ಭಾರತೀಯ ಜನಕಲಾ ಸಮಿತಿ ನೂತನ ಅಧ್ಯಕ್ಷರಾಗಿ ಐರಣಿ ಚಂದ್ರು ಆಯ್ಕೆ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಭಾರತೀಯ ಜನಕಲಾ ಸಮಿತಿ (Indian people theater association) ಇಪ್ಟಾ ಕಲಾತಂಡ ದ ಜಿಲ್ಲಾ ಸಮಿತಿ ಯ ನೂತನ ಅಧ್ಯಕ್ಷರಾಗಿ ಕಲಾವಿದ ಐರಣಿ ಚಂದ್ರು, ಗೌರವಾಧ್ಯಕ್ಷ ಜಗಳೂರು ಓಬಣ್ಣ, ಪ್ರಧಾನ ಕಾರ್ಯದರ್ಶಿಅವರಗೆರೆ ಬಾನಪ್ಪ, ಕಾರ್ಯದರ್ಶಿ ಜಿಗಳಿ ರಂಗನಾಥ್, ಶರಣಪ್ಪ ಶ್ಶಾಗಲೆ ಖಜಾಂಚಿ ಸ್ಥಾನಕ್ಕೆ ಕುಕ್ಕುವಾಡ ಮಹಾಂತೇಶ್, ಉಪಾಧ್ಯಕ್ಷ ರಾಗಿ ಹೊನ್ನಾಳಿ ಮಲ್ಲಿಕಾರ್ಜುನ ಸ್ವಾಮಿ,ಕಕ್ಕದೂರು ಮಲ್ಲೇಶ್ ಸೇರಿದಂತೆ ಹರಿಹರದ ಶಾಂಭವಿ ಆಯ್ಕೆ ಮಾಡಲಾಗಿದೆ.
ಇಂದು ದಾವಣಗೆರೆ ನಗರದ ಅಶೋಕ ರಸ್ತೆಯಲ್ಲಿ ಇರುವ ಪಂಪಾಪತಿ ಭವನದಲ್ಲಿ ನಡೆದ ಭಾರತೀಯ ಜನಕಲಾ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಗೌರವ ಸಲಹೆಗಾರರಾಗಿ ಕಾ.ಅವರಗೆರೆ ಉಮೇಶ್,ಕಾ.ಅವರಗೆರೆ ಚಂದ್ರು, ಪತ್ರಕರ್ತರಾದ ಪುರಂದರ ಲೋಕಿ ಕೆರೆ,ಓಂ ಎನ್ ಸಿದ್ದಯ್ಯ, ಅವರಗೆರೆ ವಾಸು,ಹೆಗ್ಗೆರೆ ರಂಗಪ್ಪ, ಗುರುಸಿದ್ಧ ಸ್ವಾಮಿ, ಏನ್.ವಿ.ಸರಳಾ,ಅವರಗೆರೆ ರುದ್ರಮುನಿ, ಅಂಜಿನಪ್ಪ ಲೋಕಿ ಕೆರೆ.
ಇಪ್ಟಾ ಕಲಾತಂಡ ಜಿಲ್ಲಾ ಸಮಿತಿ ಸದಸ್ಯ ರಾಗಿ ಶ್ರೀನಿವಾಸ್ ತುರ್ಚಘಟ್ಟ, ಶೌಕತ್ ಅಲಿ, ಖಾದರ್ ಸೇರಿದಂತೆ ಹೂವಯ್ಯ ಹಲವಾರು ಕಲಾವಿದರು ಆಯ್ಕೆ ಮಾಡಲಾಗಿದೆ.
ಆರಂಭದಲ್ಲಿ ಸಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಅವರಗೆರೆ ಚಂದ್ರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಇಪ್ಟಾ ಕಲಾತಂಡ ಕಲಾವಿದರು ಸ್ವಾಗತ ಗೀತೆ ಹಾಡಿದರು.ಬಾನಪ್ಪ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಶ್ರೀನಿವಾಸ್ ತುರ್ಚಘಟ್ಟ ವಂದಿಸಿದರು.