ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಹೊರಗುತ್ತಿಗೆ ದಾರರ ಅವ್ಯವಹಾರ ಹಾಗೂ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ

ದಾವಣಗೆರೆ: ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಲ್ಲಿ ಹೊರಗುತ್ತಿಗೆ ನೌಕರರಿಂದ ನಡೆಯುತ್ತಿರುವ ಅವ್ಯವಹಾರ, ಭ್ರಷ್ಟಾಚಾರವನ್ನು ಖಂಡಿಸಿ ಕರ್ನಾಟಕ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ದಾವಣಗೆರೆ ಸಮಿತಿಯಿಂದ ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, 2019-20, 2020-21ನೇ ಸಾಲಿನಲ್ಲಿ ಡಿ.ದೇವರಾಜ್ ಅರಸು ಹಿಂದುಗಳಿಂದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಹೊರಗುತ್ತಿಗೆದಾರಿಂದ ನೇಮಕಾತಿ ಆಗಿರುವ ಮೂವರು ಕಂಪ್ಯೂಟರ್ ಆಪರೇಟರ್ ಅದು ಕ್ಷೇತ್ರ ಬದಲಾವಣೆ ಮಾಡಬೇಕು. ಕಾರಣ ಇವರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ 4 ರಿಂದ 5 ಜನ ಫಲಾನುಭವಿಗಳಿಗೆ ದಾವಣಗೆರೆ ನಿಗಮದಿಂದ ಮಂಜೂರಾತಿ ನೀಡಿ ಹಣ ಬಿಡುಗಡೆ ಮಾಡಿರುತ್ತಾರೆ ಇದರಿಂದಾಗಿ ದಾವಣಗೆರೆಯ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಅಲ್ಲದೇ ರಜಾ ದಿನವಿದ್ದರೂ ನಿಗಮಕ್ಕೆ ಬಂದು ಕಡತಗಳನ್ನು ಅದಲು ಬದಲು ಮಾಡಿದ್ಧಾರೆ ಎಂದು ಕಿಡಿಕಾರಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಒಂದೇ ಗ್ರಾಮಕ್ಕೆ ಲಾಟರಿ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಅದರಲ್ಲೂ ಕೈದಾಳೆ ಗ್ರಾಮವೊಂದಕ್ಕೆ 10 ಜನ ಫಲಾನುಭವಿಗಳಿಗೆ ಮಂಜೂರಾತಿ ಹಣ ಬಿಡುಗಡೆ ಮಾಡಿದ್ದಾರೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 6 ರಿಂದ 8 ಜನ ಫಲಾನುಭವಿಗಳನ್ನು ಆಯ್ಕೆ ಮಾಡಿ ಮಂಜೂರಾತಿ ಹಣ ಬಿಡುಗಡೆ ಮಾಡಿ ಶಾಸಕರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದರು.

ಮಾತ್ರವಲ್ಲ, ಗಂಗಾ ಕಲ್ಯಾಣ ಬೋರ್ ವೆಲ್ ಗೆ ಲಾ 40 ರಿಂದ 50 ಸಾವಿರ ಪಡೆದ ನಂತರವೇ ಮಂಜೂರಾತಿ ನೀಡುತ್ತಾರೆ. ಇಲ್ಲವಾದಲ್ಲಿ ಹಣ ಕೊಟ್ಟ, ದೊಡ್ಡ ರೈತರಿಗೆ ಬೋರ್ ವೆಲ್ ಮಂಜೂರು ಮಾಡಿದ್ದಾರೆ.

ಅಲ್ಲದೇ ಒಂದೇ ಜಮೀನಿನಲ್ಲಿ 2 ಬೋರ್‍ವೆಲ್ ಹಾಕಿದ್ದು, ಇದರಲ್ಲಿ ಆಯ್ಕೆ ಸಮಿತಿ ಸದಸ್ಯರು, ಜಿಲ್ಲಾ ಪಂಚಾಯಿತಿ ಸಿಇಓ, ನಿಗಮದ ವ್ಯವಸ್ಥಾಪಕರು, ಸಿಬ್ಬಂದಿ ಭಾಗಿಯಾಗಿದ್ದು, ಈ ಕೂಡಲೇ ಹಂಗಾಮಿ ಕೆಲಸ ಮಾಡುತ್ತಿರುವ ಈ ಮೂವರನ್ನು ಕೆಲಸದಿಂದ ತೆಗೆದು ಹಾಕಬೇಕೆಂದು ಜಿಪಂ ಸಿಇಓರನ್ನು ಆಗ್ರಹಿಸಿದರು.

ಜತೆಗೆ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವನ್ನು ಕೂಡಲೇ ಜಿಲ್ಲಾ ಕಛೇರಿಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ನಾಗಪ್ಳ ಮಂಜುನಾಥ, ಸುರೇಶ್, ರೇವಪ್ಪ, ಪಾಲಾಕ್ಷಿ, ಬಸವರಾಜ್ ಗೋಶಾಲೆ, ಹೆಚ್.ಕುಬೇರಪ್ಪ, ನಾಗರಾಜ್ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!