ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನದಂತೆ ಬಜೆಟ್ ನಲ್ಲೂ ಮಲತಾಯಿ ಧೋರಣೆ – ಕೆ.ಎಲ್.ಹರೀಶ್ ಬಸಾಪುರ.

ಕೆ.ಎಲ್.ಹರೀಶ್ ಬಸಾಪುರ

ದಾವಣಗೆರೆ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜ್ಯ ಬಜೆಟ್ ನಲ್ಲಿ ಜಿಲ್ಲೆಯ ಜನರ ನಿರೀಕ್ಷೆ ಹುಸಿಯಾಗಿಸಿದ್ದು, ಕಾರ್ಖಾನೆಗಳ ಸ್ಥಾಪನೆಯಿಂದ ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರೆಯಬಹುದು, ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ಪ್ರದೇಶವಾಗಿದ್ದರಿಂದ, ಮೆಕ್ಕೆಜೋಳ ಸಂಸ್ಕರಣ ಘಟಕ ಪ್ರಾರಂಭವಾಗಬಹುದು, ಹಾಗೂ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಜಿಲ್ಲೆಯ ರೈತರಿಗೆ, ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಹಾಗೂ ಕೃಷಿ ಚಟುವಟಿಕೆ ಉತ್ತೇಜನಕ್ಕೆ ನೆರವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ, ಜಿಲ್ಲೆಯ ಜನರಿಗೆ ಮುಖ್ಯಮಂತ್ರಿಗಳು ತಣ್ಣೀರು ಎರಚಿದ್ದಾರೆ.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐವರು ಬಿಜೆಪಿ ಶಾಸಕರಿದ್ದರೂ, ಜಿಲ್ಲೆಗೆ ಯಾವುದೇ ವಿಶೇಷ ಯೋಜನೆಯನ್ನು ತರಲಾಗದೆ ಇರುವುದು ಮಾತ್ರ ಸ್ಥಳೀಯ ಬಿಜೆಪಿ ಶಾಸಕರ ಅಸಾಯಕ ಸ್ಥಿತಿಯಾಗಿದ್ದು, ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬಿಜೆಪಿಯ ಐವರು ಶಾಸಕರು ಇದ್ದರೂ ಅವರನ್ನು ಕಡೆಗಣಿಸಿದಂತೆ, ಈಗ ಬಜೆಟ್ ನಲ್ಲೂ ಸಹ ಜಿಲ್ಲೆಯಿಂದ ಅತಿ ಹೆಚ್ಚು ಶಾಸಕರನ್ನು ಗೆಲ್ಲಿಸಿ ಕಳುಹಿಸಿಕೊಟ್ಟ ಮತದಾರರನ್ನು ಬಿಜೆಪಿ ಕಡೆಗಣಿಸಿದೆ. ಮತದಾರರು ಎಚ್ಚೆತ್ತುಕೊಳ್ಳಬೇಕಾಗಿದ್ದು, ವಿಸ್ತರಣೆ ಹಾಗೂ ಬಜೆಟ್ ನಲ್ಲಿ ನಮ್ಮ ಜಿಲ್ಲೆಯನ್ನು ಕಡೆಗಣಿಸಿದ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಜನರೇ ಸೂಕ್ತ ರೀತಿಯ ಉತ್ತರ ನೀಡಬೇಕಾಗಿದೆ.

 

 

Leave a Reply

Your email address will not be published. Required fields are marked *

error: Content is protected !!