ಚೀಟಿಂಗ್ ಕೇಸ್ ನಲ್ಲಿ ಹಣ ವಸೂಲಿ ಆರೋಪ : ನಾಲ್ಕುಜನ ಸಸ್ಪೆಂಡ್ ಮಾಡಿದ ಲೇಡಿ ಸಿಂಗಂ…ಯಾಕೀರಬಹುದು?

ದಾವಣಗೆರೆ : ಚೀಟಿಂಗ್ ಕೇಸ್ ನಲ್ಲಿ ಸರ್ಚ್ ವಾರೆಂಟ್ ಇಲ್ಲದೇ ಸರ್ಚ್ ಮಾಡಿದ ನಾಲ್ಕು ಪೇದೆಗಳನ್ನು ದಾವಣಗೆರೆ ಲೇಡಿ ಸಿಂಗಂ ಸಸ್ಪೆಂಡ್ ಮಾಡಿ, ಇನ್ಮುಂದೆ ಹಣಕ್ಕೆ ಬೇಡಿಕೆ ಇಟ್ಟವರಿಗೆ ತಕ್ಕ ಶಾಸ್ತಿ ಮಾಡುವುದಾಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಸಂತೆಬೆನ್ನೂರು ಪೊಲೀಸ್ ಠಾಣೆ ಪೇದೆ ಧರ್ಮಪ್ಪ, ಹೊನ್ನಾಳಿ ಪೊಲೀಸ್ ಠಾಣೆ ದೊಡ್ಡಬಸಪ್ಪ, ಸಂತೆಬೆನ್ನೂರು ಪೊಲೀಸ್ ಠಾಣೆಯ ಕೊಟ್ರೇಶ್, ಹೊನ್ನಾಳಿ ಪೊಲೀಸ್ ಠಾಣೆ ಜಿ.ಕೆ.ರಾಮಚಂದ್ರಪ್ಪ ಅಮಾನತುಗೊಂಡವರು.

ನ್ಯಾಮತಿ ತಾಲೂಕಿನ ದಾನಿಹಳ್ಳಿ ಗ್ರಾಮದಲ್ಲಿನ ಕೊರಚರ ಕಾಲೊನಿಯ ರೂಪ ಎಂಬುವರ ಮನೆಗೆ ಈ ನಾಲ್ಕು ಜನ ಪೇದೆಗಳು ಸರ್ಚ್ ವಾರೆಂಟ್ ಇಲ್ಲದೇ ಮನೆಗೆ ನುಗ್ಗಿ ಹಣ ಕೇಳಿದ್ದಾರೆ ಎಂದು ಎಸ್ಪಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ನಮ್ಮ ಮನೆಗೆ ಮಧ್ಯರಾತ್ರಿಯಲ್ಲಿ ಅಕ್ರಮವಾಗಿ ನುಗ್ಗಿ, ಅವಾಚ್ಯಶಬ್ದಗಳಿಂದ ನಿಂಧಿಸಿ, ಜಾತಿನಿಂದನೆ ಮಾಡಿ, ನನ್ನ ಹಾಗೂ ನನ್ನ ಕುಟುಂಬದವರ ಮೇಲೆ ದೌರ್ಜನ್ಯವೆಸಗಿ, ಅಕ್ರಮ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ನನ್ನ ಹಾಗು ನನ್ನ ಕುಟುಂಬದವರಿಗೆ ಈ ನಾಲ್ಕು ಜನ ಪೇದೆಗಳು ಜೀವ ಬೆದರಿಕೆ ಹಾಕಿದ್ದಾರೆ.

ನಾನು ನನ್ನ ಗಂಡ ನಾಗರಾಜಪ್ಪ (ವಯಸ್ಸು 50 ವರ್ಷ, ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಿದ್ದೆವೆ. ಹಾಗೂ ಮಕ್ಕಳಾದ ಕುಮಾರಿ ಸುಷ್ಮಾ (ವಯಸ್ಸು 24 ವರ್ಷ, ಅವಿವಾಹಿತೆ.) ಜಯಂತ (ಮಗ, ವಯಸ್ಸು 23 ವರ್ಷ, ವಿವಾಹಿತ) ಕುಮಾರಿ. ದಿವ್ಯಾ (ವಯಸ್ಸು 20 ವರ್ಷ, ವಿದ್ಯಾರ್ಥಿನಿ) ಶ್ರೀಮತಿ ಭೂಮಿಕ ಕೋಂ ಜಯಂತ (ಸೊಸೆ, ವಯಸ್ಸು 22 ವರ್ಷ), ಇವರುಗಳೊಂದಿಗೆ ನಮ್ಮ ಮನೆಯಲ್ಲಿ ಒಟ್ಟಿಗೆ ವಾಸವಿದ್ದೇನೆ ಎಂದು ತಾಯಿ ರೂಪ ದೂರಿನಲ್ಲಿ ತಿಳಿಸಿದ್ದಾರೆ.

ಹೊನ್ನಾಳಿ ಮತ್ತು ಸಂತೆಬೆನ್ನೂರು ಪೋಲೀಸ್ ಪೇದೆಗಳು ವಿನಾ: ಕಾರಣ ನನ್ನ ಮಗನಾದ ಜಯಂತನನ್ನು ಸ್ಟೇಷನ್‌ಗೆ ಬರಬೇಕು. ನಿನ್ನ ಮೇಲೆ ದೂರು ಬಂದಿದೆ ವಿಚಾರಣೆ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದರು. ಯಾವ ವಿಚಾರವಾಗಿ ನನ್ನ ಮಗನನ್ನು ಸ್ಟೇಷನ್‌ಗೆ ಕಳುಹಿಸಬೇಕು ಮತ್ತು ಯಾರು ಯಾವ ವಿಚಾರವಾಗಿ ದೂರು ನೀಡಿದ್ದಾರೆ ಎಂಬುದನ್ನು ತಿಳಿಸದೇ, ವಿನಾ: ಕಾರಣ ಲಕ್ಷಗಟ್ಟಲೇ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ನನ್ನ ಮಗನಿಗೆ ಹಣ ನೀಡಿದರೆ ಮಾತ್ರ ನಿನ್ನ ಮೇಲೆ ಕೇಸು ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ತದನಂತರ ದಿನಾಂಕ 13/01/2024 ರಂದು ಬೆಳ್ಳಂಬೆಳಗ್ಗೆ 7 ಗಂಟೆ ಸುಮಾರಿಗೆ ನಾಲ್ಕು ಜನ ಪೊಲೀಸ್‌ನವರು ಕಾರಿನಲ್ಲಿ ನಮ್ಮ ಮನೆಗೆ ಬಂದು ನಿನ್ನ ಮಗ ಚೀಟಿಂಗ್ ಮಾಡಿದ್ದಾನೆ ಮತ್ತು ಅದರ ಕುರಿತು 30 ಲಕ್ಷ ಸೆಟಲ್ಮೆಂಟ್ ಮಾಡಬೇಕು ಕೂಡಲೇ ಮಗನನ್ನು ಸ್ಟೇಷನ್‌ಗೆ ಕರೆದುಕೊಂಡು ಹೋಗುತ್ತೇವೆ ನಿಮ್ಮ ಮಗ ಎಲ್ಲಿದ್ದಾನೆ ತಿಳಿಸಿ ಎಂದು ಕೇಳಿದರು.

ಆ ಸಮಯದಲ್ಲಿ ನನ್ನ ಮಗ ಮನೆಯಲ್ಲಿ ಇರಲಿಲ್ಲ. ನಾವು ಯಾವ ಕೇಸು, ಯಾರಿಗೆ ಮೋಸ ಆಗಿದೆ ಸಂಪೂರ್ಣ ವಿಚಾರವನ್ನು ತಿಳಿಸಿ ನಮ್ಮ ಮಗನನ್ನು ಸ್ಟೇಷನ್‌ಗೆ ಕಳಿಸುತ್ತೇವೆ. ಇಲ್ಲವಾದರೆ ಸುಮ್ಮ ಸುಮ್ಮನೆ ನಿಮ್ಮ ಜೊತೆ ನನ್ನ ಮಗನನ್ನು ಕಳುಹಿಸಲು ಆಗುವುದಿಲ್ಲ ಎಂದು ತಿಳಿಸಿದೆ. ಆಗ ಪೋಲೀಸರು ಅಪ್ಪನನ್ನು ಕರೆದುಕೊಂಡು ಹೋದರೆ ಮಗ ಜಯಂತ್ ಎಲ್ಲಿದ್ದರು ಸ್ಟೇಷನ್‌ಗೆ ಹುಡುಕಿಕೊಂಡು ಬರುತ್ತಾನೆ ಎಂದು ಇದ್ದಕ್ಕಿದ್ದಂತೆ ನನ್ನ ಪತಿ ನಾಗರಾಜಪ್ಪನ್ನು ಕಾರಿನಲ್ಲಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿದ್ದರು. ಸುಮಾರು 8:30 ರಿಂದ 9:00 ಗಂಟೆಯವರೆಗೆ ಪೊಲೀಸರು ಹೊನ್ನಾಳಿಯ ಲಾಡ್ಡನಲ್ಲಿ ನನ್ನ ಗಂಡನನ್ನು ಕೂಡಿಹಾಕಿ ಚಿತ್ರಹಿಂಸೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾರೆ.

ನಿನಗೆ ನಿನ್ನ ಮಗ ಬೇಕೆಂದರೆ ಅವನ ಮೇಲೆ ಯಾವುದೇ ಕೇಸು ಹಾಕಬಾರದು ಎಂದರೆ ನೀನು ನಾವು ಹೇಳಿದಷ್ಟು ಹಣವನ್ನು ಹೊಂದಿಸಿ ನಮಗೆ ಕೊಡಬೇಕು. ಇಲ್ಲದಿದ್ದರೆ ಹಲವು ಕೇಸುಗಳಲ್ಲಿ ನಿನ್ನ ಮಗನ ಹೆಸರನ್ನು ಸೇರಿಸಿ ನಿನ್ನ ಮಗನನ್ನು ಮತ್ತು ನಿಮ್ಮಗಳನ್ನು ಕೈಗೆ ಕೋಳ ಹಾಕಿ ಊರಿನಲ್ಲಿ ಮೆರೆವಣಿಗೆ ಮಾಡಿ, ಜೈಲಿಗೆ ಕಳುಹಿಸುತ್ತೇವೆ ಎಂದು ಹೆದರಿಸಿ, ಬೆದರಿಸಿ ಕಳುಹಿಸಿದ್ದಾರೆ.

ಮನೆಗೆ ಹಿಂತಿರುಗಿದ ನಂತರ ನನ್ನ ಗಂಡ ನಾಗರಾಜಪ್ಪನು ತುಂಬಾ ಭಯಬೀತರಾಗಿದ್ದರು. ನಾನು ಮತ್ತು ನನ್ನ ಗಂಡ, ನನ್ನ ಮಗನಿಗೆ ಪೊಲೀಸರು ಯಾಕೆ ಈ ರೀತಿ ಚಿತ್ರಹಿಂಸೆ ನಮಗೆ ನೀಡುತ್ತಿದ್ದಾರೆ. ನಿನೇನಾದರೂ ಮಾಡಿದ್ದರೆ ನಮ್ಮ ಬಳಿ ಹೇಳು ಎಂದು ವಿಚಾರಿಸಿದೆವು. ಆಗ ನನ್ನ ಮಗ ನಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರು ಯಾವ ಕಾರಣಕ್ಕಾಗಿ ನನ್ನ ಹಿಂದೆ ಬಿದ್ದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ, ಅವರಿಗೆ ನಾವೇಕೆ ಹಣ ಕೊಡಬೇಕು. ನನ್ನ ಮೇಲೆ ಯಾರಾದರೂ ದೂರು ಕೊಟ್ಟಿದ್ದರೆ ಅವರು ಯಾಕೆ ತಿಳಿಸುತ್ತಿಲ್ಲ. ನಾನು ಏನು ತಪ್ಪು ಮಾಡಿಲ್ಲ ಎಂದು ಪರಿಪರಿಯಾಗಿ ನಮ್ಮ ಮುಂದೆ ಅಲವತ್ತುಕೊಂಡನು ಎಂದು ಪತಿ ರೂಪಾ ಎಸ್ಪಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇಷ್ಟಾದರೂ ಪೊಲೀಸರು ಪದೇ ಪದೇ ನನ್ನ ಗಂಡನನ್ನು ಸ್ಟೇಷನ್‌ಗೆ ಕರೆದುಕೊಂಡು ಹೋಗುತ್ತೇವೆ ಎಂದು ಎಲ್ಲಿಗೊ ಕರೆದುಕೊಂಡು ಹೋಗಿ ಹಣಕ್ಕೆ ಬೇಡಿಕೆ ಇಟ್ಟು ಬೇಗನೆ ನಾವು ಹೇಳಿದಷ್ಟು ಹಣಕೊಟ್ಟು ಸೆಟಲ್‌ಮೆಂಟ್ ಮಾಡಿಕೊಂಡರೆ ನಿಮಗೆ ಒಳ್ಳೆಯದು ಇಲ್ಲದಿದ್ದರೆ ನಿನಗೂ ನಿನ್ನ ಮಗನಿಗೂ ಹಾಗೂ ನಿನ್ನ ಕುಟುಂಬದವರಿಗೆ ತುಂಬಾ ತೊಂದರೆಯಾಗುತ್ತದೆ. ನೀವು ಕೇಸು, ಬೇಲು, ಕೋರ್ಟ ಕಚೇರಿ ಅಂತಾ ಅಲೆದು ಅಲೆದು ಹಣ ಕಳೆದುಕೊಳ್ಳುತ್ತೀರ ಅದರ ಬದಲು ನಾವು ಹೇಳಿದಂತೆಕೇಳಿ ಸೆಟಲ್‌ಮೆಂಟ್ ಮಾಡಿಕೊಳ್ಳಿ. ಬೇಗ ಹಣ ನೀಡಿದಷ್ಟು ನಿಮಗೆ ಒಳ್ಳೆಯದು ಇಲ್ಲದಿದ್ದರೆಮುಂಬರುವ ಪರಿಣಾಮಗಳು ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ

ಪೊಲೀಸರು ಬಂದಿದ್ದು ಯಾಕೆ, ಏನು ಹೇಳಿದ್ರು

ದಿನಾಂಕ 27/01/2024 ರ ಮದ್ಯರಾತ್ರಿ ಸಮಯ ಸುಮಾರು 11:20 ರ ಸಮಯದಲ್ಲಿ ಪತ್ನಿ ರೂಪಾ ಹಾಗೂ ಗಂಡ, ನನ್ನ ಹೆಣ್ಣುಮಕ್ಕಳು ಹಾಗೂ ಗರ್ಭಿಣಿಯಾದ ನನ್ನ ಸೊಸೆ ನಮ್ಮ ಮನೆಯಲ್ಲಿ ಮಲಗಿರುವಾಗ ಕಾರಿನ ಶಬ್ದವಾಯಿತು. ಆಗ ಜೋರಾಗಿ ನಾಯಿ ಬೊಗಳುವ ಶಬ್ದ ಕೇಳಿಎಚ್ಚರಗೊಂಡವು. ತದನಂತರ ಯಾರೋ ಗಂಡಸರು ನಮ್ಮ ಮನೆ ಸುತ್ತಮುತ್ತ ಅಡ್ಡಾಡುತ್ತಿದ್ದರು.ಸ್ವಲ್ಪ ಸಮಯದಲ್ಲಿ ಕೋಲಿನಿಂದ ನಮ್ಮ ಮನೆಯನ್ನು ತಟ್ಟುವ ಶಬ್ದ ಕೇಳಿತು. ಮನೆಯಲ್ಲಿದ್ದ
ನಮಗೆಲ್ಲರಿಗೂ ಭಯವಾಯಿತು. ಇದ್ದಕ್ಕಿದ್ದಂತೆ ಬಾಗಿಲು ಜೋರಾಗಿ ಬಡಿಯುವ ಶಬ್ದಹೆಚ್ಚಾಯಿತು. ನಾವೆಲ್ಲರೂ ಜೀವ ಭಯದಿಂದ ನಲಗಿ ಹೋಗಿದ್ದೆವು. ಹೊರಗಿನಿಂದ ಬಾಗಿಲು ತೆಗೆಯಿರಿ ನಾವು ಪೊಲೀಸ್‌ನವರು ಬಂದಿದ್ದೇವೆ. ಬಾಗಿಲು ತೆಗೆಯಿರಿ ಎಂದು ಒಂದೇ ಸಮನೆ
ಕೂಗ ತೊಡಗಿದರು. ಬೇರೆ ದಾರಿಕಾಣದೆ ನನ್ನ ಗಂಡನು ಹೋಗಿ ಬಾಗಿಲು ತೆಗೆದನು. ನನ್ನ ಹೆಣ್ಣುಮಕ್ಕಳು ಮನೆಯಲ್ಲಿ ತುಂಬಾ ಭಯದಿಂದ, ಚಿಂತಾಕ್ರಾಂತರಾಗಿದ್ದರು. ನನಗೂ ತುಂಬಾ ಭಯವಾಗಿದ್ದು, ಮಧ್ಯರಾತ್ರಿಯಲ್ಲಿ ಏಕಾಏಕಿ, ಕೈಯಲ್ಲಿ ಲಾಟಿ ಹಿಡಿದು ಮೇಲ್ಕಂಡ ನಾಲ್ಕು ಜನ
ಪೊಲೀಸರು ನಮ್ಮ ಮನೆಯ ಒಳಗೆ ನುಗ್ಗಿದರು. ನನ್ನ ಗಂಡ ನೀವು ಈ ರೀತಿ ರಾತ್ರಿ ಸಮಯದಲ್ಲಿಏಕಾಏಕಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಇರುವ ಮನೆಗೆ ಬರಬಾರದು. ದಯವಿಟ್ಟು ನೀವು ಬೆಳಗಿನ ಹೊತ್ತು ಬಂದು ಯಾವ ವಿಚಾರಣೆಯನ್ನಾದರೂ ಮಾಡಿಕೊಳ್ಳಿ ಎಂದು ಹೇಳಿದರೂ ಪೊಲೀಸರು ಕೇಳಲಿಲ್ಲ. ಬದಲಾಗಿ ಎಲ್ಲೋ ದುಡ್ಡು, ಆರೆಂಜ್ ಮಾಡುತ್ತೀನಿ ಅಂತಾ ಹೇಳಿದ್ದೆಯಲ್ಲ, ಎಲ್ಲಿ ದುಡ್ಡು, ನಿನ್ನ ಮಗನನ್ನು ಬಚ್ಚಿಟ್ಟು ಆಟ ಆಡುತ್ತಿದ್ದೀಯ, ಎಲ್ಲಿ ನಿನ್ನ ಮಗ, ಅವನು ಕೈಗೆ ಸಿಗಲಿ ಪೊಲೀಸರು ಅಂದ್ರೆ ಏನು ಅಂತ ಅವನಿಗೆ ತೋರಿಸ್ತಿವಿ ಎಂದು ಪತಿ ನಾಗರಾಜಪ್ಪಗೆ ಹೆದರಿಸಿದರು. ಅಲ್ಲದೆ ನನ್ನ ಗಂಡನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ. ನಾವು ಪೊಲೀಸಿನವರು ಯಾರ ಮನೆಗೆ ಎಷ್ಟು ಹೊತ್ತಿಗಾದರೂ ಹೋಗಿ ವಿಚಾರಣೆ ನಡೆಸುವ ಅಧಿಕಾರ ನಮಗಿದೆ.

ನಾವು ಎಲ್ಲಿ ಬೇಕಾದರೂ ಹೋಗಿ ವಿಚಾರಣೆ ನಡೆಸಬಹುದು. ಯಾರನ್ನು ಬೇಕಾದರೂ ಹೋಗಿ ವಿಚಾರಣೆ ನಡೆಸಬಹುದು. ನೀವೇನಾದರೂ ತೊಂದರೆ ಮಾಡಿದರೆ ನಿಮ್ಮನ್ನು ಈಗಲೇ ಅರೆಸ್ಟ್ ಮಾಡಿ ಲಾಕಪ್ ಒಳಗೆ ಹಾಕುತ್ತೇವೆ ಎಂದು ಬೆದರಿಸುತ್ತಾ ನಮ್ಮ ಮನೆಯನ್ನೆಲ್ಲ ಹುಡುಕಾಡಿದರು.

ಮನೆಯ ಬೆಡ್ ರೂಂ. ಅಟ್ಟಿ, ಹಾಲ್, ಅಡಿಗೆ ಮನೆ ಇತರೆ ಎಲ್ಲಾ ಕಡೆ ಅವರಿಗೆ ಮನಬಂದಂತೆ ಮಾತನಾಡುತ್ತಾ, ತಮ್ಮ ಮನಸೋ ಇಚ್ಛೆ ವರ್ತಿಸುತ್ತಾ ಮನೆಯಲ್ಲೆಲ್ಲ ಅಡ್ಡಾಡ ತೊಡಗಿದರು. ಮೊಬೈಲ್‌ನಲ್ಲಿ ರೆಕಾರ್ಡ ಮಾಡುವುದು. ಪೋಟೋ ತೆಗೆಯುವುದು ಮಾಡುತ್ತಿದ್ದರು. ವರ್ತನೆಗಳನ್ನು ಸಹಿಸಲು ಅಸಾಧ್ಯವಾದ್ದರಿಂದ ನನ್ನ ಗಂಡನು ಸ್ವಲ್ಪ ಜೋರುದನಿಯಲ್ಲಿ ಅವರನ್ನು ಪ್ರಶ್ನಿಸಲು ಶುರು
ಮಾಡಿದಾಗ, ಮಾತಿಗೆ ಮಾತು ಬೆಳೆಯತೊಡಗಿತು. ಪೊಲೀಸರ ಏರು ಧ್ವನಿಯ ಬೈದರು.ನಮ್ಮ ಮನೆಯಲ್ಲಿ ಏನೋ ಗಲಾಟೆ ನಡೆಯುತ್ತಿದೆ ಎಂದು ನಮ್ಮ ಗ್ರಾಮದ ಮಂಜುನಾಥ ತಂದೆ ಚಂದ್ರಶೇಖರಪ್ಪ, ಗೋಪಿ ತಂದೆ ಮೈಲಪ್ಪ, ಸಾವಿತ್ರಮ್ಮ ಕೋಂ ಮೈಲಪ್ಪ, ರಘು ತಂದೆ ಮೈಲಪ್ಪ,ಅಜಯ್ ತಂದೆ ನಾಗರಾಜ ಮತ್ತು ಇತರರು ನಮ್ಮ ಮನೆಯ ಬಳಿಗೆ ಬಂದರು. ಅವರೆಲ್ಲರು ಪೊಲೀಸರನ್ನು ಯಾಕೆ ಈ ರೀತಿ ಇವರ ಮನೆಗೆ ಏಕಾಏಕಿ ರಾತ್ರಿ ಹೊತ್ತಲ್ಲಿ ಬಂದು ತೊಂದರೆ ಕೊಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಮೇಲ್ಕಂಡ ಪೊಲೀಸರು ಕೇಳೋಕೆ ನಿವ್ಯಾರು.
ನಾವು ಪೊಲೀಸಿನವರು, ಮಪ್ತಿಯಲ್ಲಿದ್ದೇವೆ. ನಮ್ಮ ಡ್ಯೂಟಿ
ಮಾಡುತ್ತಿದ್ದೇವೆ. ನಮಗೆ ಎಸ್.ಪಿ. ಮತ್ತು ಡಿ.ವೈ. ಎಸ್.ಪಿ. ಸಾಹೇಬರು ಮತ್ತು ಪಿ.ಎಸ್.ಐ. ಸಾಹೇಬರು ಆದೇಶ ನೀಡಿದ್ದಾರೆ ಅದರಂತೆ ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಯಾರಾದರೂ ನಮಗೆ ತೊಂದರೆ ನೀಡಿದರೆ ನಿಮಗೂ ಕೇಸು ಹಾಕುತ್ತೇವೆ ಎಂದು ಬೆದರಿಸಿದಾಗ, ಗ್ರಾಮಸ್ಥರು ಮತ್ತು ಪೊಲೀಸರ ಮದ್ಯೆ ವಾಗ್ವಾದ ಶುರುವಾಯಿತು. ಕೊನೆಗೆ ಗ್ರಾಮಸ್ಥರ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲು ತಡಬಡಾಯಿಸಿ. ಈಗ ಹೋಗುತ್ತೇವೆ. ನಾವು ಹೇಳಿದಂತೆ ನೀವು ಕೇಳದಿದ್ದರೆ ನಿಮಗೆ ಸ್ಟೇಷನ್‌ಗೆ ಕರೆದುಕೊಂಡು ಹೋಗಿ ಬೆಂಡೆತ್ತುತ್ತೇವೆ. ಎಂದು ಹೇಳಿ ಹೊರಟು ಹೋದರು. ಈ ಎಲ್ಲಾ ಘಟನೆಗಳಿಂದ ವಿಚಲಿತರಾದ ನಮ್ಮನ್ನು ನಮ್ಮ ಗ್ರಾಮದ ಜನರು ಸಮಾಧಾನಪಡಿಸಿ ಮನೆಯ ಒಳಗೆ ಕಳುಹಿಸಿದರು.

ನಾನು ಮುಂದುವರೆದು ಹೇಳುವುದೇನೆಂದರೆ ಈ ಪೊಲೀಸರವರು ನನ್ನ ಗಂಡ ಹಾಗೂ ಮಗನಿಗೆ ಸುಮಾರು 30 ಲಕ್ಷ ಹಣವನ್ನು ಬೇಡಿಕೆ ಇಟ್ಟು ವಿನಾ:ಕಾರಣ ತೊಂದರೆ ನೀಡುತ್ತಿದ್ದಾರೆ. ನಮಗೆ ಅಷ್ಟೊಂದು ಹಣ ನೀಡುವ ಶಕ್ತಿ ಇಲ್ಲವೆಂದು ತಿಳಿಸಿದ್ದಾಗ್ಯೂ ಅವರು ತದನಂತರದಲ್ಲಿ 15 ಲಕ್ಷ, ಇಲ್ಲವಾದರೆ 10 ಲಕ್ಷ ಹಣವನ್ನಾದರೂ ಹೊಂದಿಸಿ ಕೊಡಿ. ಅದಕ್ಕಿಂತ ಕಡಿಮೆ ಆಗುವುದಿಲ್ಲ. ಏಕೆಂದರೆ ಈ ಹಣದಲ್ಲಿ ಎಸ್ಪಿ.. ಡಿ.ವೈ.ಎಸ್.ಪಿ. ಎಲ್ಲರಿಗೂ ಕೊಡಬೇಕು. ಅವರು ಹೇಳಿದಂತೆ ನಾವು ಹಣ ಡಿಮ್ಯಾಂಡ್ ಮಾಡುತ್ತಿದ್ದೇವೆ. ಈ ಹಿಂದೆಯೂ ಸಹ ಹಲವಾರು ಜನರ ಬಳಿ ಈ ರೀತಿ ಹಣ ತೆಗೆದುಕೊಂಡು ಕೊಟ್ಟ ಮಾತಿನಂತೆ ಯಾವುದೇ ಕೇಸು ಮಾಡದೇ ನಡೆದುಕೊಂಡಿದ್ದೇವೆ. ಇದೆಲ್ಲ ನಮ್ಮ ಡಿಪಾರ್ಟಮೆಂಟ್ ವಿಷಯ, ನಾವು ನಿಮಗೆ ಹೇಳಬಾರದು ಆದರೂ ಹೇಳುತ್ತಿದ್ದೇವೆ. ನೀವು ಹಣ ನೀಡದಿದ್ದರೆ ನಮ್ಮ ಡಿಪಾರ್ಟಮೆಂಟ್ ಅನ್ನು ಎದುರು ಹಾಕಿಕೊಂಡಂತೆ ಆಗುತ್ತದೆ. ಇಲ್ಲಿಯವರೆಗೂ ಪೊಲೀಸ್‌ನವರನ್ನು, ಡಿಪಾರ್ಟಮೆಂಟ್‌ನ್ನು ಎದುರುಹಾಕಿಕೊಂಡು ಯಾರೂ ಜಯಿಸಿಲ್ಲ. ನೆಮ್ಮದಿಯಾಗಿಲ್ಲ. ನಾವು ನಿಮ್ಮ ಒಳ್ಳೆಯದಕ್ಕೆ ಹೇಳುತ್ತಿದ್ದೇವೆ. 10 ಲಕ್ಷಕ್ಕಿಂತ ಕಡಿಮೆ ಹಣಕ್ಕೆ ಪಿ.ಎಸ್.ಐ. ಸಾಹೇಬರನ್ನು ಒಪ್ಪಿಸುವುದು ಕಷ್ಟ ಬೇಗ ಹಣ ನೀಡಿ ಇಲ್ಲದಿದ್ದರೆ ನಿಮ್ಮ ಮಗನನ್ನು ಮರೆತುಬಿಡಿ ಅವನು ಜೈಲು ಪಾಲಾಗುತ್ತಾನೆ ಎಂದು ಬೆದರಿಕೆ ನೀಡಿದ್ದಾರೆ.

ನಾನು ಹೇಳುವುದೇನೆಂದರೆ ಮೇಲ್ಕಂಡ ಪೊಲೀಸರು ಯಾವುದೇ ದೂರು, ಎಫ್.ಐ.ಆರ್. ಇಲ್ಲದೆ ಆಕ್ರಮವಾಗಿ ಮಧ್ಯರಾತ್ರಿಯಲ್ಲಿ ನಮ್ಮ ಮನೆಗೆ ನುಗ್ಗಿ, ದಾಂಧಲೆ ನಡೆಸಿ, ಅನುಚಿತವಾಗಿ ವರ್ತಿಸಿರುತ್ತಾರೆ ಮತ್ತು ನನಗೆ ಮತ್ತು ನನ್ನ ಕುಟುಂಬದವರಿಗೆ ಇವರುಗಳಿಂದ ಜೀವ ಬೆದರಿಕೆ ಇರುತ್ತದೆ. ನಾವು ಏನು ತಪ್ಪ ಮಾಡದಿದ್ದರೂ ನಮಗೆ ತೊಂದರೆ ಮಾಡಿರುತ್ತಾರೆ. ಮಕ್ಕಳ ಜೀವನ ಮುಂದೆ ಹೇಗೋ ಎಂಬ ಚಿಂತೆ ಆವರಿಸಿದೆ. ನಮಗೆ ರಕ್ಷಣೆ ನೀಡಬೇಕಾದ
ಪೊಲೀಸರೆ ನಮಗೆ ತೊಂದರೆ ಕೊಡುತ್ತಿದ್ದಾರೆ. ಮೇಲ್ಕಂಡ ಪೊಲೀಸರ ದೌರ್ಜನ್ಯದಿಂದ ನಾನು,ನನ್ನ ಕುಟುಂಬದವರು ಸಾಮೂಹಿಕವಾಗಿ ಪ್ರಾಣ ಕಳೆದುಕೊಳ್ಳಬೇಕು ಎಂಬಷ್ಟು ನಾವುಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ. ಆದ್ದರಿಂದ
ಪೊಲೀಸರ ಅದರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೂಪ ಎಂಬುವರು ಎಸ್ಪಿಗೆ ದೂರು ನೀಡಿದ್ದರು. ಈ ದೂರಿನ್ವಯ ತನಿಖೆ ನಡೆಸಿದ ಡಿವೈಎಸ್ಪಿ ಪ್ರಶಾಂತ್ ಮನೋಳಿ ತನಿಖೆ ನಡೆಸಿ ಎಸ್ಪಿಗೆ ವರದಿ ನೀಡಿದ್ದಾರೆ. ವರದಿನ್ವಯ ಲೇಡಿಸಿಂಗಂ ಖ್ಯಾತಿಯ ಉಮಾ ಪ್ರಶಾಂತ್ ನಾಲ್ಕು ಜನ ಪೊಲೀಸರನ್ನು ಅಮಾನತು ಮಾಡಿದ್ದಾರೆ. ಏನೇ ಆಗಲಿ ಇದರಲ್ಲಿ ಯಾರು ತಪ್ಪು ಇದೆ ಎನ್ನುವುದಕ್ಕಿಂತ ಕಾನೂನು ಪಾಲನೆಯಾಗಿದೆಯಾ ಎಂಬ ಬಗ್ಗೆ ತನಿಖೆ ನಡೆದರೆ ಮಾತ್ರ ಯಾರು ನಿರಪರಾಧಿ ಎಂದು ತಿಳಿಯುತ್ತದೆ.

Leave a Reply

Your email address will not be published. Required fields are marked *

error: Content is protected !!