ಆನ್‌ಲೈನ್ ಜಾಬ್ ಮೋಸದ ಜಾಲಕ್ಕೆ ₹ 1.99 ಲಕ್ಷ ಕಳೆದುಕೊಂಡ ಖಾಸಗಿ ಸಂಸ್ಥೆಯ ನೌಕರ

ಆನ್‌ಲೈನ್ ಜಾಬ್ ಮೋಸದ ಜಾಲಕ್ಕೆ ₹ 1.99 ಲಕ್ಷ ಕಳೆದುಕೊಂಡ ಖಾಸಗಿ ಸಂಸ್ಥೆಯ ನೌಕರ

ದಾವಣಗೆರೆ: ಆನ್‌ಲೈನ್ ಜಾಬ್ ಮೋಸದ ಜಾಲಕ್ಕೆ ಬಿದ್ದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ₹ 1.99 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಜಗಳೂರು ತಾಲ್ಲೂಕಿನ ನಿವಾಸಿ ಪ್ರದೀಪ್‌ಕುಮಾರ್ ಎಚ್.ಎಂ. ಹಣ ಕಳೆದುಕೊಂಡವರು.

‍ಪ್ರದೀಪ್‌ಕುಮಾರ್ ಫೇಸ್‌ಬುಕ್ ನೋಡುತ್ತಿರುವಾಗ ಉದ್ಯೋಗಕ್ಕೆ ಸಂಪರ್ಕಿಸಿ ಎಂಬ ಸಂದೇಶದೊಂದಿಗೆ ಮೊಬೈಲ್‌ ನಂಬರ್ ಇತ್ತು. ಅದಕ್ಕೆ ಮೆಸೇಜ್ ಮಾಡಿದಾಗ ‘ಮನೆಯಲ್ಲೇ ಕೆಲಸ’ ಎಂದು ಅಪರಿಚಿತ ವ್ಯಕ್ತಿ ವಾಟ್ಸ್‌ಆ್ಯಪ್ ಮೂಲಕ ಒಂದು ಲಿಂಕ್ ಕಳುಹಿಸಿದ.

ಪ್ರದೀಪ್‌ಕುಮಾರ್ ಆ ಲಿಂಕ್ ಅನ್ನು ತೆರೆದಾಗ ಪ್ರಾಡೆಕ್ಟ್‌ಗಳನ್ನು ಖರೀದಿಸಿದರೆ ಕಮಿಷನ್ ನೀಡುವುದಾಗಿ ಆಮಿಷ ತೋರಿದ್ದಾನೆ. ಇದನ್ನು ನಂಬಿದ ಪ್ರದೀಪ್ ಅವರು ಕಳುಹಿಸಿದ ಲಿಂಕ್‌ನಿಂದ ಅಕೌಂಟ್ ಓಪನ್ ಮಾಡಿದ್ದಾರೆ. ಅಲ್ಲದೇ ಅವರು ಹೇಳಿದ ನಂಬರ್‌ಗೆ ₹ 300 ಕಳುಹಿಸಿದಾಗ ವಾಪಸ್‌ ₹ 638 ಬಂದಿದೆ. ಇದನ್ನು ನಂಬಿದ ಪ್ರದೀಪ್ ವಿವಿಧ ಹಂತಗಳಲ್ಲಿ ₹ 1.09 ಲಕ್ಷ ಹಾಗೂ ಪತ್ನಿಯ ಅಕೌಂಟ್‌ನಿಂದ ₹ 60 ಸಾವಿರ ಕಳುಹಿಸಿದ್ದಾರೆ. ಆ ಬಳಿಕ ಯಾವುದೇ ಕಮಿಷನ್ ಬಾರದೇ ಇದ್ದರಿಂದ ಅನುಮಾನಗೊಂಡು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!