಮತದಾನದ ಹಕ್ಕನ್ನು ನೀಡಿದವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ರವರು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಮನೆಮಾತಾದವರು ಇಂಥಾ ರಾಜಕಾರಣಿಗಳು ಇಂದಿನ ಕಾಲಘಟ್ಟದಲ್ಲಿ ಕಾಣಸಿಗುವುದು ಅಪರೂಪವೇ ಸರಿ ಆದ್ದರಿಂದ ಈ ಇಬ್ಬರು ಮಹಾನ್ ನಾಯಕರ ಜನ್ಮ ದಿನವನ್ನು ಇನ್ನು ಮುಂದೆ ಪ್ರತಿವರ್ಷ ಹಸಿರು ದಿನವನ್ನಾಗಿ ಆಚರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಎ. ನಾಗರಾಜ್,ಅಯೂಬ್ ಪೈಲ್ವಾನ್,ಚಮನ್ ಸಾಬ್,ಇಂಟಕ್ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ್,ಮೊಹಮ್ಮದ್ ಜಿಕ್ರಿಯಾ,ಸಂಘಟನೆಯ ಮಾಯಕೊಂಡ ಬ್ಲಾಕ್ ಅಧ್ಯಕ್ಷ ಮಂಜುನಾಥ್ ಸ್ವಾಮಿ,ಮಹಬೂಬ್ ಬಾಷಾ,ಹರೀಶ್ ಕೆ.ಎಲ್,ಇನ್ನಿತರರು ಭಾಗವಹಿಸಿದ್ದರು ಭಾಗವಹಿಸಿದ್ದ ಎಲ್ಲಾ ಅತಿಥಿಗಳಿಗೆ ಒಂದೊಂದು ಸಸಿಯನ್ನು ಉಡುಗೊರೆಯಾಗಿ ನೀಡಲಾಯಿತು
