ಮಕರಜ್ಯೋತಿ ಪೂಜೆ, ಅನ್ನಸಂತರ್ಪಣೆ ಇಂದು

ದಾವಣಗೆರೆ: ನಗರದ ಪಿ.ಬಿ.ರಸ್ತೆಯ ಬೀರಲೀಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಶಬರಿಮಲೈ ಅಯ್ಯಪ್ಪ ಸ್ವಾಮಿಯ ಭಕ್ತವೃಂದ ಮಂಡಳಿ ವತಿಯಿಂದ ಜ.೧೪ರ ಇಂದು ಮಕರ ಜ್ಯೋತಿ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಹ ಕಾರ್ಯದರ್ಶಿ ರಾಘವೇಂದ್ರ ಎಂ. ಚವ್ಹಾಣ್ ತಿಳಿಸಿದ್ದಾರೆ.

ಇಂದು ಸಂಜೆ ೪ಗಂಟೆಗೆ ಅಭಿಷೇಕ, ೬ಗಂಟೆಗೆ ಮಹಾಮಂಟಪದಲ್ಲಿ ಶ್ರೀ ಮಹಾಗಣಪತಿ ಮತ್ತು ಶ್ರೀ ಸುಬ್ರಮಣ್ಯ ಸ್ವಾಮಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿಯ ಪ್ರತಿಷ್ಠಾಪನೆ. ಸಂಜೆ ೬.೩೦ಕ್ಕೆ ಜ್ಯೋತಿ ಪೂಜೆ ಕಾರ್ಯಕ್ರಮ, ೭ಕ್ಕೆ ಅಯ್ಯಪ್ಪ ಸ್ವಾಮಿಯ ಭಜನಾ ಕಾರ್ಯಕ್ರಮ ನಡೆಯಲಿದ್ದು, ನಂತರ ಉಮಾಪತಯ್ಯ ಸ್ವಾಮಿ ಮತ್ತು ತಂಡದವರಿಂದ ನಂತರ ಪಡಿಪೂಜೆ ಮಹಾಮಂಗಳಾರತಿ ನಡೆಯಲಿದೆ. ತದನಂತರ ನೆರೆದ ಭಕ್ತಾಧಿಗಳಿಗೆ ಸಮಿತಿಯವರಿಂದ ಪ್ರಸಾದವಿನಿಯೋಗ ನಡೆಯಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!