ದಾವಣಗೆರೆ ಪಿಬಿ ರಸ್ತೆಯಲ್ಲಿ ಮತ್ತೊಂದು ಭಯಾನಕ ಅಪಘಾತ.! ಕೆ ಎಸ್ ಆರ್ ಟಿ ಸಿ ಬಸ್ ಸ್ಕೂಟರ್ ಗೆ ಡಿಕ್ಕಿ.! ಸವಾರನ ಪ್ರಾಣ ಉಳಿಸಿದ ಹೆಲ್ಮೆಟ್.!

ದಾವಣಗೆರೆ: ದಾವಣಗೆರೆಯಲ್ಲಿ ಕಳೆದ ತಿಂಗಳೊಂದರಲ್ಲಿ ಮೂರು ಬೇರೆ ಬೇರೆ ರಸ್ತೆ ಅಪಘಾತದಲ್ಲಿ ಮೂವರ ಸಾವು ಮಾಸುವ ಮುನ್ನವೇ ಮತ್ತೊಂದು ಭೀಕರ ಅಪಘಾತ ಪಿಬಿ ರಸ್ತೆಯ ಸಾರಿಗೆ ಬಸ್ ನಿಲ್ದಾಣದ ಬಳಿಯ ರಸ್ತೆ ಸಾಕ್ಷಿಯಾಗಿದೆ.

ದಾವಣಗೆರೆ ಶ್ರಮಜೀವಿ ಲಾಡ್ಜ್ ಮ್ಯಾನೇಜರ್ ಸೈಫುದ್ದೀನ್ ಶುಕ್ರವಾರ ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ವೇಳೆ ಅಪಘಾತ ಸಂಭವಿಸಿದ್ದು ಪ್ರಾಣಾಪಾಯದಿಂದ ಅದೃಷ್ಟವಶಾತ್ ಬದುಕುಳಿದಿರುವುದೇ ರೋಚಕ ಸಂಗತಿ.

ಸೈಫುದ್ದೀನ್ ಪೂರ್ಣ ಪ್ರಮಾಣದ ಹೆಲ್ಮೆಟ್ ಹಾಕಿದ್ದ ಕಾರಣ ಬಚಾವಾಗಿದ್ದು, ಸಧ್ಯ ಚಿಕಿತ್ಸೆ ಪಡೆದು ಮನೆಯಲ್ಲಿದ್ದಾರೆ. ನಿನ್ನೆ ಸ್ಕೂಟರ್ ನಲ್ಲಿ ರಸ್ತೆ ದಾಟುವ ವೇಳೆ ಸರ್ಕಾರಿ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ,
ಬಸ್ ನ ಗಾಲಿಗೆ ಸ್ಕೂಟರ್ ಸಿಲುಕಿದೆ ಸಧ್ಯ ಸೈಫುದ್ದೀನ್ ಹೆಲ್ಮೆಟ್ ಧರಿಸಿದ ಕಾರಣ ಡಿಕ್ಕಿ ಹೊಡೆದ ರಭಸಕ್ಕೆ ಕೊಂಚ ದೂರ ಹೋಗಿ ಬಿದ್ದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪ್ರಾಯದಿಂದ ಬದುಕುಳಿದಿದ್ದಾನೆ.

ಈ ಹಿಂದೆ ಡಿಸೆಂಬರ್ ವೇಳೆ ಮೂರು ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದರು. ಅರುಣ ಚಿತ್ರಮಂದಿರದ ಬಳಿ ಪಾದಚಾರಿ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ಅರುಣಾ ಚಿತ್ರಮಂದಿರದ ಬಳಿ ನಡೆದಿತ್ತು.ರೊಚ್ಚಿಗೆದ್ದ ಸಾರ್ವಜನಿಕರು ಬಸ್ ಗಾಜು ಪುಡಿಪುಡಿ ಮಾಡಿದ್ದಾರೆ. ಈ ಖಾಸಗಿ ಬಸ್ ಆರಾಧ್ಯ ಸ್ಟೀಲ್ ಕಂಪನಿಗೆ ಸೇರಿದ ಬಸ್ ಎಂದು ತಿಳಿದುಬಂದಿದೆ.

ಎಂ ಸಿ ಸಿ ಬಿ ಬ್ಲಾಕ್ ನಲ್ಲಿ ಬೆಳ್ಳಂಬೆಳಿಗ್ಗೆ ಕಾರು ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಮೆಡಿಕಲ್ ವಿದ್ಯಾರ್ಥಿನಿಯೊಬ್ಬಳು ದುರ್ಮರಣಕ್ಕೀಡಾಗಿರುವ ಘಟನೆ ನಗರದ ಎಂಸಿಸಿ ಬಿ ಬ್ಲಾಕ್ ನ ಈಜುಕೊಳದ ಬಳಿ ನಡೆದಿತ್ತು.

ಬಾಪೂಜಿ ಡೆಂಟಲ್ ಕಾಲೇಜಿನ ಸ್ನಾತಕೋತ್ತರ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ಹೈದರಾಬಾದ್ ಮೂಲದ ಪ್ರಿಯಾಂಕಾ (25) ಮೃತಪಟ್ಟ ದುರ್ದೈವಿ.
ಪ್ರಿಯಾಂಕ ಎಂದಿನಂತೆ ಇಂದು ಬೆಳಿಗ್ಗೆ ಕಾಲೇಜಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬಂದ ಕಾರೊಂದು ಬೈಕ್ ಗೆ ಗುದ್ದಿದ್ದು, ಪ್ರಿಯಾಂಕ ಕೆಳಗೆ ಬಿದ್ದು ತಲೆಗೆ ಬಲವಾದ ಏಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿತಾದರೂ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನ ಹೆಚ್ಚಾಗುತ್ತಿದ್ದು ಕಾನೂನಿಗೆ ಎಲ್ಲರೂ ಗೌರವ ಕಾಪಾಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!