ದಾವಣಗೆರೆ ಜಿಲ್ಲೆಯಲ್ಲಿ ಮೂರು ವರ್ಷದ ಹೆಣ್ಣುಮಗುವಿಗೆ ಕೋವಿಡ್
ದಾವಣಗೆರೆ: ದಾವಣಗೆರೆ ನಗರದ 3 ವರ್ಷ ವಯಸ್ಸಿನ ಹೆಣ್ಣು ಮಗುವಿಗೆ ಇಂದು ಕೊವಿಡ್ ದೃಢಪಟ್ಟಿದೆ. ಮಗುವಿನ ತಾಯಿಗೆ ಕಳೆದ ವಾರ ಸಾಮಾನ್ಯ ಜ್ವರ ಬಂದಿರುತ್ತದೆ. ಸದರಿಯವರು ಸ್ಥಳೀಯವಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುತ್ತಾರೆ. ಆದರೆ ಈ ವಾರ ಕುಟುಂಬಸ್ಥರು ವಿದೇಶಕ್ಕೆ ತೆರಳಲು ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದಾಗ ಮಗುವಿಗೆ (ಸ್ವಲ್ಪ ಸಾಮಾನ್ಯ ರ ಕಾಣಿಸಿಕೊಂಡಿರುತ್ತದೆ.) ಕೋವಿಡ್’ ಎಂದು ದೃಢಪಟ್ಟಿರುತ್ತದೆ. ಪ್ರಸ್ತುತ ರೋಗ ಲಕ್ಷಣ ಚಿಕಿತ್ಸೆ ಪಡೆದು ಮಾರ್ಗಸೂಚಿಯನ್ವಯ ಮನೆಯಲ್ಲಿ ಪ್ರತ್ಯೇಕವಾಗಿರುತ್ತಾರೆ.
ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಇವರ ಮನೆಯಲ್ಲಿ 2 ಜನರಿದ್ದು, ಯಾರಿಗೂ ಆರೋಗ್ಯ ಸಮಸ್ಯೆ ಉಂಟಾಗಿರುವುದಿಲ್ಲ ಹಾಗೂ ಎಲ್ಲರೂ ಆರೋಗ್ಯವಾಗಿರುತ್ತಾರೆ. ಎಲ್ಲಾ ಪ್ರಾಥಮಿಕ ಸಂಪರ್ಕಿತರ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದಾಗ ಎಲ್ಲರ ವರದಿಯು Negative ಎಂದು ವರದಿಯಾಗಿರುತ್ತದೆ. ಮಾರ್ಗಸೂಚಿಗಳ ಪ್ರಕಾರ ಇವರ ಸಿ.ಟಿ. ದರ 25 ಕ್ಕಿಂತ ಹೆಚ್ಚು ಇದ್ದು (14) ಇರುವುದರಿ೦ದ ಜಿನೊಮಿಕ್ ಪರೀಕ್ಷೆಗೆ ಕಳುಹಿಸುವ ಅಗತ್ಯ ಇಲ್ಲದೇ ಇರುವುದರಿಂದ BF 7 ಅಲ್ಲದ ಸಾಮಾನ್ಯ ಕೋವಿಡ್ ಎಂದು ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಇದುವರೆಗೆ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು ಮೂವರಿಗೆ ಕೊವಿಡ್ ಲಕ್ಷಣಗಳು ಕಂಡುಬಂದಿವೆ