ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಬಿ.ಬಿ.ಎಂ.ಪಿ. ಅಧಿಕಾರಿ ಮತ್ತು ನೌಕರರಿಂದ ಬೃಹತ್ ಪ್ರತಿಭಟನೆ
ಬೆಂಗಳೂರು:19ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದದ ವತಿಯಿಂದ ಸಾಮೂಹಿಕ ರಜೆ ಹಾಕಿ ಬಿಬಿಎಂಪಿ ಕೇಂದ್ರ ಕಛೇರಿ ಅವರಣದಲ್ಲಿ ಬೃಹತ್ ಪ್ರತಿಭಟನೆ ಮಾಡಿದರು.
ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು,ಗೌರವಾಧ್ಯಕ್ಷರಾದ ಹೆಚ್.ವಿ.ಅಶ್ವಥ್, ಉಪಾಧ್ಯಕ್ಷರಾದ ಸೂರ್ಯಕುಮಾರಿ, ಪ್ರಧಾನ ಕಾರ್ಯದರ್ಶಿ ಕೆ.ಜಿ.ರವಿರವರು ಅಪಾರ ಸಂಖ್ಯೆಯ ಅಧಿಕಾರಿ ಮತ್ತು ನೌಕರರ ಜೊತೆಯಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅಧ್ಯಕ್ಷರಾದ ಅಮೃತ್ ರಾಜ್ ರವರು ಮಾತನಾಡಿ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಕಳೆದ ಎರಡು ವರ್ಷಗಳಿಂದ ಮಾನ್ಯ ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಉನ್ನತ ಅಧಿಕಾರಿಗಳ ಮನವಿ ಸಲ್ಲಿಸಿದರು, ಯಾವುದೇ ಪ್ರಯೋಜನವಾಗಿಲ್ಲ, ಅದರಿಂದ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ಮಾಡುತ್ತಿದ್ದೇವೆ.
ಅಧಿಕಾರಿ ಮತ್ತು ನೌಕರರಿಗೆ ನೀಡಿದ ಆರೋಗ್ಯ ಚಿಕಿತ್ಯೆ ಕಾರ್ಡ್ ವಿಫಲವಾಗಿದೆ ಉತ್ತಮ ಚಿಕಿತ್ಯೆ ಪಡೆಯಲು ನಗರದ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಚಿಕಿತ್ಯೆ ಪಡೆಯಲು ಬಿಬಿಎಂಪಿ ಹೆಲ್ತ್ ಕಾರ್ಡ್ ನಿಂದ ಚಿಕಿತ್ಯೆ ಪಡೆಯಲು ಅವಕಾಶ ಕಲ್ಪಿಸಬೇಕು.
198ವಾರ್ಡ್ ನಿಂದ 243ವಾರ್ಡ್ ಆಗಿ ಹೆಚ್ಚುವರಿಯಾಗಿದೆ 45ವಾರ್ಡ್ ಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಬೇಕು.ಕಳೆದ ನಾಲ್ಕು ವರ್ಷಗಳಿಂದ ಪಾಲಿಕೆ 5219ಹುದ್ದೆಗಳು ನೇಮಕಾತಿ ಮಾಡಲು ವಿಳಂಬ ಧೋರಣೆಯಿಂದ ಕೆಲಸದ ಒತ್ತಡ ಹೆಚ್ಚಾಗಿದೆ.
ಸರ್ಕಾರ ಮತ್ತು ಕೌನ್ಸಿಲ್ ನಲ್ಲಿ 707ಹುದ್ದೆಗಳ ನೇರ ನೇಮಕಾತಿ ಮಾಡಲು ಆನುಮೋದನೆ ನೀಡಿದ್ದು ಕೊಡಲೇ ನೇಮಕಾತಿಗೆ ಪ್ರಕಿಯೆ ಪ್ರಾರಂಭವಾಗಬೇಕು.
2007ರಲ್ಲಿ ವಿಲೀನಗೊಂಡಿರುವ ಸಮಾನ ಕೆಲಸಕ್ಕೆ ಸಮಾನ ವೇತನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರನ್ನ ಸರ್ಕಾರವೂ ಅಧಿಕಾರಿ ಮತ್ತು ನೌಕರರಿಗೆ ಸಕ್ರಮತಿ ಆದೇಶ ಹೊರಡಿಸಬೇಕು.
ಕರ್ತವ್ಯ ಲೋಪದಡಿ ಅಧಿಕಾರಿ ಮತ್ತು ನೌಕರರ 6ತಿಂಗಳಿಂದ ಅಮಾನತ್ತಿನಲ್ಲಿದ್ದು ಅವರ ಕುಟುಂಬ ನಿರ್ವಹಣೆ ಮಾಡಲು ಬಹಳ ಸಂಕಷ್ಟದಲ್ಲಿ ಇದ್ದಾರೆ, ನಿಯಾನುಸಾರ ಕೆಲಸಕ್ಕೆ ತೆಗೆದುಕೊಳ್ಳಲು ಕ್ರಮ ವಹಿಸುವುದು.
ಪ್ರಥಮದರ್ಜೆ ಸಹಾಯಕರ ಹುದ್ದೆಯಿಂದ ವ್ಯವಸ್ಥಾಪಕ ಹುದ್ದೆಗೆ ಮುಂಬಡ್ತಿ ಮತ್ತು ತೋಟಗಾರಿಕೆ ಮಾಲಿ ಹುದ್ದೆಯಿಂದ ಮೇಸ್ತ್ರಿ ಹುದ್ದೆಗೆ ಮುಂಬಡ್ತಿ ನೀಡುವ ಕುರಿತು.
ವೃಂದ ಮತ್ತು ನೇಮಕಾತಿ ನಿಯಮಾವಳಿ ವಿರುದ್ದವಾಗಿ ಎರವಲು ಸೇವೆಯ ಮೇಲೆ ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಪಆಯುಕ್ತರು, ಮುಖ್ಯ,ಕಾರ್ಯಪಾಲಕ, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಹಿರಿಯ/ಕಿರಿಯ ಆರೋಗ್ಯ ಪರಿವೀಕ್ಷಕರು ಕೊಡಲೆ ಮಾತೃ ಇಲಾಖೆಗೆ ಕಳುಹಿಸಿ ಕೊಡುವುದು.
ಪಾಲಿಕೆ ಆರೋಗ್ಯ ಇಲಾಖೆಗೆ ಕಾನೂನು ಬಾಹಿರವಾಗಿ ನೇಮಕವಾಗಿರುವ ಮಾರ್ಷಲ್ ಗಳನ್ನು ನೇಮಿಸಿರುವುದನ್ನ ಕೊಡಲೆ ಹಿಂಪಡೆಯಬೇಕು.ಕೊವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ನಾಡಪ್ರಭು ಕೆಂಪೇಗೌಡ ದಿನಾಚರಣೆ ಮತ್ತು ಡಾ||ಬಿ.ಆರ್.ಅಂಬೇಡ್ಕರ್ ದಿನಾಚರಣೆ ಅಚರಿಸಲು ಸಾಧ್ಯವಾಗಿಲ್ಲ. ಈಗ ಕಾರ್ಯಕ್ರಮ ಮಾಡಲು ಅಡ್ಡಿ ಅತಂಕವಿಲ್ಲ ಕೊಡಲೆ ದಿನಾಚರಣೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ಬಿಬಿಎಂಪಿ ಉತ್ತಮ ಅಧಿಕಾರಿ,ನೌಕರರಿಗೆ ಕೆಂಪೇಗೌಡ ಪ್ರಶಸ್ತಿಗೆ ಪರಿಗಣನೆ ಮಾಡಬೇಕು ಎಂದು ಹೇಳಿದರು.
ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು ಸಂಘದ ಪದಾಧಿಕಾರಿಗಳಾದ ಡಿ.ರಾಮಚಂದ್ರ, ಕೆ.ಮಂಜೇಗೌಡ, ಎಸ್.ಜಿ.ಸುರೇಶ್, ಕೆ.ನರಸಿಂಹ,ಹೆಚ್.ನಂಜಪ್ಪ,ಕೆ.ಭಾಸ್ಕರ್, ಎಂ.ಮಂಜುನಾಥ್, ವಿಭಾ,ಸಂತೋಷ್ ಕುಮಾರ್ ನಾಯ್ಕ,ರೇಣುಕಾಂಬ,ಅರ್ಮುಗಂ,ಪ್ರವೀಣ್ ಕುಮಾರ್,ಪ್ರವೀಣ್ ಕುಮಾರ್ ಮತ್ತು ಸಾಯಿಶಂಕರ್,ಬಾಬಣ್ಣ,ರುದ್ರೇಶ್,ಸಂದ್ಯಾ, ಮಂಜುರವರು ಪಾಲ್ಗೊಂಡಿದ್ದರು.