ಪ್ರಧಾನಿ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನಕ್ಕೆ ಯತ್ನ.! ಯುವ ಕಾಂಗ್ರೆಸ್ ಮುಖಂಡರ ಬಂಧಸಿ ಬಿಡುಗಡೆ

ದಾವಣಗೆರೆ: ಇಂದು ನಗರದಲ್ಲಿ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿಯವರ ಸಂಸದ್ ಸದಸ್ಯತ್ವ ಅನರ್ಹತೆ ಮಾಡಿರುವುದನ್ನು ಖಂಡಿಸಿ ಜಯದೇವ ವೃತ್ತದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಭಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಮಾತನಾಡಿ ದೇಶದಲ್ಲಿ ಸರ್ವಾಧಿಕಾರಿಯ ಆಡಳಿತ ನಡೆಯುತ್ತಿದೆ ಇದು ದೇಶಕ್ಕೆ ಅಪಾಯಕಾರಿಯಾಗಿದೆ ಪ್ರಧಾನಿಯವರ ವಿರುದ್ಧ ಯಾರೂ ಸಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಇದು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಬ್ಬ ರಾಷ್ಟ್ರೀಯ ಯುವ ಕಾಂಗ್ರೆಸ್ ಸಂಚಾಲಕ ಶಾಂಜ್ ಖಾನ್ ಮಾತನಾಡಿ ದೇಶದಲ್ಲಿ ಹಿಟ್ಲರ್ ಆಡಳಿತ ಜಾರಿಯಲ್ಲಿದೆ ಇದೆಲ್ಲರ ಅಂತ್ಯ ಸಮೀಪಿಸುತ್ತಿದೆ ನಮ್ಮ ನಾಯಕರ ವಿರುದ್ಧದ ಷಡ್ಯಂತ್ರಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಇಡೀ ದೇಶದಲ್ಲಿ ಇದಕ್ಕೆ ಯುವ ಜನತೆ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನವೀನ್ ನಲವಾಡಿ ಮಾತನಾಡಿ ದೇಶದಲ್ಲಿ ಸದ್ಯ ಸತ್ಯ ಮಾತಾಡುವುದನ್ನು ನಿಷೇಧಿಸಿದ್ದಾರೆ, ಸತ್ಯ ಹೇಳಿದರೆ ಶಿಕ್ಷೆ ಅನ್ನೋ ಮಟ್ಟಿಗೆ ಈಗಿನ ಸರ್ಕಾರ ನಡೆದುಕೊಳ್ಳುತ್ತಿರುವುದು ನೋಡಿದರೆ ನಾವು ಯಾವ ಕಾಲಘಟ್ಟದಲ್ಲಿದ್ದೇವೆ ಎಂದು ಅರ್ಥವಾಗುತ್ತಿಲ್ಲ ಇಂಥಾ ಸರ್ವಾಧಿಕಾರಿಗಳಿಗೆ ತಕ್ಕ ಪಾಠ ಕಲಿಸಲೇ ಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ಬಿತ್ತಿಪತ್ರ ಪ್ರದರ್ಶಿಸಲಾಯಿತು ಪ್ರಧಾನಿ ಪ್ರತಿಕೃತಿ ದಹನಕ್ಕೆ ಪ್ರಯತ್ನಿಸಿದರು ಆದರೆ ಪೊಲೀಸ್ ಇಲಾಖೆಯವರು ಅವಕಾಶ ಮಾಡಿಕೊಡದ ಕಾರಣ ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಯುವ ಕಾಂಗ್ರೆಸ್ ಮುಖಂಡರಾದ ಇಮಾಮ್ ಹುಸೇನ್,ವರುಣ್,ಫಜ್ಲೂರ್ ರಹಮಾನ್,ಶ್ರೀನಿವಾಸ್, ಕೃಷ್ಣ,ಹರೀಶ್,ಹರ್ಷ, ತಿಪ್ಪೇಸ್ವಾಮಿ ಅನೇಕ ಮುಖಂಡರು ಪಾಲ್ಗೊಂಡಿದ್ದರು. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.