ಪಾಲಿ ಹೌಸ್ ಪಡೆಯಲು ಪರಿಶಿಷ್ಟ ವರ್ಗದ ರೈತರಿಂದ ಅರ್ಜಿ ಆಹ್ವಾನ

ಪಾಲಿ ಹೌಸ್ ಪಡೆಯಲು ಪರಿಶಿಷ್ಟ ವರ್ಗದ ರೈತರಿಂದ ಅರ್ಜಿ ಆಹ್ವಾನ

ದಾವಣಗೆರೆ: ಪರಿಶಿಷ್ಟ ವರ್ಗದವರ ಅಭಿವೃದ್ಧಿ ಕಾರ್ಯಕ್ರಮದಡಿ ಪಾಲಿ/ನೆರಳು ಪರದೆ ಅಳವಡಿಸುವ ಕಾರ್ಯಕ್ರಮ ಅನುಷ್ಠಾನಕ್ಕಾಗಿ ರೂ. 2,11,000/- ಫಲಾನುಭವಿ ವಂತಿಕೆ ಭರಿಸಲು ಸಿದ್ಧರಿರುವ ಜಿಲ್ಲೆಯ ಪ.ಪಂ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರು ಪ.ಪಂ ಸೇರಿದ ಸಣ್ಣ/ಅತಿ ಸಣ್ಣ ರೈತರಾಗಿದ್ದು, ನೀರಾವರಿ ಸೌಲಭ್ಯ, ವಿದ್ಯುತ್ ಸಂಪರ್ಕ, ಅರ್ಜಿದಾರರ ಹೆಸರಿನಲ್ಲಿರುವ ಪ್ರಸಕ್ತ ಸಾಲಿನ ಪಹಣಿ ಹೊಂದಿರಬೇಕು. ಫಲಾನುಭವಿಯ ವಾರ್ಷಿಕ ಆದಾಯ ರೂ. 1.50 ಲಕ್ಷದ ಒಳಗಡೆ ಇರಬೇಕು. ಫಲಾನುಭವಿ ಹಾಗೂ ಕುಟುಂಬದ ಸದಸ್ಯರು ಸರ್ಕಾರಿ ನೌಕರಿಯಲ್ಲಿರಬಾರದು ಹಾಗೂ ಈ ಹಿಂದೆ ಇಲಾಖೆಯ ಯಾವುದೇ ಯೋಜನೆಯಡಿ ಸೌಲಭ್ಯ ಪಡೆದಿರಬಾರದು.

ಆಸಕ್ತ ಫಲಾನಿಭವಿಗಳು ಡಿ.ಸಿ.ಕಚೇರಿ ಕೊಠಡಿ ಸಂ. 45 ರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಿಂದ ಅರ್ಜಿಗಳನ್ನು ಪಡೆದು ಮಾರ್ಚ್ 15 ರೊಳಗಾಗಿ ಸಲ್ಲಿಸಲು ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!