ಗ್ರಾಮದಲ್ಲಿ 11 ಅಡಿ ಉದ್ದದ ಹೆಬ್ಬಾವು: ಬೆಚ್ಚಿ ಬಿದ್ದ ಗ್ರಾಮಸ್ಥರು

ಶಿವಮೊಗ್ಗ :ದಟ್ಟ ಕಾಡಿನ ನಡುವೆ ‌ಇರಬೇಕಾದ ಹೆಬ್ಬಾವು, ಇಂದು ಊರಿಗೆ ಲಗ್ಗೆ‌ ಇಟ್ಟಿತ್ತು. 11 ಅಡಿಗೂ ಉದ್ದದ ಹೆಬ್ಬಾವು ಕಂಡು ಜನರು ಬೆಚ್ಚಿಬಿದ್ದಿದ್ದಾರೆ.

ಹೌದು ಶಿವಮೊಗ್ಗ ಜಿಲ್ಲೆ ‌ಸಾಗರ ತಾಲೂಕಿನ ಆವಿನಹಳ್ಳಿ‌ ಗ್ರಾಮ ಪಂಚಾಯತ್ ‌ವ್ಯಾಪ್ತಿಯಲ್ಲಿ ಹೆಬ್ಬಾವು ಕಂಡು‌ಬಂದಿದೆ.

ಹಿರೆಮತ್ತೂರು ಗ್ರಾಮದ ಮನೆಯೊಂದರ ಪಕ್ಕದಲ್ಲೇ ಹೆಬ್ಬಾವು ‌ಬಂದಿದೆ.

  1. ಹೆಬ್ಬಾವು ಬಂದಿರುವ ವಿಷಯ ತಿಳಿದು ಜನರು ಹೆಬ್ಬಾವು ನೋಡಲು ಮುಗಿ‌ಬಿದ್ದಿದ್ದರು. ಹೆಬ್ಬಾವು ಬುಸುಗುಟ್ಟುವ ಸದ್ದಿಗೆ‌ ಬೆದರಿದರು.

ತಕ್ಷಣ‌ ಅರಣ್ಯ ‌ಇಲಾಖೆ‌ ಸಿಬ್ಬಂದಿ ಗೆ‌ ವಿಷಯ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ‌ಬಂದ ಅರಣ್ಯ ಇಲಾಖೆ ಸಿಬ್ಬಂದಿ‌‌ ಗ್ರಾಮಸ್ಥರ ಸಹಕಾರದಿಂದ‌ ಹೆಬ್ಬಾವು ಹಿಡಿಯುವಲ್ಲಿ ಯಶಸ್ವಿಯಾಗಿ ದ್ದಾರೆ. ನಂತರ ಹೆಬ್ಬಾವನ್ನು ಶರಾವತಿ ಅಭಯಾರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ.

Leave a Reply

Your email address will not be published. Required fields are marked *

error: Content is protected !!