ಡಕಾಯಿತರ ಬಂಧನ : ಸ್ವತ್ತು ವಶ ಮೊಬೈಲ್ ಆ್ಯಪ್‌ನಲ್ಲಿ ಪರಿಚಯವಾಗಿದ್ದವ ಹಾಕಿದ್ದ ಸ್ಕೆಚ್
ದಾವಣಗೆರೆ : ಸಾರ್ವಜನಿಕರು ಮೊಬೈಲ್ ಆ್ಯಪ್ ಮೂಲಕ ಪರಿಚಯ ಆಗುವ ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಇರಿ ಹಾಗೂ ಇಂತಹ ಘಟನೆಗಳು ಜರುಗಿದಾಗ ಕೂಡಲೇ ತುರ್ತು ಸಹಾಯವಾಣಿಗೆ ಸಂಪರ್ಕಿಸಿ. ಹೀಗೆ ಮೊಬೈಲ್ ಆ್ಯಪ್‌ನಲ್ಲಿ ಪರಿಚಯವಾಗಿದ್ದ ಸ್ನೇಹಿತನೊಂದಿಗೆ ಕಾರಿನಲ್ಲಿ ಪ್ರಮೋದ್ ಎಂಬುವವರು ದಾವಣಗೆರೆ ವ್ಯಾಪ್ತಿಯ ದೊಡ್ಡಬಾತಿ ಗ್ರಾಮದ ದೊಗ್ಗಳ್ಳಿ ರಸ್ತೆಯಲ್ಲಿ ಹೋಗುತ್ತಿರುವಾಗ ಯಾರೋ ನಾಲ್ವರು ಬಂದು ಕಾರನ್ನು ಅಡ್ಡಹಾಕಿ ಸುಮಾರು 70 ಸಾವಿರ ರೂ. ಬೆಲೆಯ 20 ಗ್ರಾಂ ಬಂಗಾರದ ಸರವನ್ನು ಕಿತ್ತುಕೊಂಡು ಹಲ್ಲೆಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಪ್ರಮೋದ್ ಎಸ್. ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಪರಿಣಾಮ ಡಕಾಯಿತರ ಜಾಡು ಸಿಕ್ಕಿದ್ದು, ನಾಲ್ವರನ್ನು ದಸ್ತಗಿರಿ ಮಾಡಿ ಬಂಧಿಸಲಾಗಿದೆ.
ಹೇಗೆ ನಡೆಯಿತು ಡಕಾಯಿತಿ? :
ಪ್ರಮೋದ್ ಎಂಬುವವರು ಎರಡು ದಿನಗಳ ಹಿಂದೆ ಮೊಬೈಲ್ ಆ್ಯಪ್‌ನಲ್ಲಿ ಪರಿಚಯವಾಗಿದ್ದ ಸ್ನೇಹಿತ ಅಭಿ ಎಂಬುವವನೊAದಿಗೆ ಕಾರಿನಲ್ಲಿ ಹೋಗುತ್ತಿರುವ ವೇಳೆ ಈ ಘಟನೆ ಜರುಗಿದೆ. ಹಂತ-ಹAತವಾಗಿ ಎಲ್ಲಾ ಮಾಹಿತಿಯನ್ನು ಅಭಿ ಕಾರಿನಲ್ಲಿದ್ದುಕೊಂಡೇ ನೀಡಿದ್ದಾನೆ. ಇದರ ಕುರಿತು ನೀಡಿದ ದೂರಿನನ್ವಯ ಬೆನ್ನತ್ತಿದ್ದ ಪೊಲೀಸರು ಮಾಹಿತಿ ಕಲೆ ಹಾಕಿ ಬಂಧಿಸಿದ್ದಾರೆ. ಮೊಬೈಲ್ ಆ್ಯಪ್‌ನಲ್ಲಿ ಪರಿಚಯವಾಗಿದ್ದ ವ್ಯಕ್ತಿ ಈ ನಾಲ್ವರೊಂದಿಗೆ ಸೇರಿಕೊಂಡು ಮೊದಲೇ ಸಂಚು ರೂಪಿಸಿ ಪ್ರಮೋದ್‌ನೊಂದಿಗೆ ಸ್ನೇಹ ಬೆಳೆಸಿ ಹಣ ದೋಚಲು ಮುಂದಾಗಿದ್ದಾನೆ. ಕಳ್ಳರು ಒಡವೆ ದೋಚುವ ವೇಳೆ ಅಭಿ ನಾಟಕ ಮಾಡಿ ಅನುಮಾನ ಬರಬಾರದೆಂದು ಅಲ್ಲಿಂದ ಓಡಿ ಹೋಗಿದ್ದಾನೆ ಎಂಬ ಮಾಹಿತಿ ಪೊಲೀಸ್ ಇಲಾಖೆಯ ತನಿಖೆಯಲ್ಲಿ ಗೊತ್ತಾಗಿದೆ. ಈ ಪ್ರಕರಣವನ್ನು ಪೊಲೀಸ್ ಉಪಾಧೀಕ್ಷಕ ಬಸವರಾಜ್ ಬಿ.ಎಸ್, ಇವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಲಿಂಗನಗೌಡ ನೆಗಳೂರು, ಸಿಬ್ಬಂದಿಗಳಾದ ಅಂಜಿನಪ್ಪ, ಆಚಿಜನೇಯ, ಮಜೀದ್, ರಮೇಶ್‌ನಾಯ್ಕ್, ಮಾರುತಿ, ಬಾಲಾಜಿ, ದೇವೇಂದ್ರನಾಯ್ಕ್, ಅಹಮ್ಮದ್ ಸೈಫುಲ್ಲಾ, ಮಹೇಶ, ರಾಘವೇಂದ್ರ, ಉಮೇಶ್ ಬಿಸ್ನಾಳ್, ಶಾಂತಕುಮಾರ, ನೂರುಲ್ಲಾ ಶರಿಫ್‌ರನ್ನು ಒಳಗೊಂಡ ತಂಡ ಪ್ರಕರಣದ ಬೆನ್ನತ್ತಿತ್ತು. ಸದರಿ ತನಿಖಾ ತಂಡವು ಆರೋಪಿತರಿಂದ 70 ಸಾವಿರ ರೂ. ಬೆಲೆಯ 20 ಗ್ರಾಂ ಬಂಗಾರದ ಸರವನ್ನು ವಶಪಡಿಸಿಕೊಂಡಿದ್ದಾರೆ.