ಅಭಿವೃದ್ಧಿ ಹರಿಕಾರರು, ಸರ್ವ ಜನಾಂಗದ ಸರ್ವೋತ್ತಮ ನಾಯಕ ಸಂಸದ ಜಿ.ಎಂ. ಸಿದ್ದೇಶ್ವರ–:ಬಾಡದ ಆನಂದರಾಜು

 

ದಾವಣಗೆರೆ: ಖಡ್ಗಕ್ಕಿಂತ ಲೇಖನಿ ಹರಿತ ಎಂಬಂತೆ, ಅಧಿಕಾರಕ್ಕಿಂತ ಅಭಿವೃದ್ಧಿಯೇ ನನ್ನ ಗುರಿ ಎಂದು ಹಗಲಿರುಳು ಕೆಲಸ ಮಾಡುವ ಸಂಸದ ಜಿ.ಎಂ ಸಿದ್ದೇಶ್ವರ ರವರು ದಾವಣಗೆರೆ ಚಿತ್ರದುರ್ಗ ಅವಳಿ ಜಿಲ್ಲೆಯ ಹೆಮ್ಮೆಯ ಪುತ್ರ ಎಂದು ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜು ತಿಳಿಸಿದರು.

ಜಿ.ಎಂ.ಐ.ಟಿ. ಅತಿಥಿ ಗೃಹದಲ್ಲಿ ಭೇಟಿ ಮಾಡಿ ಶುಭ ಹಾರೈಸಿದ ಅವರು ಸೋಲಿಲ್ಲದ ಸರದಾರಾದ ಸಿದ್ದೇಶ್ವರ ಅವರು ಕಪ್ಪು ಚುಕ್ಕೆ ಇಲ್ಲ ಶುಭ್ರ ಬಿಳಿ ಬಟ್ಟೆಯಂತೆ ಎಂದರು. ಸಿದ್ದಣ್ಣನವರಿಗೆ ಸ್ವಲ್ಪ ಸಿಟ್ಟು ಜಾಸ್ತಿ ಆದರೆ ಮೋಸಗಾರರಲ್ಲ. ಸಾಧನೆಗಳ ಸಾಧಕ ಆದರೆ ಹೊಗಳಭಟ್ಟರಿಲ್ಲ. ಸರ್ಕಾರದ ಯೋಜನೆಗಳನ್ನ ಸಮರ್ಪಕವಾಗಿ ಬಳಸಿಕೊಂಡು ಹೇಗೆ ಅಭಿವೃದ್ಧಿ ಮಾಡಬೇಕೆಂದು ದೇಶಕ್ಕೆ ಮಾದರಿಯಾಗಿದ್ದಾರೆ. ಸಂಸದರಾದ ಮೇಲೆ ದಾವಣಗೆರೆ ಎಂಬುದನ್ನ ವಿಶ್ವವೇ ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಮೊದಲಬಹಂತದಲ್ಲೇ ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ ಜಿಲ್ಲೆಯನ್ನ ಸೇರಿಸಿ ಸುಂದರ ಸ್ವಚ್ಛ ನಗರವನ್ನಾಗಿ ಮಾಡುವಲ್ಲಿ
ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗ ದಾವಣಗೆರೆ ಹುಬ್ಬಳಿವರಗೆ 6 ಪಥದ ರಾಷ್ಟ್ರೀಯ ಹೆದ್ದಾರಿಗೆ ಕೇಂದ್ರದಿಂದ 3 ಸಾವಿರ ಕೋಟಿ ಅನುದಾನ ತರುವ ಮೂಲಕ ಹೊರ ರಾಜ್ಯಗಳಿಗೆ ಹೋಗುವ ವಾಹನ ಸವಾರರಿಗೆ ಸುಗಮ ಸಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಚಿತ್ರದುರ್ಗ ಹಾಗೂ ಹರಿಹರ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಘಟಕ ಸ್ಥಾಪಿಸಿ ಜೀವ ಉಳಿಸುವ ಕೆಲಸ ಮಾಡಿದ್ದಾರೆ.

ಅಭಿವೃದ್ಧಿ ವಿಚಾರದಲ್ಲಿ ಪುಸ್ತಕವನ್ನೇ ಬರೆಯಿವಷ್ಟು ಕೆಲಸ ಮಾಡಿರುವ ಏಕೈಕ ಸಂಸದರೆಂದರೆ ನಮ್ಮ ಸಿದ್ಧೇಶಣ್ಣ ಅವರು ಎಂದರು. ಆಡು ಮುಟ್ಟದ ಸಪ್ಪು ಇಲ್ಲ ಎಂಬಂತೆ ಜಿಲ್ಲೆಯಲ್ಲಿ ಯಾವುದೇ ಊರಿಗೆ ಹೋದರು ಸಂಸದರ ಒಂದು ಸಣ್ಣ ಕೊಡುಗೆ ಕಣ್ಣಿಗೆ ಬೀಳುತ್ತದೆ. ಸ್ವಾತಂತ್ರ್ಯ ಬಂದರೂ ಕಣ್ಣೀಗೆ ಕಾಣದ ಊರಿಗೆ ಭೇಟಿ ಕೊಟ್ಟು ಅಲ್ಲಿ ಜನರ ಸಮಸ್ಯೆ ಕೇಳಿ ಅಭಿವೃದ್ಧಿ ಮಾಡಿರುವ ಜಿಲ್ಲೆಯ ಏಕೈಕ ರಾಜಕಾರಣ ಎಂದರೆ ಜಿ.ಎಂ ಸಿದ್ದೇಶ್ವರ ಒಬ್ಬರೇ ಎಂದರು. ಸಂಸದರ ವ್ಯಾಪ್ತಿಗೆ ಎಲ್ಲಾ ಹಳ್ಳಿಗಳಿಗೆ ಭೇಟಿ ಕೊಟ್ಟು ದಾಖಲೆ ಬರೆದಿದ್ದಾರೆ.

ಜನ ಪ್ರತಿನಿಧಿಗಳೆಂದರೆ ಎಸಿ ಕೊಠಡಿಗೆ ಸೀಮಿತವಲ್ಲ ನಾವೇ ಅವರ ಬಳಿ ಹೋಗಬೇಕೆಂದು ಎಲ್ಲಾ ಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಪಾಸ್‌ಪೋರ್ಟ್‌‌‌‌ ಕೇಂದ್ರ, ರೈಲ್ವೇ ನಿಲ್ದಾಣ ಉನ್ನತಿಕರಣ, ಅಂಚೆ ಕಚೇರಿಗೆ ಹೊಸ ಕಾಯಕಲ್ಪ ತಂದುಕೊಟ್ಟ ಸಂಸದರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು. ಬೆಳಗ್ಗೆ 10 ಕ್ಕೆ ಮನೆ ಬಿಟ್ಟರೆ ರಾತ್ರಿ ಸೇರುವುದೇ 11 ಕ್ಕೆ ಅಲ್ಲಿವರಗೆ ಜನರ ಸಂಕಷ್ಟ ಅಭಿವೃದ್ಧಿ ವಿಚಾರಗಳ ಬಗ್ಗೆ ಸಭೆ, ಚರ್ಚೆ ಮಾಡುತ್ತಲೇ ಇರುತ್ತಾರೆ. ಹಗಲಿರುಳು ಕೆಲಸ ಮಾಡುತ್ತಾರೆ ವಯಸ್ಸು, ಆಯಸ್ಸು ದೇಹಕ್ಕೆ ಹೊರತು ಅಭಿವೃದ್ಧಿ ಮತ್ತು ಸಾರ್ವಜನಿಕರ ಸೇವೆಗಲ್ಲಾ ಎಂದು ತೋರಿಸಿಕೊಟ್ಟವರು ನಮ್ಮ ಹೆಮ್ಮೆ ಸಂಸದರಾದ ಜಿ. ಎಂ. ಸಿದ್ದೇಶ್ವರ ಎಂದರು. ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು ಜಿಲ್ಲೆಯ ರೈತರು ಸಮಸ್ಯೆಗೆ ಸಿಲುಕಿದಾಗ ಅದಕ್ಕೆ ಸ್ಪಂದಿಸಿ ಪರಿಹರಿಸುವ ಕಾರ್ಯ ಮಾಡುತ್ತಾರೆ ಕೇವಲ ಒಂದು ದೂರವಾಣಿ ಕರೆ ಮಾಡಿದರೆ ಸಾಕು ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ ಎಂದರು. ಅತೀ ಹೆಚ್ಚು ಅನುದಾನ ಬಳಕೆ ಮಾಡಿಕೊಂಡ ಸಂಸದರಲ್ಲಿ ನಮ್ಮ ಸಿದ್ದೇಶ್ವರ ಅವರು ಕೂಡ ಒಬ್ಬರು, ಸಂಸತ್ ಲ್ಲಿ ಅತೀ ಹೆಚ್ಚು ಹಾಜರಾತಿ ಮತ್ತು ಅನುದಾನ ಬಳಕೆ ಮಾಡಿಕೊಂಡು ದೇಶವನ್ನ ಪ್ರಗತಿಯತ್ತಾ ಕೊಂಡುಯ್ಯುವಲ್ಲಿ ಸಿದ್ದೇಶ್ವರ ಅವರ ಪಾತ್ರ ಕೂಡ ಇದೆ ಎಂದು ಬಾಡದ ಆನಂದರಾಜು ಅಭಿಪ್ರಾಯಪಟ್ಟು. ಮುಂದಿನ ಬಾರಿಯೂ ಜಿ.ಎಂ ಸಿದ್ದೇಶ್ವರ ಅವರು ಸಂಸರಾಗಿ ಆಯ್ಕೆಯಾಗಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲಿ ಇಂಥ ಜನಪ್ರತಿನಿಧಿಗಳು ನಮ್ಮ ಜಿಲ್ಲೆಗೆ ಸದಾ ಅವಶ್ಯಕತೆ ಇದೆ. ಮನೆಯಿಂದ ಹೊರಗಡೆ ಬಾರದ ಜನಪ್ರತಿನಿಧಿಗಳಿಗಿಂತ ಜನರೊಂದಿಗೆ ಬೆರೆತು ಕೆಲಸ ಮಾಡುವ ನಮ್ಮ ಸಂಸದರು ಜಿ ಎಂ ಸಿದ್ದೇಶ್ವರ ನಮಗೆಲ್ಲರಿಗೂ ಅವರ ಸೇವೆ ಇನ್ನೂ ಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ. ನೇಕಾರ ಸಮೂದಾಯದ ಯುವ ಮುಖಂಡ ಹಾಗೂ ಪಾಲಿಕೆ ಸದಸ್ಯ ಸಿವಿ.ನರೇಂದ್ರಕುಮಾರ್.ಶ್ರೀಮತಿ ರೇಣುಕ ಶ್ರೀನಿವಾಸ್.ಚನ್ನಗಿರಿಯ ಗಿರೀಶ್..ಮಂಜುನಾಯ್ಕ್.ಇನ್ನೂ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!