ಮೋದಿ ಕಾರ್ಯಕ್ರಮಕ್ಕೆ ಬಂದವರಲ್ಲಿ ಆರೊಗ್ಯ ಸಮಸ್ಯೆ ಆದ್ರೆ ಆರೈಕೆ ಆಸ್ಪತ್ರೆಯಿಂದ ಉಚಿತ ಸೇವೆ

ದಾವಣಗೆರೆ: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸುವ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಪಾಲ್ಗೊಳಲ್ಲಿದ್ದು, ಈ ವೇಳೆ ಯಾರಿಗಾದರು ದೇಹಾರೋಗ್ಯದಲ್ಲಿ ಏರುಪೇರು ಆದರೆ ಅಂತಹವರಿಗೆ ಆರೈಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತೆಯಿಂದ ಉಚಿತ ತುರ್ತು ಚಿಕಿತ್ಸಾ ಸೇವೆ ಒದಗಿಸಲಾಗುವುದು ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ್ ತಿಳಿಸಿದ್ದಾರೆ.
ನೆಚ್ಚಿನ ಪ್ರಧಾನಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ರಾಜ್ಯದ ಬೇರೆ ಬೇರೆ ಭಾಗದಿಂದ ದಾವಣಗೆರೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಬಿ.ಪಿಯಲ್ಲಿ ಏರುಪೇರು, ಮಧುಮೇಹದಲ್ಲಿ ಏರಿಳಿತ, ದೈಹಿಕವಾಗಿ ನಿಶಕ್ತಿ, ತೆಲೆ ಸುತ್ತು, ಎದೆಯುರಿಯಂತ ಸಹಜ, ಸಾಮಾನ್ಯ ತೊಂದರೆಗಳು ಎದುರಾಗುವುದು ಸಹಜ.
ವಸುದೈವ ಕುಟುಂಬಕಂ ಎಂಬ ತತ್ವದಡಿ ಈ ಒಂದು ದಿನ ವೈದ್ಯಕೀಯವಾಗಿ ಉಪಚರಿಸುವ ಮೂಲಕ ಅತಿಥಿ ಸೇವೆ ಮಾಡುತ್ತಿದ್ದು, ಸಾರ್ವಜನಿಕರು ಆರೋಗ್ಯದ ಕುರಿತು ನಿರ್ಲಕ್ಷ್ಯ ಮಾಡದೇ ತಕ್ಷಣವೇ ಆರೈಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬಂದು ಉಚಿತ ಆರೈಕೆ ಪಡೆಯಬೇಕು ಎಂದು ತಿಳಿಸಿದ್ದಾರೆ.