ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆ ಎಸ್ ಈಶ್ವರಪ್ಪ ಮುಖಾಮುಖಿ.! ಯಾಕೆ ಗೊತ್ತಾ.?

ಬೆಂಗಳೂರು: ಮಾಧ್ಯಮಗಳ ಮುಂದೆ ಒಬ್ಬರ ಮೇಲೊಬ್ಬರು ಕೆಸರೆರಚಾಟ ನಡೆಸುವ ಈ ರಾಜಕೀಯ ಮಂದಿ ಎದುರಿಗೆ ಸಿಕ್ಕಾಗ ಮಾತ್ರ ಭಾಯಿ-ಭಾಯಿ ಒಂದೆ ಎಂಬಂತಾಗುತ್ತಾರೆ!
ರಾಜಕೀಯದ ಭ್ರಷ್ಟಾಚಾರವನ್ನು ಹೊರಗೆಳೆದು ಒಬ್ಬರನ್ನೊಬ್ಬರು ತುಳಿದು ಬೆಳೆಯಲು ಹೊಂಚು ಹಾಕುವ ರಾಜಕಾರಣಿಗಳು ಎದುರಾಳಿ ಮುಂದೆ ಬಂದಾಗ ಮಾತ್ರ ತಾವೆಲ್ಲಾ ಒಂದೇ, ಪಕ್ಷ, ರಾಜಕಾರಣ ಮಾತ್ರ ಬೇರೆ ಎನ್ನುತ್ತಾರೆ.
ಈ ಇಂತಹದ್ದೇ ಉದಾಹರಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಉದಾಹರಣೆಯಾಗಿದ್ದಾರೆ. ಎದುರಿಗೆ ಸಿಕ್ಕು ಕೈಕುಲುಕಿ ಮದುವೆ ಸಮಾರಂಭದಲ್ಲಿ ನಗೆ ಬೀರಿ, ಫೋಟೊಗೆ ಫೋಸ್ ಕೂಡ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮುಖ್ಯಮಂತ್ರಿಗಳ ಮಾಜಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಹಿರಿಯ ಅಧಿಕಾರಿ ರಾಮಯ್ಯ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಸಚಿವ ಈಶ್ವರಪ್ಪ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿಯಾಗಿದ್ದರು.