ಶಿವರಾತ್ರಿಯಂದು `ಶಿವಸ್ಮರಣೆ ನೃತ್ಯ ಜಾಗರಣೆ’
ದಾವಣಗೆರೆ: ನಮನ ಅಕಾಡೆಮಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಇದೇ ಫೆ.18ರಂದು ಶಿವಸ್ಮರಣೆ ನೃತ್ಯ ಜಾಗರಣೆ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಸಂಸ್ಥಾಪಕ ರಾಯ್ದರ್ಶಿ ವಿದೂಷಿ ಮಾದವಿ ಡಿ.ಕೆ. ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಂಗ್ ರಸ್ತೆಯಲ್ಲಿನ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ರಾತ್ರಿ 9.30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಶ್ರೀ ಶಂಕರ ಸೇವಾ ಸಂಘದ ಅಧ್ಯಕ್, ಡಾ.ಬಿ.ಟಿ. ಅಚ್ಯುತ್, ನಮನ ಅಕಾಡೆಮಿ ಗೌರವಾಧ್ಯಕ್ಷ ಡಾ.ಎ.ಎಂ. ಶಿವಕುಮಾರ್, ಸಲಹಾ ಸಮಿತಿ ಮುಖ್ಯಸ್ಥ ದಿನೇಶ್ ಕೆ.ಶೆಟ್ಟಿ ಮುಖ್ಯ ಅತಿಥಿಗಳಾಗಿರಲಿದ್ದಾರೆ ಎಂದರು.
10 ವಿದ್ಯಾರ್ಥಿಗಳು ನಾಲ್ಕು ಕಡೆ ಶಿವಸ್ಮರಣೆ ನೃತ್ಯ ನಡೆಸಿಕೊಡಲಿದ್ದಾರೆ. ರಾತ್ರಿ 9.30ಕ್ಕೆ ಶ್ರೀ ಶಾರದಾಂಬ ದೇವಸ್ಥಾನ, 11ಕ್ಕೆ ಶ್ರೀ ಕೂಡಲೇ ಶಂಕರ ಮಠ, 12.30ಕ್ಕೆ ಶ್ರೀ ಲಿಂಗೇಶ್ವರ ದೇವಸ್ಥಾನ ಹಾಗೂ ರಾತ್ರಿ 2 ಗಂಟೆಗೆ ಶ್ರೀ ಶಿವಪಾರ್ವತಿ ದೇವಸ್ಥಾನ ವಿದ್ಯಾನಗರ ಇಲ್ಲಿ ನೃತ್ಯ ಜಾಗರಣೆ ನಡೆಯಲಿದೆ ಎಂದರು. ಪಿ.ಸಿ. ರಾಮನಾಥ್ ಈ ಸಂದರ್ಭದಲ್ಲಿದ್ದರು.