ರಾಷ್ಟ್ರೀಯ.ಮಹಿಳಾ ಆಯೋಗಕ್ಕೆ ನಟಿ ಖುಷ್ಬೂ‌ ನಾಮನಿರ್ದೇಶನ

Actress Khushboo nominated for National Commission for Women

ರಾಷ್ಟ್ರೀಯ.ಮಹಿಳಾ ಆಯೋಗಕ್ಕೆ ನಟಿ ಖುಷ್ಬೂ‌ ನಾಮನಿರ್ದೇಶನ

ದೆಹಲಿ: ನಟಿ ಖುಷ್ಬು ಸುಂದರ್ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಬಿಜೆಪಿ ನಾಯಕಿಯೂ ಆಗಿರುವ ಖುಷ್ಬು ಸುಂದರ್ ಅವರು ಕೆಲವು ಸಮಯದಿಂದ ಪಕ್ಷದ ನಾಯಕತ್ವದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಅವರಿಗೆ ಸೂಕ್ತ ಸ್ಥಾನಮಾನ ಸಿಕ್ಕಿದೆ.
ಖುಷ್ಬೂ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಆಯ್ಕೆಯಾಗಿರುವ ಬಗ್ಗೆ ತಮಿಳುನಾಡು ಬಿಜೆಪಿ ಘಟಕ ಸಂತಸ ಹಂಚಿಕೊಂಡಿದೆ. ಇದೇ ವೇಳೆ, ಇಂತಹ ದೊಡ್ಡ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕಾಗಿ ನಾನು ನಮ್ಮ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಮತ್ತು ಭಾರತ ಸರಕಾರಕ್ಕೆ ಧನ್ಯವಾದಗಳು. ಜೈ ಹಿಂದ್” ಎಂದು ಖುಷ್ಬು ಸುಂದರ್ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!