ಡಿ ಆರ್ ಆರ್ ಪಾಲಿಟೆಕ್ನಿಕ್ ನಲ್ಲಿ ಜುಲೈ 24 ರಂದು “ಹಳೇ ವಿದ್ಯಾರ್ಥಿಗಳ ಮಿಲನ-22”

ದಾವಣಗೆರೆ: ಡಿಆರ್ಆರ್ ಸರಕಾರಿ ಪಾಲಿಟೆಕ್ನಿಕ್ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಸಂಘದ ಸದಸ್ಯರುಗಳ ಮಿಲನ-22 ಜುುಲೈ.24 ರಂದು ಬೆಳಿಗ್ಗೆ 11 ಕ್್ಕ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಕಾಲೇಜಿನ ನಿವೃತ್ತ ಪ್ರಾಂಶುಪಾಲರುಗಳು ಉದ್ಘಾಟಿಸಲಿದ್ದು, ಪ್ರಾಂಶುಪಾಲ ಜಿ.ಬಿ. ಸದಾನಂದಪ್ಪ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್.ಎಲ್. ಲಾ ಕಾಲೇಜಿನ ಅಧ್ಯಕ್ಷರಾದ ಆರ್.ಎಲ್. ಉಮಾಶಂಕರ್, ನಿವೃತ್ತ ಪ್ರಾಂಶುಪಾಲರಾದ ಎಂ. ಪಂಚಾಕ್ಷರಿ, ಎಂ.ಜಿ. ಹೊರಡಿ, ಟಿ.ಜಿ. ವಿರುಪಾಕ್ಷಪ್ಪ, ಹೆಚ್.ಜಯಪ್ಪ, ಬಿ.ಟಿ. ಮಾರ್ಕಂಡೇಯ, ಮಹ್ಮದ್ ಜಾವೀದ್ ಪಾಲ್ಗೊಳ್ಳಲಿದ್ದಾರೆ.