ಯುಗಾದಿ ಶಾಪಿಂಗ್ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ ‘ಬೆಂಗಳೂರು ಉತ್ಸವ’

ಯುಗಾದಿ ಶಾಪಿಂಗ್ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ ‘ಬೆಂಗಳೂರು ಉತ್ಸವ’
ಬೆಂಗಳೂರು : ಯುಗಾದಿ ಹಬ್ಬದ ಪ್ರಯುಕ್ತ ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ‘ಬೆಂಗಳೂರು ಉತ್ಸವವನ್ನು’ ಅದ್ಧೂರಿಯಾಗಿ ಆಯೋಜಿಸಿದೆ. ಮಾರ್ಚ್ 10 ರಿಂದ ಮಾರ್ಚ್ 19ರವರೆಗೆ 10 ದಿನಗಳ ಕಾಲ ನಡೆಯಲಿರುವ ಈ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ನಟಿಯರಾದ ಸುಷ್ಮಾ ಶೆಟ್ಟಿ ಹಾಗೂ ಭೂಮಿ ಶೆಟ್ಟಿ ಶುಕ್ರವಾರ ಚಾಲನೆ ನೀಡಿದರು. ಕರ್ನಾಟಕ ಚಿತ್ರಕಲಾ ಪರಿಷತ್‌ನ ಡಾ.ಬಿ.ಎಲ್. ಶಂಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ʼಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿರುವ ಈ ʼಬೆಂಗಳೂರು ಉತ್ಸವʼ ನನ್ನ ಮೆಚ್ಚಿನ ಹಬ್ಬವೂ ಹೌದು. ಭಾರತದ ಮೂಲೆ ಮೂಲೆಗಳಿಂದ ಬಂದಿರುವ ಕರಕುಶಲ ಕರ್ಮಿಗಳ ಅಂಗಡಿ ಇಲ್ಲಿದೆ. ನಾನಾ ರೀತಿಯ ಬಟ್ಟೆ, ಕರಕುಶಲ ವಸ್ತುಗಳು, ಬೆಡ್‌ಶೀಟ್ ಸೇರಿದಂತೆ ದಿನಬಳಕೆಯ ಎಲ್ಲ ವಸ್ತುಗಳು ಇಲ್ಲಿ ಲಭ್ಯವಿದೆ. ಎಲ್ಲ ಕಲಾವಿದನಿಗೂ ನಮ್ಮೆಲ್ಲರ ಬೆಂಬಲ ಬೇಕು. ಹೀಗಾಗಿ ಮೇಳಕ್ಕೆ ಭೇಟಿ ನೀಡಿ ಅವರನ್ನು ಪ್ರೋತ್ಸಾಸೋಣʼ ಎಂದು ಭೂಮಿ ಶೆಟ್ಟಿ ನುಡಿದರು.
‘ನಿತ್ಯದ ಲೈಫ್‌ಸ್ಟೈಲ್‌ಗೆ ಅಗತ್ಯವಾಗಿರುವ ಎಲ್ಲ ಬಗೆಯ ವಸ್ತುಗಳನ್ನು ಹೊಂದಿದ ಈ ಮೇಳ ತುಂಬಾ ಚೆನ್ನಾಗಿದೆ. ಸ್ನೇಹಿತರು ಹಾಗೂ ಮನೆಮಂದಿಯೊಂದಿಗೆ ಭೇಟಿ ನೀಡಲೇಬೇಕಾದ ಸ್ಥಳವಿದುʼ ಇದು ಎಂದು ಸುಷ್ಮಾ ಶೆಟ್ಟಿ ಹೇಳಿದರು.
ಶಾಪಿಂಗ್ ಪ್ರಿಯರು ಚಿತ್ರಕಲಾ ಪರಿಷತ್ ನಲ್ಲಿ ನಡೆಯಲಿರುವ ಬೆಂಗಳೂರು ಉತ್ಸವಕ್ಕೆ ಭೇಟಿ ನೀಡಿದರೆ ವೈವಿಧ್ಯಮಯ ಉಡುಪು, ಆಭರಣ, ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಬಹುದು.
ಇಲ್ಲಿ 100ಕ್ಕೂ ಹೆಚ್ಚು ಮಳಿಗೆಗೆಳು ಇರುವುದರಿಂದ ನಿಮಗೆ ಬೇಕೆನಿಸಿದ ವಸ್ತುಗಳು ಒಂದೇ ಸೂರಿನಡಿ ದೊರೆಯುತ್ತದೆ. ದೇಶದ ವಿವಿಧ ಭಾಗಗಳ ಕರಕುಶಲಕರ್ಮಿಗಳು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಎಲ್ಲವೂ ಇಲ್ಲಿ ಲಭ್ಯವಿರುವುದರಿಂದ ನಿಮ್ಮ ಮನಸ್ಸಿಗೆ ಈ ಮೇಳ ಮುದ ನೀಡಲಿದೆ!
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಶಿವಾನಂದ ವೃತ್ತದ ಬಳಿ, ಬೆಂಗಳೂರು
ದಿನಾಂಕ-ಮಾರ್ಚ್ 10ರಿಂದ ಮಾರ್ಚ್ 19ರವರೆಗೆ.