ಎಲ್ಲಾ ವರ್ಗದವರ ರೈತರ ಮತ್ತು ಮಹಿಳೆಯರ ಹಿತಕಾಯುವ ಬಜೆಟ್: ಶಿವನಗೌಡ ಟಿ ಪಾಟೀಲ್
ದಾವಣಗೆರೆ : ಇಂದು ಮಂಡಿಸಿರುವ ಬಜೆಟ್ ರೈತರು, ಮಹಿಳೆಯರು ಮತ್ತು ಎಲ್ಲಾ ವರ್ಗದ ಜನರನ್ನು ಮುಟ್ಟುವಂತ ಜನಪರ ಜನಸ್ನೇಹಿ ಮುಂದಾಲೋಚನೆಯ ಬಜೆಟ್ ಇದಾ ಆಗಿದೆ
ನೀರಾವರಿ ವಲಯಕ್ಕೆ 25000 ಕೋಟಿ ರೂಪಾಯಿಯ ಅನುದಾನ ನೀಡಿರುವುದು ಮತ್ತು ತನ್ಮೂಲಕ 1.50 ಲಕ್ಷ ಹೆಕ್ಟೇರ್ ನೀರಾವರಿ ಸಾಮಾರ್ಥ್ಯ ಸೃಜಿಸಲು ಅನುವು ಮಾಡಲು ಅನುದಾನ ಒದಗಿಸಿರುವುದು ರಾಜ್ಯದ ಎಲ್ಲೆಡೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅದ್ಯತೆ ನೀಡಲಾಗಿದೆ
ಮಹಿಳೆಯರಿಗೆ ಗೃಹಿಣಿ ಶಕ್ತಿ ಯೋಜನೆ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ಪಾಸ್ ಸೌಲಭ್ಯ, ನಿರುದ್ಯೋಗಿಗಳಿಗೆ 2,000 ರೂ. ಮಾಶಾಸನ ನೀಡುವ ಯೋಜನೆಗಳು ಕಾರ್ಮಿಕರು ಮತ್ತು ಮಹಿಳಾ ಕಾರ್ಮಿಕರಿಗೆ 500 ರೂ. ಮಾಶಾಸನ, ರೈತರ ಪರವಾಗಿ ʼಭೂ ಸಿರಿ” ಯೋಜನೆ, ಕ್ರಮಗಳನ್ನು ಈ ಬಜೆಟ್ ನಲ್ಲಿ ಘೋಷಿಸಲಾಗಿದೆ. ನೇಕಾರರು ಮತ್ತು ಇತರ ಉದ್ಯಮಿಗಳಿಗೆ ಪ್ರೋತ್ಸಾಹ ಧನವನ್ನು ವಿಸ್ತರಿಸುವುದು ಅವರೆಲ್ಲರ ಬದುಕಿನಲ್ಲಿ ಅತ್ಯಂತ ಗುಣಾತ್ಮಕ ಬದಲಾವಣೆಗಳನ್ನು ತರಲಿದೆ
ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಸಿ.ಇ.ಟಿ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಉನ್ನತ ಶಿಕ್ಷಣ ಒದಗಿಸುವ ಐತಿಹಾಸಿಕ ಕ್ರಾಂತಿಕಾರಕ ಕ್ರಮವು ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಉನ್ನತ ಶಿಕ್ಷಣವನ್ನು ಉಚಿತವಾಗಿ ಒದಗಿಸುವ ಮೊದಲ ರಾಜ್ಯ ಸರ್ಕಾರವಾಗಿದೆ. ವಿದ್ಯಾದಾನವನ್ನು ಕಲ್ಪನೆಯನ್ನು ನೈಜ ರೂಪದಲ್ಲಿ ಅನ್ವರ್ಥಕಗೊಳಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡವರ ಮಕ್ಕಳಿಗೆ ನಿಗಮಗಳ ಮೂಲಕ ಸ್ವಯಂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅನುದಾನ ಒದಗಿಸಿರುವುದು ಉದ್ಯೋಗ ಸೃಷ್ಟಿಗೆ ಅನುಕೂಲ ಕಲ್ಪಿಸಿದೆ.
ಒಟ್ಟಾರೆ ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಯೊಂದಿಗೆ ರಾಜ್ಯದ ಅಭಿವೃದ್ಧಿ ಗೆ ಪೂರಕವಾದ ದೂರದೃಷ್ಟಿಯ ಜೊತೆಗೆ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಬಜೆಟ್ ನ್ನು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ್ದಾರೆ ಎಂದು ತಿಳಿಸಿದ್ದಾರೆ