ಬಣವೆಗೆ ಬೆಂಕಿ: ಸಾವಿರಾರು ರೂ. ನಷ್ಟ

ಬಣವೆಗೆ ಬೆಂಕಿ: ಸಾವಿರಾರು ರೂ. ನಷ್ಟ
ದಾವಣಗೆರೆ: ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಸಾವಿರಾರು ರೂ. ಮೊತ್ತದ ಮೇವು ನಷ್ಟವಾಗಿರುವ ಘಟನೆ ಚನ್ನಗಿರಿ ತಾಲ್ಲೂಕು ಬಸವಾಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಪಗಡೆ ರಾಜು ಹಾಗೂ ಪಾಪಣ್ಣ ಅವರಿಗೆ ಸೇರಿದ ಬಣವೆ ಇದಾಗಿದ್ದು, ಬೇಸಿಗೆಯಲ್ಲಿ ದನಕರುಗಳಿಗೆ ಮೇಯಿಸಲು ಸಂಗ್ರಹಿಸಿಟ್ಟುಕೊಂಡಿದ್ದ ಹುಲ್ಲು ಇದೀಗ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕದ ದಳವರು ಆಗಮಿಸಿ ಬೆಂಕಿ ನಂದಿಸಲು ಶ್ರಮಿಸಿದ್ದಾರೆ.