ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಶಾಸಕ ರೇಣುಕಾಚಾರ್ಯ ಭರ್ಜರಿ ಡ್ಯಾನ್ಸ್

ಹೊನ್ನಾಳಿ : ಪಟ್ಟಣದ ಪಟ್ಟಣಶೆಟ್ಟಿ ಲೇಔಟ್‌ನಲ್ಲಿ ಶುಕ್ರವಾರ ಸಂಜೀವಿನಿ ಒಕ್ಕೂಟ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆವತಿಯಿಂದ ಏರ್ಪಡಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಶಾಸಕ ರೇಣುಕಾಚಾರ್ಯ ಭರ್ಜರಿ ಡ್ಯಾನ್ಸ್ ಮಾಡಿದರು.
ಶಾಸಕ ರೇಣುಕಾಚಾರ್ಯ ಗಣಪತಿ ನೃತ್ಯದಿಂದ ಹಿಡಿದು ಮಕ್ಕಳು ನಡೆಸುವ ಎಲ್ಲ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡುವುದು ಕಾಮನ್. ಅಂತೆಯೇ ಮಹಿಳೆಯರ ಜತೆ ಶಾಸಕರು ನಾನಾ ಭಂಗಿಯಲ್ಲಿ ಮೈ ಕುಣಿಸಿದರು.
ಅದರಲ್ಲಿ ಕೊಡವ, ಲಂಬಾಣಿ ನೃತ್ಯ ನೋಡುಗರ ಗಮನ ಸೆಳೆಯಿತು. ಸಾಮಾನ್ಯವಾಗಿ ಸಭೆ, ಸಮಾರಂಭಗಳಲ್ಲಿ ಶಾಸಕರು ಕುಣಿತ ಹಾಕೋದು ಕಾಮನ್..
ಆದರೆ ಮಹಿಳೆಯೊರೊಂದಿಗೆ ವಿಶೇಷ ಹೆಜ್ಜೆ ಹಾಕಿದ್ದು ಇತರರಿಗೆ ವಿಶೇಷವೇನಿಸಿತು. ಮಹಿಳೆಯರು ನಾನಾ ರೀತಿಯಲ್ಲಿ ಡ್ಯಾನ್ಸ್ ಮಾಡಿದರೆ ಶಾಸಕ ರೇಣುಕಾಚಾರ್ಯ ಒಂದೇ ಭಂಗಿಯಲ್ಲಿ ನೃತ್ಯ ಮಾಡಿದರು.
ಶಾಸಕ ರೇಣುಕಾಚಾರ್ಯ ಮಾತನಾಡಿ, ಮಹಿಳೆಯರಲ್ಲಿ ರಾಜಕೀಯ,ಸಾಮಾಜಿಕ,ಆರ್ಥಿಕ ಬಲ ತುಂಬುವಲ್ಲಿ ಬಿಜೆಪಿ ಸರಕಾರ ಮಹಿಳೆಯರ ಪರವಾದ ಯೋಜನೆಗಳನ್ನು ಜಾರಿಗೆ ತಂದು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ ಎಂದರು.