ವಿಧಾನಸಭೆ ಚುನಾವಣೆ ಪೂರ್ವಭಾವಿ ಮತದಾನದ ಅಣಕು ಪ್ರದರ್ಶನ
ದಾವಣಗೆರೆ: ವಿಧಾನಸಭಾ ಚುನಾವಣೆ 2023ರ ಪೂರ್ವಬಾವಿಯಾಗಿ ಮತದಾನದ ಅರಿವು. ಮತಯಂತ್ರಗಳ ಬಳಕೆ. ಮತ್ತು ಚುನಾವಣೆಯ ನೀತಿ ಸಂಹಿತೆಯ ಕಾನೂನುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಉದ್ದೇಶದಿಂದ ವೆಂಕಟೇಶ್ವರ ದೇವಾಲಯ ರಸ್ತೆ ಭಾರತೀಯ ಸೇವಾದಳ ದಲ್ಲಿ ಚುನಾವಣಾ ಆಯೋಗದಿಂದ “ಅಣಕು ಮತದಾನವನ್ನು” ಏರ್ಪಡಿಸಲಾಗಿದೆ. ಈ ಒಂದು ಅಣುಕು ಕಾರ್ಯಕ್ರಮದಲ್ಲಿ ಕನ್ನಡ ಸೇನೆಯ ರಾಜ್ಯಧ್ಯಕ್ಷರಾದ ಗೋಪಾಲ ಗೌಡ್ರು, ಉಪನಿರೀಕ್ಷಕರಾದ ಎಂ ವಿಜಯ್, ಕಿರಿಯ ಆರೋಗ್ಯ ನಿರೀಕ್ಷಕರಾದ ಲಕ್ಷ್ಮಿ ಮೇಡಂ, ಅಣ್ಣಯ್ಯ ವಲಯ ಸಂಘಟಕರು ಭಾರತೀ ಸೇವಾದಳ, ಮಹಾನಗರ ಪಾಲಿಕೆಯ ಅರವಿಂದ್, ಕೆಎನ್ ಗಿರೀಶ್ ನಾಯಕ್ ಸೆಕ್ಟರ್ ಆಫೀಸರ್, ಇನ್ನು ಅನೇಕ ಸಾರ್ವಜನಿಕರು ಭಾಗವಹಿಸಿದ್ದರು.
ಬಡಾವಣೆ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಕೆಎಂ ವಿಜಯ್ ಉಪಸ್ಥಿತರಿದ್ದರು