ಚಾಕೋಲೆಟ್ ಆಸೆ ತೋರಿಸಿ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ

A 7-year-old girl was raped after showing her desire for chocolate

ಬಾಲಕಿ ಮೇಲೆ ಅತ್ಯಾಚಾರ

ದಾವಣಗೆರೆ: ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ 7 ವರ್ಷದ ಬಾಲಕಿಯನ್ನು ಅದೇ ಗ್ರಾಮದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
2ನೇ ತರಗತಿ ಓದುತ್ತಿದ್ದ ಬಾಲಕಿಗೆ ರಜೆ ಇದ್ದುದರಿಂದ ಬಾಲಕಿಯ ತಾಯಿ ಬಾಲಕಿಯನ್ನು ಸಾಕು ತಂದೆಯ ಮನೆಯಲ್ಲಿ ಬಿಟ್ಟು ಕೂಲಿಗೆ ಹೋಗಿದ್ದರು. ಆ ವೇಳೆ ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿದ ನಾಗರಾಜ (28) ಗ್ರಾಮದ ದೇವಾಲಯದ ಸಮೀಪದ ಮನೆಯೊಂದರಲ್ಲಿ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರವೆಸಗಿದ್ದಾನೆ.
ಬಾಲಕಿಯ ತಾಯಿ ಮಧ್ಯಾಹ್ನ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ತಲೆ ಮರೆಸಿಕೊಂಡಿದ್ದು, ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!