ಅಜಯ್ ಕುಮಾರ್ ಹೇಳಿಕೆ ವಿಡಿಯೋ ವೈರಲ್.! ಬೈದಿದ್ದು ಯಾರಿಗೆ.? ಸಂಸ್ಕೃತಿ, ಮತದಾನ ಬಗ್ಗೆ ಯೋಚಿಸಿ ಎಂದ ಹರೀಶ್ ಬಸಾಪುರ

ದಾವಣಗೆರೆ: ಮೇ ಹತ್ತರಂದು ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ರಾಜಕೀಯ ಪಕ್ಷಗಳ ನಾಯಕರುಗಳು, ಚುನಾವಣಾ ಅಭ್ಯರ್ಥಿಗಳು ತಾವು ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಮುಂದೆ ಮಾಡಬಹುದಾದ ಕೆಲಸಗಳ ಬಗ್ಗೆ ಜನರಿಗೆ ಹೇಳುವ ಮೂಲಕ ತಮಗೆ ಯಾಕೆ ಮತದಾನ ಮಾಡಬೇಕು ಎಂದು ಮತದಾರರಿಗೆ ಮನವರಿಕೆ ಮಾಡುವುದು ಒಂದು ಉತ್ತಮ ನಡವಳಿಕೆ ಎನ್ನಬಹುದು.
ಆದರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ತಮ್ಮ ಕಾರ್ಯಕರ್ತರೊಂದಿಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಹಿರಿಯ ರಾಜಕಾರಣಿಗಳ ಬಗ್ಗೆ ಅವರು ಬಳಸಿರುವ ಪದಗಳು ಅವರ ಯೋಗ್ಯತೆ ಹಾಗೂ ಸಂಸ್ಕೃತಿಯನ್ನು ತೋರಿಸುತ್ತದೆ.
ಇದೇ ವ್ಯಕ್ತಿ ಕಳೆದ ಮಹಾನಗರ ಪಾಲಿಕೆ ಚುನಾವಣಾ ಸಂದರ್ಭದಲ್ಲಿ 17ನೇ ವಾರ್ಡಿನಿಂದ ಸ್ಪರ್ಧಿಸಿ ಗೆದ್ದ ನಂತರ ವಾರ್ಡ್ ಗೆ ಬರದೇ, ವಾರ್ಡ್ ನಾಗರೀಕರ ಫೋನ್ ಕರೆಯನ್ನು ಸ್ವೀಕರಿಸದೇ… ತನ್ನನು ಚುನಾಯಿಸಿದ ವಾರ್ಡ್ ಮತದಾರರಿಗೆ ಕೈಗೆ ಸಿಗುತ್ತಿಲ್ಲ ಎನ್ನಲಾಗುತ್ತಿದ್ದು…. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರು ಈ ವ್ಯಕ್ತಿಗೆ ಮತದಾನ ಮಾಡುವ ಮೊದಲು ಈತ ಈಗ ಪ್ರತಿನಿಧಿಸುತ್ತಿರುವ ವಾರ್ಡಿನ ಬಗ್ಗೆ ಈತನಿಗಿರುವ ಕಾಳಜಿಯ ಬಗ್ಗೆ ತಿಳಿಯಬೇಕಾಗಿದೆ.
ವಾರ್ಡ್ ಜನರಿಗೆ ಸಿಗದ ವ್ಯಕ್ತಿ ಕ್ಷೇತ್ರದ ಜನರಿಗೆ ಸಿಕ್ಕಾನೆಯೇ???
ಇನ್ನು ಈತನು ಹಿರಿಯರ ಬಗ್ಗೆ ಬಳಸಿರುವ ಪದಗಳು ಅತ್ಯಂತ ಖಂಡನೀಯವಾಗಿದ್ದು ಈತನ ದುರಹಂಕಾರಕ್ಕೆ ಚುನಾವಣೆಯಲ್ಲಿ ಈತನನ್ನು ಸೋಲಿಸುವ ಮೂಲಕವೇ ಉತ್ತರಿಸಬೇಕಾಗಿದೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ.ಎಲ್.ಹರೀಶ್ ಬಸಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.