ಯಾವ ವಸ್ತು ಖರೀದಿಸಿದರೂ ರಶೀದಿ ಕೇಳಿ ಪಡೆಯಿರಿ – AICWC ರಾಜ್ಯಾಧ್ಯಕ್ಷ ಡಾ: ವರ್ಷ
ದಾವಣಗೆರೆ: ಯಾವುದೇ ವಸ್ತುಗಳನ್ನು ಖರೀದಿ ಮಾಡಿದರೂ ಕಡ್ಡಾಯವಾಗಿ ಬಿಲ್ ಕೇಳಿ ಪಡೆಯಬೇಕು ಎಂದು ಆಲ್ ಇಂಡಿಯಾ ಕನ್ಸೂಮರ್ ವೆಲ್ ಫೇರ್ ಕೌನ್ಸಿಲ್ ರಾಜ್ಯದ್ಯಾಕ್ಷ ಡಾ ವರ್ಷಾ ಹೇಳಿದರು. ಯಾವ ವಸ್ತು ಖರೀದಿಸಿದರೂ ರಶೀದಿ ಕೇಳಿ ಪಡೆಯಿರಿ – AICWC ರಾಜ್ಯಾಧ್ಯಕ್ಷ ಡಾ: ವರ್ಷ ತಿಳಿಸಿದ್ದಾರೆ.
ಆಲ್ ಇಂಡಿಯಾ ಕನ್ಸೂಮರ್ ವೆಲ್‌ಫೇರ್ ಕೌನ್ಸಿಲ್, ಕ್ರೆಡಿಟ್-ಐ ಸಂಸ್ಥೆ ಮೈಸೂರು, ಸರಸ್ವತಿ ವಿದ್ಯಾಸಂಸ್ಥೆ, ದಾವಣಗೆರೆ ಮತ್ತು ಆರೇಕೆ ಸೇವಾ ಸಂಸ್ಥೆ, ಗರುಡಚರಿತೆ ವಾರಪತ್ರಿಕೆ ಹಾಗೂ ಗರುಡ ವಾಯ್ಸ್ ಕಾಂ. ಸಹಯೋಗದಲ್ಲಿ ನಗರದ ಎಸ್.ವಿ.ಎಸ್. ಡಬ್ಲೂ ಪಿ.ಯು. ಕಾಲೇಜಿನಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗ್ರಾಹಕರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಖರೀದಿಯಲ್ಲಿ ಅಥವಾ ಖರೀದಿಸಿದ ವಸ್ತುಗಳಲ್ಲಿ ಏನೇ ಲೋಪವಾದರೂ ನಾವು ಪರಿಹಾರ ಪಡೆಯಬೇಕಾದರೆ ರಶೀದಿ ಅತ್ಯಗತ್ಯವಾಗಿದೆ. ಆದ್ದರಿಂದ ರಶೀದಿ ಪಡೆಯುವುದನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ಬಿಡಿ ಪದಾರ್ಥಗಳ ಖರೀದಿ ಕಡಿಮೆ ಮಾಡಿದಷ್ಟು ಉತ್ತಮ. ಅದರ ಬದಲಾಗಿ ಪ್ಯಾಕ್ ಮಾಡಿದ ವಸ್ತುಗಳನ್ನು ಖರೀದಿಸಬೇಕು. ಅದರ ಮೇಲಿನ ಮಾಹಿತಿಯನ್ನು ಓದಿ ತಿಳಿದುಕೊಳ್ಳಬೇಕು. ಅಲ್ಲದೇ ಪ್ರತಿಯೊಂದು ವಿಷಯಕ್ಕೂ ಒಂದೊಂದು ಮಾರ್ಕ್ ಇರುತ್ತದೆ. ಪ್ಯಾಕೇಟ್ ಮೇಲೆ ನಮೂದಿಸಿದ ಮಾರ್ಕ್‌ಗಳ ಬಗ್ಗೆಯೂ ಅರಿತಿರಬೇಕು ಎಂದು ಹೇಳಿದರು.
ದಿನಸಿ ಅಂಗಡಿಗಳು ಶೇ.1ರಷ್ಟು ಮಾತ್ರ ಜಿಎಸ್‌ಟಿ ಕಟ್ಟುತ್ತವೆ. ಅಂತಹ ಅಂಗಡಿಗಲ್ಲಿ ವಸ್ತುಗಳನ್ನು ಖರೀದಿಸಿದರೆ ನಿಮಗೆ ಉಳಿತಾಯವಾಗುತ್ತದೆ ಎಂದು ಸಲಹೆ ನೀಡಿದರು.
ಎಸ್.ವಿ.ಎಸ್ ಸಂಸ್ಥೆಯ ಸಂಸ್ಥಾಪಕ ಚಂದ್ರಶೇಖರ್ ಮಕ್ಕಳಿಗೆ ಮಾಹಿತಿ ನೀಡಿದ್ರು.
ಆಲ್ ಇಂಡಿಯ ಕನ್ಸೂಮರ್ ವೆಲ್ ಫೇರ್ ಕೌನ್ಸಿಲ್ ರಾಜ್ಯಾಧ್ಯಕ್ಷ ಡಾ. ವರ್ಷ, ಆರೈಕೆ ಸೇವಾ ಸಂಸ್ಥೆಯ ಕಾರ್ಯದರ್ಶಿ ಶ್ರೇಯಸ್, ಗರುಡಚರಿತೆ ವಾರಪತ್ರಿಕೆ ಸಂಪಾದಕ ಹೆಚ್.ಎಂ.ಪಿ ಕುಮಾರ್, ಉಪ ಸಂಪಾದಕ ಚನ್ನಪ್ಪ, ಪತ್ರಿಕೆಯ ಸಿಬ್ಬಂದಿ ಗಣೇಶ್, ಚೇತನ್, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು