Part 2: ಅನ್ನಭಾಗ್ಯ ಯೋಜನೆಯ ಪಡಿತರ ಸಾಗಾಣಿಕೆ ಲಾರಿಗಳಲ್ಲಿ ಗೊಬ್ಬರ ಸಾಗಾಣಿಕೆ.! ಮೌನ ವೃತ್ತಿ ಆಚರಿಸುತ್ತಿದೆ ಆಹಾರ ಇಲಾಖೆ.!
ದಾವಣಗೆರೆ: ಕರ್ನಾಟಕ ಸರ್ಕಾರದ 5G ಯೋಜನೆಯ ಪ್ರಮುಖ ಯೊಜನೆ ಅನ್ನಭಾಗ್ಯ ಯೋಜನೆ. ಈ ಯೋಜನೆಯ ಪಡಿತರ ಧಾನ್ಯಗಳನ್ನು ಸಾಗಾಣಿಕೆಗಾಗಿ ಸರ್ಕಾರ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡುತ್ತಿದೆ. ಆದರೆ ಆಹಾರ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಗೂ ಪಡಿತರ ಸಾಗಾಣಿಕೆ ಗುತ್ತಿಗೆದಾರರಿಂದ ಯೋಜನೆಯ ಪಡಿತರ ಹಾಳಾಗುವ ಸಾದ್ಯತೆ ಹೆಚ್ಚಾಗಿದೆ.
ಪಡಿತರ ಸಾಗಾಣಿಕೆ ಗುತ್ತಿಗೆ ಕಾರ್ಯಾದೇಶ ಪಡೆದು ಕರಾರು ಮಾಡಿಕೊಂಡಿರುವ ಲಾರಿಗಳಲ್ಲಿ ಪಡಿತರ ಸಾಗಾಣಿಕೆ ಮಾಡಬೇಕು ಎಂಬ ನಿಯಮವಿದೆ. ಆದರೆ ಪಡಿತರ ಧಾನ್ಯಗಳನ್ನು ಸಾಗಿಸಲು ಬಳಸುವ ಲಾರಿಗಳಲ್ಲಿ ಗೊಬ್ಬರ ಸಾಗಾಣಿಕೆ ಕೂಡ ಮಾಡುತ್ತಿದ್ದು ಆಹಾರ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕೆ ಎಫ್ ಸಿ ಎಸ್ ಸಿ ಗೋದಾಮಿನಿಂದ ತಾಲ್ಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಅನ್ನಬಾಗ್ಯ ಯೋಜನೆಯ ಪಡಿತರ ಅಹಾರಧಾನ್ಯ ಸಾಗಾಣಿಕೆಗೆ ಜಿತೇಂದ್ರ ಕುಮಾರ್ ಎಂಬುವವರು ಗುತ್ತಿಗೆ ಪಡೆದಿರುತ್ತಾರೆ. ಇವರೂ ಸೇರಿದಂತೆ ಕೆಲ ಗುತ್ತಿಗೆದಾರರು ನಿಯಮಬಾಹಿರವಾಗಿ ಆಹಾರಧಾನ್ಯ ಸಾಗಿಸಲು ಒಪ್ಪಂದ ಮಾಡಿಕೊಂಡಿರುವ ಲಾರಿಗಳಲ್ಲಿ ದಾವಣಗೆರೆಯ ಕೇಂದ್ರ ಉಗ್ರಾಣದಿಂದ ಗೊಬ್ಬರ ಸಾಗಾಣಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಸಾಗಾಣಿಕೆ ಗುತ್ತಿಗೆದಾರರು ಜಗಳೂರು ತಾಲ್ಲೂಕಿನಲ್ಲಿ ಪಡಿತರ ಸಾಗಾಣಿಕೆ ಕಾರ್ಯ ಮಾಡಲು ಸ್ವಂತ ಲಾರಿಗಳು ಹಾಗೂ ಕರಾರು ಲಾರಿಗಳು ಪಡಿತರ ಸಾಗಾಣಿಕೆ ಮಾತ್ರ ಮಾಡಬೇಕು. ಹಾಗೂ ಒಂದು ತಾಲ್ಲೂಕಿಗೆ ಸಾಗಾಣಿಕೆ ಒಪ್ಪಂದದಲ್ಲಿ ನಮೂದಿಸಿರುವ ಸ್ವಂತ ಹಾಗೂ ಕರಾರು ಲಾರಿಗಳನ್ನು ಮತ್ತೊಂದು ತಾಲ್ಲೂಕು ಅಥವಾ ಜಿಲ್ಲೆಗೆ ಆಹಾರಧಾನ್ಯದ ಸಾಗಾಣಿಕೆಗೆ ಉಪಯೋಗಿಸಲು ಅವಕಾಶವಿರುವುದಿಲ್ಲ. ಹಾಗೂ ಒಂದು ಟೆಂಡರ್ ನಲ್ಲಿ ಭಾಗವಹಿಸಿ ಒಪ್ಪಂದ ಮಾಡಿಕೊಂಡಿರುವ ಲಾರಿಗಳನ್ನು ಮತ್ತೊಂದು ಟೆಂಡರ್ ನಲ್ಲಿನ ಆಹಾರ ಧಾನ್ಯಗಳನ್ನು ಸಾಗಾಣಿಕೆಯಲ್ಲಿ ಭಾಗವಹಿಸಿಲು ಅವಕಾಶವಿರುವುದಿಲ್ಲ ಎಂದು ಷರತ್ತುಗಳನ್ನು ವಿಧಿಸಿ ಕರಾರು ಮಾಡಿಕೊಂಡು ಕಾರ್ಯಾದೇಶ ನೀಡಲಾಗಿರುತ್ತದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಸೇರಿದಂತೆ ಇನ್ನಿತರೆ ತಾಲ್ಲೂಕಿನಲ್ಲಿ ಪಡಿತರ ಸಾಗಾಣಿಕೆ ಪಡೆದಿರುವ ಗುತ್ತಿಗೆದಾರರು ಸಕ್ರಮದ ಹೆಸರಲ್ಲಿ ಅಕ್ರಮವಾಗಿ ಜಿಲ್ಲಾಧಿಕಾರಿಗಳು ಸೂಚಿಸಿರುವ ಮಾರ್ಗವನ್ನು ಬಿಟ್ಟು ಮಾರ್ಗಪಲ್ಲಟ ಕಾರ್ಯದಲ್ಲಿ ತೊಡಗಿರುವುದು ಕಂಡುಬಂದಿದೆ.
ಇದೆಲ್ಲದರ ವಿಚಾರವಾಗಿ ದಾವಣಗೆರೆ ಆಹಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ವಾಟ್ಸ್ ಅಪ್ ಮೂಲಕ ಮಾಹಿತಿ ತಿಳಿಸಿದರು ಉ ಉಢಾಫೆ ಮಾತುಗಳನ್ನು ಹೇಳುತ್ತಾ ತಮ್ಮ ಕರ್ತವ್ಯ ನಿಭಾಯಿಸಲು ವಿಫಲರಾಗಿದ್ದಾರೆ ಎನ್ನಬಹುದು.ಬಡವರಿಗೆ ಸಿಗಬೇಕಾದ ಆಹಾರಧಾನ್ಯದ ಗುಣಮಟ್ಟವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬ ಯಕ್ಷ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ.