ಯಶಸ್ವೀ ಹೋರಾಟ.. ಗೆಲುವಿನ ನಗೆ ಬೀರಿದ ಅನ್ನದಾತರು..

ಬೆಂಗಳೂರು: ಕಬ್ಬಿಗೆ ನ್ಯಾಯಯುತ ದರ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಆರಂಭಿಕ ಜಯಸಿಕ್ಕಿದೆ‌. ರೈತರ ಭಾಗಶಃ ಬೇಡಿಕೆ ಈಡೇರಿದಂತಾಗಿದ್ದು ಅನ್ನದಾತರ ಮೊಗದಲ್ಲಿ ಸಂತಸ ಕಂಡುಬರುತ್ತಿದೆ.

ಈ ಕುರಿತಂತೆ ಸಂತಸ ಹಂಚಿಕೊಂಡಿರುವ ಕುರುಬೂರು ಶಾಂತಕುಮಾರ್, ಕಬ್ಬಿನ ಎಫ್ಆರ್ಪಿ ದರಕ್ಕೆ ಹೆಚ್ಚುವರಿಯಾಗಿ, 100ರೂ ನಿಗದಿ, ಉಪಉತ್ಪನ್ನಗಳ ಲಾಭದಿಂದ ಹಂಚಿಕೆ ಮಾಡಿರುವುದು ಹಾಗೂ ಯತ್ನಾಲ್ ಉತ್ಪಾದನೆಯ ಕಾರ್ಖಾನೆಗಳು ಹೆಚ್ಚುವರಿ 50 ರೂ ಒಟ್ಟು 150 ರೂ ನೀಡಲು ಆದೇಶ ಹೊರಡಿಸಿರುವುದು ಸ್ವಲ್ಪ ಮಟ್ಟಿಗೆ ಸಮಾಧಾನವಾಗಿದೆ ಎಂದರು.

ಧರಣಿ ನಡೆಯುತ್ತಿರುವ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳು ಯಾವುದೇ ಮಾನದಂಡವಿಲ್ಲದೆ ಯಾರ ಅನುಮತಿ ಇಲ್ಲದೆ ಪ್ರಸಕ್ತ ಸಾಲಿನಲ್ಲಿ ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು 250- 300ರೂ ಏರಿಕೆ ಮಾಡಿರುವ ಹಣದಲ್ಲಿ ಕಾರ್ಖಾನೆಗಳಿಂದ 150ರೂ ಕಡಿಮೆ ಮಾಡುವ ಆದೇಶ ಹೊರಡಿಸಿದರೆ ರೈತರ ಕಬ್ಬು ಉತ್ಪಾದನಾ ವೆಚ್ಚಕ್ಕೆ ತಕ್ಕ ಬೆಲೆ ಸಿಗುತ್ತದೆ ಎಂದರು.

ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪರವರು ಹುಬ್ಬಳ್ಳಿಯಿಂದ ದೂರವಾಣಿಯಲ್ಲಿ ಕುರುಬೂರು ಶಾಂತಕುಮಾರ್ ಚೂತೆ ಮಾತನಾಡಿ ಚಳುವಳಿ ಕೈ ಬಿಡುವಂತೆ ಮನವಿ ಮಾಡಿ, ಸರ್ಕಾರದ ಆದೇಶ ಪ್ರತಿಯನ್ನ ರಾಜ್ಯ ಸರ್ಕಾರದ ಪ್ರತಿನಿದಿಯಾಗಿ ಬಸವರಾಜ್ ಸೂಮಣ್ಣನವರ್,ಜನರಲ್ ಮ್ಯಾನೇಜರ್ , ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ,ರವರ ಚಳುವಳಿ ಸ್ಥಳಕ್ಕೆ ಆಗಮಿಸಿ ಆದೇಶ ಪ್ರತಿ ನೀಡಿ, ಸಕ್ಕರೆ ಅಭಿವೃದ್ಧಿ ಆಯುಕ್ತರು ಸಹ ಇದೆ ವೇಳೆ ಕರೆ ಮಾಡಿ ಧರಣಿ ಕೈ ಬಿಡಬೇಕು ಎಂದು ಮನವಿ ಮಾಡಿದರು.  ರಾಜ್ಯ ಸರ್ಕಾರದ ನಿರ್ಧಾರವನ್ನು ಒಂದು ತಿಂಗಳು ಕಾದು ನೋಡುತ್ತೇವೆ, ಎಂದರು ರಾಜ್ಯದ ಕಬ್ಬು ಬೆಳೆಗಾರರ ರೈತರ ಹೋರಾಟಕೆ ಮಣಿದು ಸರ್ಕಾರ ತಲೆಬಾಗಿದೆ, ಈ ಹೋರಾಟದಿಂದ ರಾಜ್ಯದ ಕಬ್ಬು ಬೆಳೆಗಾರರಿಗೆ 905 ಕೋಟಿ ಹಣ ಹೆಚ್ಚುವರಿ ಸಿಕ್ಕಂತಾಗಿದೆ ರೈತ ಹೋರಾಟಕ್ಕೆ ಸಿಕ್ಕ ಜಯ ಇದಾಗಿದೆ ಎಂದು ಕುರುಬೂರು ಹೇಳಿದರು.

ಈಗ ಹೂರಾಟ ಕೈ ಬಿಡಲು ತೀರ್ಮಾನಿಸಿದ್ದೇವೆ, ಸರ್ಕಾರದ ಪ್ರತಿನಿದಿ ಧರಣಿ ಸ್ಥಳಕ್ಕೆ ಬಂದು ಅಧಿಕೃತ ಆದೇಶ ಪತ್ರ ಸಮಜಾಯಿಸಿ ನೀಡಿದಾರೆ ಆದಕ್ಕಾಗಿ ಕಬ್ಬು ಬೆಳೆಗಾರರ 39 ದಿನದ ಹೋರಾಟ ಕೈ ಬಿಡುತ್ತೇವೆ ಸದ್ಯದಲ್ಲಿಯೇ ಸಂಘಟನೆಯ ರಾಜ್ಯ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು, ಸಕ್ಕರೆ ಮಂತ್ರಿಗಳನ್ನು ಭೇಟಿ ಮಾಡಿ ಬಾಕಿ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು

ಕಳಸಾಬಂಡೂರಿ ಮಹದಾಯಿ ಯೋಜನೆಗೆ ಡಿಪಿಆರ್ ಅನುಮೋದನೆ ಸ್ವಾಗತ:

ನಾಲ್ಕು ದಶಕಗಳ ಹೋರಾಟದಿಂದ
ನೆನಗುದಿಗೆ ಬಿದ್ದಿದ್ದ ಹುಬ್ಬಳ್ಳಿ ಧಾರವಾಡ ಬೆಳಗಾವಿ ಬಾಗಲಕೋಟೆ ಗದಗ್ ಜಿಲ್ಲೆಗಳ 3,90 ಟಿಎಂಸಿ ಕುಡಿಯುವ ನೀರು ಯೋಜನೆಗೆ ಕೇಂದ್ರ ಸರ್ಕಾರ 1300 ಕೋಟಿ ರೂಗಳಿಗೆ ಡಿಪಿಆರ್ ಅನುಮೋದನೆ ಮಾಡಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಕ್ರಮ ಎಂದ ಕುರುಬೂರು ಶಾಂತಕುಮಾರ್, ಇದು ಚುನಾವಣೆ ಆಕರ್ಷಣೆಯ ಯೋಜನೆಯಾಗ ಬಾರದು ಕಾಲಮಿತಿಯೊಳಗೆ ಕಾಮಗಾರಿ ಆರಂಭವಾಗಿ ಅನುಷ್ಠಾನಗೊಳ್ಳಬೇಕು, ಇಡೀ ರಾಜ್ಯವೇ ಹೋರಾಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು, ರಾಜ್ಯದ ಜನತೆಗೆ ಸಂತೋಷದ ಸಂಗತಿಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ಮ ಪಾಟೀಲ್, ಹತ್ತಳ್ಳಿ ದೇವರಾಜ್, ಕುಮಾರ್ ಬುಬಾಟಿ, ಬರಡನಪುರ ನಾಗರಾಜ್, ಶಂಕರ್ ಕಾಜಗಾರ್, ಕಾಟೂರ್ ಮಹದೇವಸ್ವಾಮಿ , ಹನುಮಯ್ಯ ಮುಂತಾದವರು ಇದ್ದರು

 

Leave a Reply

Your email address will not be published. Required fields are marked *

error: Content is protected !!