ಬೆಳ್ಳಿ ಗಣಪನ ಮೂರ್ತಿ ನೀಡಿ ಆಮಿಷ-ಓರ್ವ ಯುವಕ ಪೊಲಿಸ್ ವಶಕ್ಕೆ

ದಾವಣಗೆರೆ: ಮತದಾರರಿಗೆ ಆಮಿಷವೊಡ್ಡಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಬೆಳ್ಳಿ ಗಣೇಶನ ಮೂರ್ತಿಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಯುವಕನೊಬ್ಬನನ್ನು ಫ್ಲೈಯಿಂಗ್ ಸ್ಕ್ವಾಡ್ ವಶಕ್ಕೆ ಪಡೆದಿದೆ.
ದೂರಿನ ಮೇರೆಗೆ ನಗರದ ಎಸ್.ಜೆ.ಎಂ. ನಗರದ 16ನೇ ಕ್ರಾಸ್‌ನಲ್ಲಿ ದಾಳಿ ನಡೆಸಿದಾಗ ಕೆಲವು ಹುಡುಗರು ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದರು.
ಅವರಲ್ಲಿ ಹಿರೇಕೆರೂರಿನ ತೇಜಸ್ (22) ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ‘ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತದಾರರಿಗೆ ಆಮಿಷವೊಡ್ಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತೇಜಸ್ ತಿಳಿಸಿದ್ದಾನೆ. ಈ ಕುರಿತು ಫ್ಲೈಯಿಂಗ್ ಸ್ಕ್ವಾಡ್‌ನ ಗಿರೀಶ್ ಗಾಂಧಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.