ಚೀಲೂರು ಬಳಿ ಓರ್ವನ ಕೊಲೆ ಮಾಡಿ ಸ್ಕಾರ್ಪಿಯೋ ಬಿಟ್ಟು ಪರಾರಿಯಾದ ಹಂತಕರು

ಚೀಲೂರು ಬಳಿ ಓರ್ವನ ಕೊಲೆ

ನ್ಯಾಮತಿ: ನ್ಯಾಮತಿ ತಾಲೂಕು ಚೀಲೂರು ಸಮೀಪದ ಗೋವಿನಕೋವಿ ಗ್ರಾಮದ ಹಳ್ಳದ ಬಳಿ ಕೊಲೆಯಾದ ಶಿವಮೊಗ್ಗದ ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮೃತ ಆಂಜನೇಯ (28) ಗಾಯಗೊಂಡ ಮಧು (27) ಕೊಲೆ ಮಾಡಲು ಬೆಂಗಳೂರು ಪಾಸಿಂಗ್ ಹೊಂದಿದ್ದ ಸ್ಕಾರ್ಪಿಯೋ ಕಾರು ಬಂದಿದೆ.

ಇವರಿಬ್ಬರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಸ್ಕಾರ್ಪಿಯೋ ಕಾರಿನಲ್ಲಿ ಆಗಮಿಸಿದ ಗುಂಪು ಬೈಕ್ ಗೆ ಡಿಕ್ಕಿ ಹೊಡೆಸಿ ಮೊದಲು ಕೆಳಕ್ಕೆ ಬೀಳಿಸಿದೆ. ನಂತರ ಇವರಿಬ್ಬರ ಮೇಲೆ ಮಾರಕಾಸಗಳಿಂದ ದಾಳಿ ನಡೆಸಿದೆ. ಕಾರು ರಸ್ತೆ ಬದಿಯ ತೋಟದಲ್ಲಿ ಸಿಲುಕಿ ಬಿದ್ದಿದೆ. ಇದರಿಂದ ಕಾರನ್ನು ಅಲ್ಲಿಯೇ ಬಿಟ್ಟು, ಆರೋಪಿಗಳೆಲ್ಲರು ಪರಾರಿಯಾಗಿದ್ದಾರೆ. ಆಂಜನೇಯ ಹಾಗೂ ಮಧು ಹರಿಹರ ತಾಲೂಕು ಭಾನುವಳ್ಳಿಯವರಾಗಿದ್ದಾರೆ. ಇವರಿಬ್ಬರು ಚಾಲಕ ವೃತ್ತಿ ಕೆಲಸ ಮಾಡುತ್ತಿದ್ದರು. ಇವರಿಬ್ಬರ ವಿರುದ್ದ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿ ತೆರೆಯಲಾಗಿದೆ. ಇವರ ಮೇಲೆ ದಾಳಿ ನಡೆಸಿದ ಆರೋಪಿಗಳ ವಿವರ ಕಲೆ ಹಾಕಲಾಗುತ್ತಿದೆ.

ಶಿವಮೊಗ್ಗದ ಹಂದಿಹಣ್ಣಿ ಈತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹರಿಹರ ತಾಲೂಕು ಬಾನೊಳ್ಳಿ ಗ್ರಾಮದ ಮಧು ಮತ್ತು ಆಂಜನೇಯ ಇವರುಗಳು ಮೇಲ್ಕಂಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ತಮ್ಮ ಗ್ರಾಮಕ್ಕೆ ತಮ್ಮ ಮೋಟಾರ್ ಸೈಕಲ್ ನಲ್ಲಿ ಹಿಂದಿರಿಗುತ್ತಿರುವಾಗ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಗೋವಿನಾಕೋವಿ ಗ್ರಾಮದ ಹೊನ್ನಾಳಿ ಶಿವಮೊಗ್ಗ ರಸ್ತೆಯಲ್ಲಿ ಅವರನ್ನು ಹಿಂಬಾಲಿಸಿದ ಸ್ಕಾರ್ಪಿಯೋ ವಾಹನದಲ್ಲಿದ್ದವರು ಅಡ್ಡಗಟ್ಟಿ ತಡೆದು ತಲ್ವಾರ್ ನಿಂದ ಹಲ್ಲೆ ಮಾಡಿದ್ದರಿಂದ ಸ್ಥಳದಲ್ಲಿಯೇ ಆಂಜನೇಯ ಮೃತಪಟ್ಟಿದ್ದು ಈತನ ಜೊತೆಯಲ್ಲಿದ್ದ ಮದುಗೆ ಮೈಕೈಗೆ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮವಹಿಸಲಾಗುವುದು” ಎಂದು ದಾವಣಗೆರೆ ಎಸ್ ಪಿ ರಿಷ್ಯಂತ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ

Leave a Reply

Your email address will not be published. Required fields are marked *

error: Content is protected !!