ಆಡಿಯೋ ಬಿಡುಗಡೆ
ದಾವಣಗೆರೆ: ಖ್ಯಾತ ನಿರ್ದೇಶಕ ಸೂರಿ ನಿರ್ದೇಶನದ ಯಂಗ್ ರೆಬಲ್‌ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್‌ಮ್ಯಾನರ್ ಚಿತ್ರದ ಆಡಿಯೋ ಬಿಡುಗಡೆಯನ್ನು ನಗರದ ಜಯದೇವ ವೃತ್ತದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ಅಂಬರೀಶ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಕೆ.ಸಿ.ಮಂಜುನಾಥ ತಿಳಿಸಿದ್ದಾರೆ.
ಆಡಿಯೋ ಬಿಡುಗಡೆಯನ್ನು ಸಿಹಿಹಂಚುವುದರ ಮೂಲಕ ಬಿಡುಗಡೆ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಕನ್ನಡಪರ ಹೋರಾಟಗಾರ ಕೆ.ಜಿ.ಶಿವಕುಮಾರ್, ಟಿ.ಶಿವುಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಫಕೃದ್ಧೀನ್, ಕಾಂಮ್ರೇಡ್ ಚಂದ್ರು, ಮೋಹನ ಆಗಮಿಸಲಿದ್ದಾರೆ.