ಪಾಲಿಕೆ ಮುಂಬಾಗದ ರೈಲ್ವೆ ಬ್ರಿಡ್ಜ್ ಬಳಿಯ ನೀರು ನಿಲ್ಲುವ ಕಾಮಗಾರಿಯಿಂದ ಮುಕ್ತಿ ಸಿಕ್ಕಿತ್ತು ಎಂದಿದ್ದ ಜನತೆಗೆ ಮತ್ತದೆ ಸಂಕಷ್ಟ
ದಾವಣಗೆರೆ: ಮಹಾನಗರ ಪಾಲಿಕೆ ಮುಂಭಾಗದ ರೈಲ್ವೇ ಅಂಡರ್ಪಾಸ್ ಸಮಸ್ಯೆಗೆ ಇತ್ತೀಚೆಗೆ ನಡೆದ ಕಾಮಗಾರಿಯಿಂದ ಇನ್ನೇನು ಮುಕ್ತಿ ಸಿಕ್ಕಿತು ಎಂದು ನಿರಾಳರಾಗಿದ್ದ ನಗರದ ಜನತೆಗೆ ಮತ್ತದೆ ಸಂಕಷ್ಟ ಎದುರಾಗಿದೆ.
ಮೂರ್ನಾಲ್ಕು ದಶಕಗಳ ಸಮಸ್ಯೆಯಾಗಿದ್ದ ಪಾಲಿಕೆ ಮುಂಭಾಗದ ರೈಲ್ವೆ ಅಂಡರ್ ಪಾಸ್ ಗೆ
ಇಂದಿನ ಮೇಯರ್ ಎಸ್.ಟಿ. ವೀರೇಶ್ ನೇತೃತ್ವದಲ್ಲಿ ೪೨ ಲಕ್ಷಕ್ಕೆ ಟೆಂಡರ್ ಕರೆದು ವೈಜ್ಞಾನಿಕ ತಂತ್ರಜ್ಞಾನ ಇರುವ ಮೋಟಾರ್ ಪಂಪ್ಗಳನ್ನು ಅಳವಡಿಸಿದರೂ ಸಹ ಮಳೆಗಾಲದಲ್ಲಿ ಮೊಣಕಾಲುದ್ದ ನೀರು ನಿಲ್ಲುತ್ತಿದ್ದ ಆ ದಿನಗಳ ಸಮಸ್ಯೆಗೇನು ಮುಕ್ತಿ ಸಿಕ್ಕಿಲ್ಲ.
ಮಳೆ ಬಂತೆಂದರೆ ಸಾಕು ಪಾಲಿಕೆ ಎದುರಿಗಿನ ರೈಲ್ವೇ ಅಂಡರ್ಪಾಸ್ನಲ್ಲಿ ಮೊಣಕಾಲುದ್ದ ನೀರು ನಿಂತು, ಪಾದಚಾರಿಗಳಿಗೆ, ವಾಹನ ಸಂಚಾರಕ್ಕೆ ಅಡ್ಡಿವುಂಟಾಗುತ್ತಿತ್ತು. ಈಗಲೂ ಸರ್ಕಾರದ ಹಣ ಖರ್ಚು ಮಾಡಿ ಕಾಮಗಾರಿ ನಡೆಸಿದರೂ ಸಮಸ್ಯೆಯಂತೂ ಪರಿಹಾರ ಕಂಡಿಲ್ಲದ ಕಾರಣ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.